newsfirstkannada.com

VIDEO: ಯಾವುದೇ ಕಾರಣಕ್ಕೂ ಮೋಸ ಹೋಗ್ಬೇಡಿ; ಎಚ್ಚರಿಕೆ ಕೊಟ್ಟ ತುಕಾಲಿ ಸಂತೋಷ್​​!

Share :

Published May 27, 2024 at 6:16am

  ವೈರಲ್​ ಆದ ವಿಡಿಯೋದಲ್ಲಿ ತುಕಾಲಿ ಸಂತೋಷ್ ದಂಪತಿ​​ ಹೇಳಿದ್ದೇನು?

  ಬಿಗ್​ಬಾಸ್​ ಸೀಸನ್​ 10ರಿಂದ ಫೇಮಸ್​ ಆದ ತುಕಾಲಿ ಸಂತೋಷ್​​

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಸಂತೋಷ್​ ವಿಡಿಯೋ

ಕನ್ನಡ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳಂತೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ತುಕಾಲಿ ಸಂತೋಷ್​ ಅವರು ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿ ಇದ್ದಾರೆ.

ಇದನ್ನೂ ಓದಿ: ಬಸ್ ನಿಲ್ದಾಣ ಕಾಣೆಯಾಗಿದೆ, ಪ್ಲೀಸ್​ ಹುಡುಕಿಕೊಡಿ! ನ್ಯೂಸ್​ಫಸ್ಟ್​ಗೆ ಸಾರ್ವಜನಿಕರಿಂದ ಸ್ಪೆಷಲ್ ರಿಕ್ವೆಸ್ಟ್

ಹೌದು, ಕಾಮಿಡಿ ರಿಯಾಲಿಟಿ ಶೋ ಹಾಗೂ ಬಿಗ್​ಬಾಸ್‌ ಮೂಲಕ ಸಖತ್​ ಫೇಮಸ್ ಆಗಿದ್ದ ತುಕಾಲಿ ಸಂತೋಷ್​ ದಂಪತಿ ಅಭಿಮಾನಿಗಳಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡು ತುಕಾಲಿ ಸಂತೋಷ್ ಹಾಗೂ ಮಾನಸ ಯಾರೂ ಕೂಡ ಮೋಸ ಹೋಗಬೇಡಿ ಅಂತ ಹೇಳಿಕೊಂಡಿದ್ದಾರೆ.

ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಏನಿದೆ?

ನನ್ನ ಮಾನಸಾ ಸಂತೋಷ್ ಎನ್ನುವ ಅಫಿಷಿಯಲ್ ಇನ್‌ಸ್ಟಾಗ್ರಾಮ್ ಪೇಜ್ ಹ್ಯಾಕ್ ಆಗಿದೆ. ಆ ಅಕೌಂಟ್‌ನಿಂದ ನೀವು 40 ಸಾವಿರ ರೂಪಾಯಿ ಇನ್ವೆಸ್ಟ್ ಮಾಡಿ, ನಿಮಗೆ ವಾಪಸ್ 4.90 ಲಕ್ಷ ರೂ. ವಾಪಸ್ ಕೊಡ್ತಿವಿ ಅಂತ ಮೇಸೆಜ್ ಕಳಿಸ್ತಾ ಇದ್ದಾರೆ. ದಯವಿಟ್ಟು ಯಾರೂ ಕೂಡ ಅದನ್ನು ನಂಬಬಾರದು. ನಂಬಿ, ದುಡ್ಡು ಹಾಕಿ ಕಳೆದುಕೊಳ್ಳಬೇಡಿ. ನನ್ನ ಅಕೌಂಟ್ ಹ್ಯಾಕ್ ಆಗಿರುವುದರಿಂದ ಬೇರೆ ಯಾರೋ ರೀತಿ ಮೇಸೆಜ್ ಹಾಕುತ್ತಿದ್ದಾರೆ. ಇನ್ನು, ತುಕಾಲಿ ಸಂತೋಷ್​ ಮಾತಾಡಿ, ಈ ಅಕೌಂಟ್‌ನಿಂದ ಮೇಸೆಜ್ ಹಾಕುವುದು ಮಾತ್ರವಲ್ಲದೆ, ಪೋಸ್ಟ್‌ಗಳನ್ನು ಕೂಡ ಹಾಕುತ್ತಿದ್ದಾರೆ. ನನಗೆ 4.90 ಲಕ್ಷ ರೂಪಾಯಿ ಬಂದಿದೆ ಎಂದು ಸುಳ್ಳು ಪೋಸ್ಟ್‌ಗಳನ್ನು ಕೂಡ ಶೇರ್ ಮಾಡುತ್ತಿದ್ದಾರೆ. ದಯವಿಟ್ಟು ಆ ಅಕೌಂಟ್‌ನಿಂದ ಏನಾದರೂ ಮೇಸೆಜ್ ಬಂದರೆ, ಯಾವುದಕ್ಕೂ ರಿಪ್ಲೈ ಮಾಡುವುದಕ್ಕೆ ಹೋಗಬೇಡಿ. ಇದೇ ರೀತಿ ನಾನು ಬಿಗ್​ಬಾಸ್‌ ಶೋನಿಂದ ಹೊರಗೆ ಬಂದಾಗ ನನ್ನ ಇನ್‌ಸ್ಟಾಗ್ರಾಮ್ ಅಕೌಂಟ್ ಕೂಡ ಹ್ಯಾಕ್ ಆಗಿತ್ತು. ಮತ್ತೆ ನಾನು ಹೊಸದಾಗಿ ಅಕೌಂಟ್ ಕ್ರಿಯೆಟ್ ಮಾಡಿಕೊಂಡೆ. ಈಗ ಮಾನಸಾಳ ಪೇಜ್ ಕೂಡ ಹ್ಯಾಕ್ ಆಗಿದೆ. ದಯವಿಟ್ಟು ಯಾರೂ ಕೂಡ ಆ ಪೇಜ್‌ನಿಂದ ಬರುವ ಮೇಸೆಜ್‌ಗಳಿಗೆ ರಿಯಾಕ್ಟ್ ಮಾಡುವುದಕ್ಕೆ ಹೋಗಬೇಡಿ. ಆ ಪೇಜ್‌ನ ಫಾಲೋ ಕೂಡ ಮಾಡಬೇಡಿ. ಅವರು ಲಿಂಕ್​ಗಳನ್ನು ಕಳಿಸುತ್ತಾರೆ. ಹೀಗಾಗಿ ಆ ಲಿಂಕ್​ ಅನ್ನು ಓಪನ್​ ಮಾಡಬೇಡಿ.

ಇದನ್ನೂ ಓದಿ: ವಾಯ್ಸ್​ ಬದಲಿಸೋ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ.. ಅನಕ್ಷರಸ್ಥನ ಕೃತ್ಯಕ್ಕೆ ಪೊಲೀಸರೇ ಶಾಕ್!

ಸದ್ಯ ತಮ್ಮ ಅಕೌಂಟ್​ ಹ್ಯಾಕ್​ ಆಗಿರುವ ಬಗ್ಗೆ ಅಭಿಮಾನಿಗಳಿಗೆ ಜಾಗೃತಿ ಮೂಡಿಸಿದ್ದಾರೆ. ಮಾನಸ ಅವರು ಮೆಸೇಜ್​ ಮಾಡಿದ್ದಾರೆ ಅಂತ ಕೆಲವರು ದುಡ್ಡು ಹಾಕಬಹುದು. ಹೀಗಾಗಿ ತುಕಾಲಿ ಸಂತೋಷ್​ ಅವರ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮಾಡಿ ಮೋಸ ಹೋಗಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಇಂತಹ ಸ್ಟಾರ್​​ ಅಕೌಂಟ್​ಗಳೇ ಅವರಿಗೆ ಟಾರ್ಗೆಟ್ ಮಾಡುತ್ತಾರೆ. ಎಚ್ಚರಿದಿಂದಿರಿ ಅಂತ ಕಾಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಯಾವುದೇ ಕಾರಣಕ್ಕೂ ಮೋಸ ಹೋಗ್ಬೇಡಿ; ಎಚ್ಚರಿಕೆ ಕೊಟ್ಟ ತುಕಾಲಿ ಸಂತೋಷ್​​!

https://newsfirstlive.com/wp-content/uploads/2024/05/tukali-santhu1.jpg

Load More