newsfirstkannada.com

BIGG BOSS: ಏನೋ ಮಾಡಲು ಹೋಗಿ ತಗ್ಲಾಕೊಂಡ ತುಕಾಲಿ ಸಂತೋಷ್; ಪ್ಲಾನ್‌ಗಳೆಲ್ಲಾ ಉಲ್ಟಾ ಪಲ್ಟಾ!

Share :

Published January 20, 2024 at 4:39pm

Update January 20, 2024 at 4:22pm

  ಏನೋ ಮಾಡಲು ಹೋಗಿ ಇನ್ನೇನು ಮಾಡಿಬಿಟ್ಟ ತುಕಾಲಿ ಸಂತೋಷ್

  ತುಕಾಲಿ ಏನೇ ಸ್ಟಾಟರ್ಜಿ ಮಾಡಿದ್ರೂ ಮನೆ ಮಂದಿಗೆ ಗೊತ್ತಾಗಿ ಬಿಡುತ್ತೆ

  ತುಕಾಲಿ ಮಾಡಿದ್ದ ಪ್ಲಾನ್​ ಬಿಗ್​ಬಾಸ್​ ಮನೆಯಲ್ಲಿ ಏನೂ ವರ್ಕೌಟ್ ಆಗಲ್ಲ

ತುಕಾಲಿ ಸಂತೋಷ್​ ಯಾವ ವಾರ ಯಾರ ಜೊತೆ ಹೇಗೆ ಇರ್ತಾರೆ ಅನ್ನೋದೇ ಗೊತ್ತಾಗೋದಿಲ್ಲ ಅನ್ನೋದು ಬಿಗ್​ಬಾಸ್​ ಸ್ಪರ್ಧಿಗಳ ಅಭಿಪ್ರಾಯ. ಇನ್ನೂ ತುಕಾಲಿ ಏನೇ ಸ್ಟಾಟರ್ಜಿ ಮಾಡಿದ್ರೂ ಅದು ಮನೆಯವರಿಗೆ ಈಸಿಯಾಗಿ ಗೊತ್ತಾಗಿಬಿಡತ್ತೆ. ಕೆಲವೊಮ್ಮೆ ಅವರು ಮಾಡೋ ಸ್ಟಾಟರ್ಜಿ ವರ್ಕ್ ಆದ್ರೆ ಇನ್ನೂ ಕೆಲವು ಫ್ಲಾಪ್ ಆಗುತ್ತೆ. ಅಂತೆಯೇ ನಿನ್ನೆ ಬಿಗ್​ಬಾಸ್​ ಮನೆ 1 ಲಕ್ಷ ಗಳಿಸಲು ಮೈಕಲ್ ಕ್ಯಾಪ್ಟನ್ ಆದಾಗ ಕೊಟ್ಟ ಟಾಸ್ಕ್ ಕೊಟ್ಟಿದ್ದರು. ಅದರಲ್ಲಿ ಸಂಗೀತಾ ಭಾಗ್ಯಶ್ರೀ ಪರ ಆಡಿ ಒಂದೇ ಒಂದು ರಿಪೀಸ್​ ಅನ್ನು ಬೀಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಆ ಗೇಮ್​ನಲ್ಲಿ ನಮ್ರತಾ ಅಭೂತಪೂರ್ವ ಪ್ರದರ್ಶನ ಕೊಟ್ಟು ಇಡೀ ಮನೆಗೆ ಶಾಕ್ ಕೊಟ್ಟಿದ್ದಾರೆ. ಅದರಲ್ಲೂ ತುಕಾಲಿ ಮಾಡಿದ್ದ ಪ್ಲಾನ್​ನ ತಲೆ ಕೆಳಗಾಗುವಂತೆ ಮಾಡಿದ್ದಾರೆ.

ನಿನ್ನೆ ಕೊಟ್ಟಿದ್ದ ಟಾಸ್ಕ್​ನ 12 ನಿಮಿಷದಲ್ಲಿ ಮನೆ ಮುಗಿಸಬೇಕಿತ್ತು. ಈ ರಿಪೀಸ್ ಪಟ್ಟಿ ಗೇಮ್​ ಒಟ್ಟು 3 ಹಂತದಲ್ಲಿ ನಡೆದಿತ್ತು. ಮೂರು ಸ್ಪರ್ಧಿಗಳು ಈ ಗೇಮ್ ಆಡಬೇಕಿತ್ತು. ವಾದ ಪ್ರತಿವಾದಗಳು ಮುಗಿದ ನಂತರ ನಮ್ರತಾ, ತುಕಾಲಿ ಹಾಗೂ ವಿನಯ್ ಈ ಗೇಮ್ ಆಡಬೇಕು ಎಂದು ಮನೆಯವರು ಒಮ್ಮತದಿಂದ ತೀರ್ಮಾನ ಮಾಡಿದ್ರು. ಆದ್ರೆ ಗೇಮ್​ನ ಮೇಜರ್ ಟ್ವಿಸ್ಟ್ ಏನಂದ್ರೆ ಮೊದಲು ಹೋಗೋ ಸ್ಪರ್ಧಿಗೆ ಸಖತ್ ರಿಸ್ಕ್ ಇತ್ತು. ರಿಪೀಸ್ ಪಟ್ಟಿ ಮೇಲೆ ಬ್ಯಾಲೆನ್ಸ್ ಮಾಡ್ತಾ ಚಿಕ್ಕ ಪಟ್ಟಿಗಳನ್ನು ತಲೆಗೆ ಕಟ್ಟಿದ್ದ ಬಾಲ್​ನಿಂದ ಬೀಳಿಸಬೇಕಿತ್ತು. ಆದ್ರೆ ಮೂರು ಸ್ಪರ್ಧಿಗಳ ಪೈಕಿ ಯಾರೊಬ್ಬರು ಮೊದಲಿಗೆ ಹೋಗಲು ರೆಡಿ ಇರಲಿಲ್ಲ. ತುಕಾಲಿ ಅಂತೂ ಬೆಡ್​ರೂಂ ಬಳಿ ನಾನು ಆಟ ಆಡ್ತೀನಿ. ಮೊದಲು ಅಥವಾ ಎರಡನೇಯದ್ದಾಗಿ ಹೋಗೋದಿಲ್ಲ ಅಂತ ಕುಳಿತರು. ನಮ್ರತಾ ಹಾಗೂ ವಿನಯ್ ಕೂಡ ಮೊದಲು ಆಟ ಆಡಲು ರೆಡಿ ಇರಲಿಲ್ಲ.

ಇದನ್ನು ಓದಿ: Bigg Boss: ಈ ವಾರ ಔಟ್ ಯಾರು? ಎಲಿಮಿನೇಷನ್‌ಗೂ ಮುನ್ನ ಕಿತ್ತಾಡಿಕೊಂಡ ಕಾರ್ತಿಕ್‌, ನಮ್ರತಾ; ಕಾರಣವೇನು?

ಈ ಆಟವನ್ನು ವಿನಯ್ ಅಥವಾ ನಮ್ರತಾ ಮೊದಲಿಗೆ ಆಟವಾಡಿ ಸೋತರೆ ಅವರ ಮೇಲೆ ಬರುತ್ತದೆ ಎಂದು ಪ್ಲಾನ್ ಮಾಡಿಕೊಂಡಿದ್ರು ಅನಿಸುತ್ತೆ. ಆದ್ರೆ ಸ್ವಲ್ಪ ಮಾತುಕತೆ ನಂತರ ನಮ್ರತಾ ತಾವೇ ಮೊದಲು ಹೋಗಲು ನಿರ್ಧಾರ ಮಾಡಿದ್ರು. ಅಂತೆಯೇ ಮೊದಲು ಹೋಗಿ ಬ್ಲಾಕ್ ಬಸ್ಟರ್ ಪರ್ಫಾರ್ಮೆನ್ಸ್ ಕೊಟ್ಟು ಬಂದರು. ಯಾರು ಕೂಡ ನಮ್ರತಾ ಅಷ್ಟು ಬೇಗ ಆಟ ಮುಗಿಸುತ್ತಾರೆ. ಅಷ್ಟು ನೀಟಾಗಿ ಆಟ ಆಡ್ತಾರೆ ಎಂದುಕೊಂಡಿರಲಿಲ್ಲ. ಈ ಆಟ ಸೋತು ಸೋಲನ್ನು ನಮ್ರತಾ, ವಿನಯ್, ಸಂಗೀತಾ ಹಾಗೂ ಪ್ರತಾಪ್​ ಮೇಲೆ ಹೊರಿಸಬೇಕು ಎಂದುಕೊಂಡಿದ್ದ ತುಕಾಲಿ ಪ್ಲಾನ್​ ಫುಲ್​ ಫ್ಲಾಪ್​ ಆಯ್ತು. ಆದ್ರೆ ತುಕಾಲಿ ಪ್ಲಾನ್ ಫ್ಲಾಪ್ ಆದ್ರೂ ಸುಮ್ಮನೇ ಕೂರಲಿಲ್ಲ. ಬದಲಿಗೆ ಸಂಗೀತಾ ಮಾಡಲಾಗದ ಗೇಮ್​ನ ನಮ್ರತಾ ಎಷ್ಟು ಚೆನ್ನಾಗಿ ಆಡಿದಳು ನೋಡಿದ್ರಾ ಎಂದು ಸಂಗೀತಾ ಸೋಲನ್ನು ಪದೇ ಪದೇ ನೆನಪು ಮಾಡುತ್ತಿದ್ದರು. ಒಟ್ಟಿನಲ್ಲಿ ತುಕಾಲಿ ಸಂತೋಷ್ ನಿನ್ನೆ ಏನೋ ಮಾಡಲು ಹೋಗಿ ಮತ್ತೇನೇನೋ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಏನೋ ಮಾಡಲು ಹೋಗಿ ತಗ್ಲಾಕೊಂಡ ತುಕಾಲಿ ಸಂತೋಷ್; ಪ್ಲಾನ್‌ಗಳೆಲ್ಲಾ ಉಲ್ಟಾ ಪಲ್ಟಾ!

https://newsfirstlive.com/wp-content/uploads/2024/01/tukali-5.jpg

Load More