Advertisment

VIDEO: ನಿದ್ದೆಗಣ್ಣಿನಲ್ಲಿ ಡಿವೈಡರ್​ ​ಎಗರಿ ಟ್ರಕ್​ಗೆ ಡಿಕ್ಕಿ ಹೊಡೆದ ಕಾರು.. 6 ಜನರ ಸಾವನ್ನ ಕಣ್ಣಾರೆ ಕಂಡ ಲಾರಿ ಚಾಲಕ

author-image
AS Harshith
Updated On
VIDEO: ನಿದ್ದೆಗಣ್ಣಿನಲ್ಲಿ ಡಿವೈಡರ್​ ​ಎಗರಿ ಟ್ರಕ್​ಗೆ ಡಿಕ್ಕಿ ಹೊಡೆದ ಕಾರು.. 6 ಜನರ ಸಾವನ್ನ ಕಣ್ಣಾರೆ ಕಂಡ ಲಾರಿ ಚಾಲಕ
Advertisment
  • ಬೆಳಗ್ಗಿನ ಜಾವ 5:30ರ ವೇಳೆಗೆ ನಡೆದ ಭೀಕರ ಅಪಘಾತ
  • ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜು, ಸ್ಥಳದಲ್ಲೇ ಎಲ್ಲರ ಸಾವು
  • ಮೃತದೇಹವನ್ನು ಹೊರ ತೆಗೆಯಲು ಹರಸಾಹಸ ಪಟ್ಟ ಪೊಲೀಸರು

ಹಾಸನ: ಕಾರು ಮತ್ತು ಟ್ರಕ್​ ಭೀಕರ ಅಪಘಾತವಾದ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ನಡೆದಿದೆ. ಕಾರು ಡ್ರೈವರ್​ ನಿದ್ದೆಗಣ್ಣಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರ ಮೃತದೇಹ ಛಿದ್ರ ಛಿಧ್ರವಾಗಿದೆ.

Advertisment

ಬೆಳಗ್ಗಿನ ಜಾವ 5:30ರ ವೇಳೆ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಬಂದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಎಗರಿದೆ. ಎಗರಿದ ರಭಸಕ್ಕೆ ಟ್ರಕ್​ಗೆ ಹೋಗಿ ಗುದ್ದಿದೆ. ಮೃತರನ್ನ ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ (ಬಾಲಕ), ರಾಕೇಶ್ (ಡ್ರೈವರ್) ಎಂದು ಗುರುತಿಸಲಾಗಿದೆ.

publive-image

ಮೃತರು ಹೊಸಕೋಟೆ ತಾಲ್ಲೂಕಿನ ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು ಎಂದು ಪತ್ತೆಹಚ್ಚಲಾಗಿದೆ. ಇನ್ನು ಕಾರಿನಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರಗೆ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಇದನ್ನೂ ಓದಿ: ಮೇಕೆ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ.. ವ್ಯಾಘ್ರ ತಿಂದು ತೇಗಿದ ಮೃತದೇಹಕ್ಕಾಗಿ ಹುಡುಕಾಟ 

Advertisment

ಪೊಲಿಸರು ಮತ್ತು ಜೆಸಿಬಿ ಸಹಾಯದ ಮೂಲಕ ಕಾರಿನಲ್ಲಿದ್ದ ಮೃತದೇಹ ಹೊರ ತೆಗೆಯಲಾಗಿದೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment