ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಟ್ರಂಪ್, ಕಮಲಾ ಹ್ಯಾರಿಸ್
ಇಬ್ಬರು ನಾಯಕರು ಮುಖಾಮುಖಿ, ನಡೆದ ಚರ್ಚೆ ಏನು?
ಟ್ರಂಪ್ಗೆ ನೀವು ಸರ್ವಾಧಿಕಾರಿ ಎಂದ ಹ್ಯಾರಿಸ್
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ರಂಗು ಬಿಸಿಯಾಗಿದೆ. ಅಧ್ಯಕ್ಷ ಸ್ಥಾನದ ರೇಸ್ನಲ್ಲಿರುವ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಒಟ್ಟಿಗೆ ಲೈಬ್ ಡಿಬೆಟ್ ನಡೆಸಿದ್ದು, ಇದು ವಿಶ್ವದ ಅಚ್ಚರಿಗೆ ಕಾರಣವಾಗಿದೆ. ಮಾಜಿ ಅಧ್ಯಕ್ಷ ಟ್ರಂಪ್, ಹಾಲಿ ಉಪಾಧ್ಯಕ್ಷೆ ಇಬ್ಬರೂ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿಗಳು. ಇವರಿಬ್ಬರು ಪರಸ್ಪರ ಕೈಕುಲುಕಿ ಡಿಬೆಟ್ಗೆ ಇಳಿದಿದ್ದು ಜಗತ್ತು ಹುಬ್ಬೇರುವಂತೆ ಮಾಡಿದೆ. ಅಂದ್ಹಾಗೆ ಇವರಿಬ್ಬರ ಮಧ್ಯೆ ಗಂಭೀರ ವಾಗ್ಯುದ್ಧ ನಡೆದಿದೆ. 90 ನಿಮಿಷಗಳ ಕಾಲ ನಡೆದ ಚರ್ಚೆಯ ಕುತೂಹಲಕಾರಿ ವಿಚಾರಗಳು ಇಲ್ಲಿವೆ.
ಇದನ್ನೂ ಓದಿ:ಸಿಎಂ ಕುರ್ಚಿ ಕದನಕ್ಕೆ ಟ್ವಿಸ್ಟ್.. ಅಮೆರಿಕದಲ್ಲಿ ಡಿಕೆಶಿ, ರಾಹುಲ್ ಗಾಂಧಿ ನಡೆ ತೀವ್ರ ಕುತೂಹಲ..!
ಟ್ರಂಪ್ vs ಹ್ಯಾರಿಸ್ ಡಿಬೆಟ್..!
ಡೋನಾಲ್ಡ್ ಟ್ರಂಪ್: ಕಮಲಾ ಹ್ಯಾರಿಸ್ ಇಸ್ರೇಲ್ ದ್ವೇಷಿಸುತ್ತಾರೆ. ಅವರು ಅಧ್ಯಕ್ಷರಾದರೆ ಇನ್ನೆರಡು ವರ್ಷಗಳಲ್ಲಿ ಇಸ್ರೇಲ್ ಅಸ್ತಿತ್ವದಲ್ಲಿ ಇರಲ್ಲ. ನನ್ನ ಮಾತನ್ನು ಅವರು ವಿಭಜಿಸಲು ಬಯಸುತ್ತಾರೆ. ವಾಸ್ತವದಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸ್ತಾರೆ.
ಕಮಲಾ ಹ್ಯಾರಿಸ್: ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಹೊಂದಿದೆ. ಆದರೆ, ಯುದ್ಧವು ಕೊನೆಗೊಳ್ಳಬೇಕು. ಇದು ಬೇಗ ಮುಗಿಯಬೇಕು. ಕದನ ವಿರಾಮದ ಅಗತ್ಯ ಇದೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಟ್ರಂಪ್ ಸರ್ವಾಧಿಕಾರಿಗಳನ್ನು ಹೊಗಳುತ್ತಾರೆ, ಅವರು ಸರ್ವಾಧಿಕಾರಿ ಆಗಲು ಬಯಸುತ್ತಾರೆ. ಇದು ಎಲ್ಲರಿಗೂ ಗೊತ್ತಿದೆ.
ಡೋನಾಲ್ಡ್ ಟ್ರಂಪ್: ಕಮಲಾ ಹ್ಯಾರಿಸ್ ತಂದೆ ಕಮ್ಯುನಿಸ್ಟ್. ಅವರ ತಂದೆ ಅವರಿಗೆ ಎಡಪಂಥೀಯತೆಯನ್ನು ಚೆನ್ನಾಗಿ ಕಲಿಸಿದರು. ಪುಟಿನ್ ಕೂಡ ಅವರನ್ನು ಬೆಂಬಲಿಸ್ತಾರೆ. ವಿಶೇಷ ಅಂದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಅವರನ್ನು ನಾಯಿಯಂತೆ ಓಡಿಸಲಾಗಿದೆ.
ಕಮಲಾ ಹ್ಯಾರಿಸ್: ಜಗತ್ತು ನಿಮ್ಮನ್ನು ನೋಡಿ ನಗುತ್ತದೆ. 8 ಕೋಟಿ ಜನ ನಿಮ್ಮನ್ನು ಈ ಹಿಂದೆ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಡೆಮಾಕ್ರಟಿಕ್ ಪಕ್ಷ ಮತ್ತೆ ಸರ್ಕಾರ ರಚಿಸಲಿದೆ. ನಾವು ಸೋಲಲ್ಲ.
ಡೋನಾಲ್ಡ್ ಟ್ರಂಪ್: ಅಮೆರಿಕದ ಇತಿಹಾಸದಲ್ಲಿ ಕೆಟ್ಟ ಅಧ್ಯಕ್ಷ (ಬೈಡನ್) ಮತ್ತು ಉಪಾಧ್ಯಕ್ಷರು (ಕಮಲಾ ಹ್ಯಾರಿಸ್) ನೀವೇ. ಈಗ ಈ ಎಲ್ಲಾ ಒಳ್ಳೆಯ ಕೆಲಸಗಳು ನಡೆಯಲಿವೆ. ಮೂರೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಏಕೆ ಮಾಡಲಿಲ್ಲ? ಆರ್ಥಿಕತೆ ಕೆಟ್ಟ ಸ್ಥಿತಿಗೆ ಬಂದಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಕಮಲಾ ಹ್ಯಾರಿಸ್: ನೀವು ಆರ್ಥಿಕತೆ ಬಗ್ಗೆ ಯಾವುದೇ ಯೋಜನೆ ಹೊಂದಿಲ್ಲ. ಮಹಿಳೆಯರ ವಿಷಯಗಳನ್ನು ಮೂಲೆಗುಂಪು ಮಾಡಿದ್ದೀರಿ.
ಡೋನಾಲ್ಡ್ ಟ್ರಂಪ್: ಬೈಡೆನ್ ಸರ್ಕಾರ ಲಕ್ಷಾಂತರ ಜನರಿಗೆ ಅಕ್ರಮವಾಗಿ ಅಮೆರಿಕಕ್ಕೆ ಬರಲು ಅವಕಾಶ ಮಾಡಿಕೊಟ್ಟಿದೆ. ನನ್ನ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಜಾಪ್ರಭುತ್ವವಾದಿಗಳ ನೀತಿಗಳಿಂದಾಗಿ ನಾನು ಗುಂಡು ಹಾರಿಸಿದ್ದೇನೆ ಎಂದು ಆರೋಪಿಸಿದರು. ನನ್ನ ವಿರುದ್ಧದ ಎಲ್ಲಾ ಪ್ರಕರಣಗಳು ನಕಲಿ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ