Advertisment

ಹುಡುಗರೇ..‘ಮದ್ವೆ ಆಗಿಲ್ಲ’ ಅಂತಾ ಮೋಸ ಹೋಗಬೇಡಿ.. 3 ವರ್ಷದಲ್ಲಿ 5 ಮದ್ವೆಯಾದ ಹೆಣ್ಣಿನ ಸ್ಟೋರಿ ಓದಿ, ಎಚ್ಚೆತ್ತುಕೊಳ್ಳಿ!

author-image
Veena Gangani
Updated On
ಅರ್ಜೆಂಟಲ್ಲಿ ಮದುವೆ ಆಗೋರೆ ಹುಷಾರ್​.. ಸಿಂಗಲ್​ ಹುಡಗರೇ ಈ ಆಂಟಿಯ ಟಾರ್ಗೆಟ್​
Advertisment
  • ರಾಜ್ಯದ ಹಲವೆಡೆ ಹಲವರನ್ನು ಯಾಮಾರಿಸಿದ್ದ ತಂಡ ಕೊನೆಗೂ ಅಂದರ್
  • ಮದುವೆ ವಯಸ್ಸು ಮೀರಿದ ಯುವಕರೇ ದೋಖಾ ಗ್ಯಾಂಗ್​ನ ಟಾರ್ಗೆಟ್
  • ಮದುವೆಯಾದ ಎರಡು ದಿನದ ಬಳಿಕ ತವರು ಮನೆಗೆ ಹೋಗಿದ್ದ ಮಹಿಳೆ

ತುಮಕೂರು: ಅದೆಷ್ಟೋ ಯುವಕರು ‘ನಮಗೊಂದು ಹೆಣ್ಣು ಕರುಣಿಸು ದೇವರೇ’ ಎಂದು ಬೇಡಿಕೊಳ್ಳುತ್ತಾರೆ. ಮದುವೆಯ ವಯಸ್ಸು ಮೀರುತ್ತೆ ಎಂದು ಯಾವುದೋ ಹುಡುಗಿ ಸಿಕ್ಕಿಬಿಟ್ಟಳು ಎಂದು ಒಪ್ಪಿಕೊಳ್ಳುವ ಮುನ್ನ ಎಚ್ಚರ ಎಚ್ಚರ! ಮದುವೆ ಆಲೋಚನೆಯಲ್ಲಿರೋ ಅವಿವಾಹಿತರು ಓದಲೇಬೇಕಾದ ಸ್ಟೋರಿ ಇದು!

Advertisment

ಇದನ್ನೂ ಓದಿ: ವಯನಾಡಿನಲ್ಲಿ ಮತ್ತೆ ಮಹಾಮಳೆ ಭಯ.. ಕೇರಳಕ್ಕೆ ಭಾರತೀಯ ಹವಾಮಾನ ಇಲಾಖೆ ಭಾರೀ ಎಚ್ಚರಿಕೆ!

ಕಲ್ಪತರು ನಾಡು ತುಮಕೂರಲ್ಲಿ ಮ್ಯಾರೇಜ್ ದೋಖಾ ಕಂಪನಿಯೊಂದು ಪತ್ತೆಯಾಗಿದೆ. ಎಂಟು ಜನ ಬರ್ತಾರೆ, ಹೆಣ್ಣು ತೋರಿಸ್ತಾರೆ, ಮದುವೆಯೂ ಮಾಡಿಸ್ತಾರೆ. ಮದುವೆಯಾದ ನಾಲ್ಕೇ ದಿನಕ್ಕೆ ಹಣ, ಒಡವೆಯನ್ನೆಲ್ಲ ಎತ್ತಿಕೊಂಡು ಪರಾರಿ ಆಗ್ತಾರೆ. ಮದುವೆ ಹೆಸರಲ್ಲಿ ದೋಖಾ ಮಾಡುತ್ತಿದ್ದ ತಂಡವನ್ನ ಪೊಲೀಸರು ಜೈಲಿಗಟ್ಟಿದ್ದಾರೆ.

publive-image

ಏನಿದು ಪ್ರಕರಣ..?

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಈ ಮೋಸ ನಡೆದಿದೆ. ಗ್ರಾಮದ ಪಾಲಾಕ್ಷಯ್ಯ ಅನ್ನೋರ ಮಗ ದಯಾನಂದಮೂರ್ತಿಗೆ 37 ವರ್ಷ ಆಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ದಯಾನಂದಮೂರ್ತಿಗೆ ಹೆಣ್ಣು ಹುಡುಕುತ್ತಿತ್ತು. ನೂರಾರು ಹೆಣ್ಣು ಹುಡುಕಿದರೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಪಾಲಾಕ್ಷಯ್ಯ ಅವರು ಹತ್ತಾರು ಮದುವೆ ಬ್ರೋಕರ್​ಗಳ ಮೂಲಕ ಹೆಣ್ಣು ಹುಡುಕಿಸಿದ್ದರು.

Advertisment

publive-image

ಆಗ ಕುಷ್ಟಗಿ ಮೂಲದ ಬಸವರಾಜು ಮೂಲಕ ಹುಬ್ಬಳಿಯ ಲಕ್ಷ್ಮಿ ಎಂಬಾಕೆಯ ಪರಿಚ ಆಗಿತ್ತು. ಲಕ್ಷ್ಮಿ ಮದುವೆ ಬ್ರೋಕರ್‌ ಕೆಲಸ ಮಾಡುತ್ತಿದ್ದರು. ಇದೇ ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಪಾಲಾಕ್ಷಯ್ಯ ಕೇಳಿಕೊಂಡಿದ್ದ. ಇವರ ಪರಿಸ್ಥಿತಿ ಕಣ್ಣಾರೆ ಕಂಡಿದ್ದ ಲಕ್ಷ್ಮೀ ಮೋಸ ಮಾಡುವ ತೀರ್ಮಾನ ಮಾಡಿದ್ದಳಂತೆ. ಹುಬ್ಬಳ್ಳಿಯಲ್ಲಿ ಒಬ್ಬಳು ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ, ನೀವೇ ಮದುವೆ ಮಾಡಿಕೊಳ್ಳಬೇಕೆಂದು ಲಕ್ಷ್ಮಿ ಸುಳ್ಳು ಹೇಳಿದ್ದಳು. ಕೋಮಲಾ ಎಂಬ ಹೆಸರಿನಲ್ಲಿ ಹುಡುಗಿಯ ಫೋಟೋವನ್ನು ಲಕ್ಷ್ಮಿ ಕಳುಹಿಸಿದ್ದಳು. ಬಳಿಕ ಲಕ್ಷ್ಮೀ ಆ ಹುಡುಗಿಯನ್ನೇ ಗಂಡನ ಮನೆಗೆ ಕರೆದುಕೊಂಡು ಬಂದಿದ್ದಳು. ಆಕೆಯ ಜೊತೆಗೆ ಸಂಬಂಧಿಕರು ಎಂದು ಹೇಳಿಕೊಂಡು ಐದಾರು ಜನ ಬಂದಿದ್ದರು.

ಇದನ್ನೂ ಓದಿ:ನೈಟ್ ಡ್ಯೂಟಿ ವೈದ್ಯೆಗೆ ರೇಪ್‌ ಆದ್ರೆ ಇನ್ನೆಲ್ಲಿ ರಕ್ಷಣೆ; ಸಿಡಿದೆದ್ದ ಆಶಿಕಾ ರಂಗನಾಥ್; ಹೇಳಿದ್ದೇನು?

ಕಳೆದ ವರ್ಷ ನವೆಂಬರ್‌ 11 ರಂದು ನಕಲಿ ಕುಟುಂಬ ಬಂದಿತ್ತು. ಆ ದಿನವೇ ಎರಡೂ ಕುಟುಂಬದ ಜೊತೆಗೆ ಮದುವೆ ಮಾತುಕತೆ ನಡೆಸಿದ್ದರು. ಮರುದಿನ ಮುಂಜಾನೆ ದಿಢೀರ್‌ ಅಂತ ಗ್ರಾಮದ ದೇವಸ್ಥಾನವೊಂದರಲ್ಲಿ ಮದುವೆ ಮಾಡಿ ಮುಗಿಸಿದ್ರು. ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದೆ ಮುಂದೆ ಯೋಚಿಸದೇ ಪಾಲಾಕ್ಷಯ್ಯ ಮಗನಿಗೆ ಮದುವೆ ಮಾಡಿಸಿಬಿಟ್ಟಿದ್ದ. ಈ ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನ ಸೇರಿದ್ದರು. ಮದುವೆಯ ಸಮಯದಲ್ಲಿ ಪಾಲಾಕ್ಷಯ್ಯ ಕುಟುಂಬ ಹೆಣ್ಣಿಗೆ 25 ಗ್ರಾಂ ಚಿನ್ನಾಭರಣ, ತಾಳಿ, ಕಿವಿಗೆ ಓಲೆ ನೀಡಿದ್ದರು. ಹೆಣ್ಣು ತೋರಿಸಿದ ಬ್ರೋಕರ್‌ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು.

Advertisment

publive-image

ಮದುವೆ ಮುಗಿದ ಎರಡು ದಿನದ ನಂತರ ಸಂಪ್ರದಾಯದ ಕಾರಣ ನೀಡಿ ಯುವತಿ ಜೊತೆಗೆ ಹಣ-ಚಿನ್ನದ ಒಡವೆ ಸಹಿತ ಕರೆದುಕೊಂಡು ಹೋಗಿದ್ದರು. ವಾರ ಕಳೆದರೂ ಸೊಸೆ ವಾಪಸ್‌ ಬಾರದಿದ್ದಕ್ಕೆ ಆತಂಕಗೊಂಡ ಪಾಲಾಕ್ಷಯ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದ್ದಾಗ ಸತ್ಯ ಆಚೆ ಬಂದಿದೆ.

ನಡೆದದ್ದು ನಕಲಿ ಮದುವೆ, ಬಂದವರು ದೋಖಾ ಗಿರಾಕಿಗಳು ಎಂಬ ವಿಚಾರ ಗೊತ್ತಾಗಿದೆ. ಮತ್ತೆ ವಾಪಸ್‌ ಗುಬ್ಬಿಗೆ ಬಂದ ಪಾಲಾಕ್ಷಯ್ಯ ಎಲ್ಲರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ನಿರಂತರ ತನಿಖೆ ನಡೆಸಿದ್ದರು. ಒಂದು ವರ್ಷದಿಂದ ತಲೆ ಮರೆಸಿಕೊಂಡಿದ್ದ ನಾಲ್ವರನ್ನು ಮಹಾರಾಷ್ಟ್ರ, ಹುಬ್ಬಳ್ಳಿ ಸೇರಿದಂತೆ ಹಲವು ಕಡೆ ಶೋಧ ನಡೆಸಿ ಪೊಲೀಸರು ಬಂಧಿಸಿದ್ದಾರೆ.  ಪಾತ್ರಧಾರಿಗಳಾದ ಚಿಕ್ಕಪ್ಪ ಸಿದ್ದಪ್ಪ , ಚಿಕ್ಕಮ್ಮ ಲಕ್ಷ್ಮೀಬಾಯಿ, ಬ್ರೋಕರ್ ಲಕ್ಷ್ಮಿ ಬಂಧಿತ ಆರೋಪಿಗಳಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment