/newsfirstlive-kannada/media/post_attachments/wp-content/uploads/2024/06/haveri-1.jpg)
ಹಾವೇರಿ: ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು 13 ಜನರು ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್​ ಈ ದುರ್ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಸಾವಿನ ಸುದ್ದಿ ಕೇಳಿ ಮೃತರ ಕುಟುಂಬಸ್ಥರು ಸ್ಥಳಕ್ಕಾಗಮಿಸಿದ್ದು, ಮೃತ ದೇಹ ಗುರುತಿಸಿದ್ದಾರೆ. ಈ ವೇಳೆ ಮೃತ ಅರುಣ್ ಸಹೋದರನ ಅಕ್ರಂದನ ಮಾತ್ರ ಮುಗಿಲುಮುಟ್ಟಿತ್ತು.
ಮೃತದೇಹ ಕಂಡು ಸಹೋದರ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಎಲ್ಲರು ಒಳಗಡೆ ಮಲಗಿದಾರೊ..ನನ್ನ ಕೈಯಲ್ಲಿ ನೋಡೊಕೆ ಆಗ್ತಾ ಇಲ್ಲ. ದೇವರು ಈ ರೀತಿ ಯಾಕ ಮಾಡಿದ್ನೊ ನಮ್ಮ ಮನೆಯೇ ನಾಶವಾಯಿತೊ ಎಂದು ಕಣ್ಣೀರು ಸುರಿಸಿದ್ದಾನೆ.
ಇದನ್ನೂ ಓದಿ: ‘ಅಪ್ಪ, ದೊಡ್ಡಪ್ಪ ಸೇರಿ ಕುಟುಂಬದಲ್ಲಿದ್ದ 16 ಜನ ಹೋಗಿದ್ವಿ..’ 13 ಮಂದಿ ತನ್ನವರ ಕಳ್ಕೊಂಡು ಬಾಲಕಿ ನರಳಾಟ..
ಎಷ್ಟೆ ಸಮಾಧಾನ ಮಾಡಿದರು ಮೃತ ಅರುಣ್ ನ ಸಹೋದರ ಕುಗ್ಗಿ ಹೋಗಿದ್ದಾನೆ. ಸ್ಥಳದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕುಟುಂಬ ಸದಸ್ಯರು ಆಗಮಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us