newsfirstkannada.com

ಕಾಂಗ್ರೆಸ್​ ಅಭ್ಯರ್ಥಿಗೆ ಬಿಗ್ ಶಾಕ್​.. ಬೆಂಗಳೂರಿಂದ ಬಂದು ತುಮಕೂರಲ್ಲಿ ಗೆದ್ದ ವಿ.ಸೋಮಣ್ಣ

Share :

Published June 4, 2024 at 1:44pm

Update June 4, 2024 at 2:01pm

    ಸೋಮಣ್ಣಗೆ ರಾಜಕೀಯ ಪುನರ್​​ಜನ್ಮ ನೀಡಿದ ಕಲ್ಪತರುನಾಡು

    ಎರಡೆರಡು ಸೋಲಿನ ನೋವನ್ನ ಮರೆಸಿದ ತುಮಕೂರಿನ ಜನರು

    ಸೋಮಣ್ಣ ಎಷ್ಟು ಲಕ್ಷ ಮತಗಳ ಮುನ್ನಡೆಯಿಂದ ಗೆಲುವು ಪಡೆದ್ರು?

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ಬಿದ್ದಾ ಜಿದ್ದಿನ ಪೈಪೋಟಿಯಲ್ಲಿ ಕೊನೆಗೂ ವಿ.ಸೋಮಣ್ಣ ಅವರು ವಿಜಯ ಪತಾಕೆ ಹಾರಿಸಿದ್ದಾರೆ. ಇನ್ನೇನು ಅಧಿಕೃತವಾದ ಘೋಷಣೆಯೊಂದೇ ಬಾಕಿ ಇದೆ. ಈ ಮೂಲಕ ಹೊರಗಿನಿಂದ ಬಂದು ಕಲ್ಪತರು ನಾಡನ್ನು ಗೆದ್ದು ವಿ.ಸೋಮಣ್ಣ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿ. ಸೋಮಣ್ಣ ಸ್ಪರ್ಧೆ ಮಾಡಿದ್ದರೇ, ಇತ್ತ ಕಾಂಗ್ರೆಸ್​ನಿಂದ ಮಾಜಿ ಸಂಸದ ಮುದ್ದಹನುಮೇಗೌಡ ಕಣಕ್ಕಿಳಿದಿದ್ದರು. ಮತ ಎಣಿಕೆ ಆರಂಭದಿಂದ ಮುನ್ನಡೆ ಕಾಯ್ದುಕೊಂಡು ಬಂದ ವಿ.ಸೋಮಣ್ಣ ಅವರು ಕೊನೆಗೂ ಇಯಭೇರಿ ಬಾರಿಸಿದ್ದಾರೆ. 6,21,145 ಮತಗಳನ್ನು ಪಡೆಯುವ ಮೂಲಕ ಸೋಮಣ್ಣ 1,43,932 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಕಾಂಗ್ರೆಸ್​​ ಅಭ್ಯರ್ಥಿ ಮುದ್ದಹನುಮೇಗೌಡ 4,77,213 ಮತಗಳು ಪಡೆದು ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ವಿ ಸೋಮಣ್ಣ ಅವರು ಸತತ 18ನೇ ಸುತ್ತಿನಲ್ಲೂ ಮುನ್ನಡೆಯನ್ನು ಕಾಯ್ದುಕೊಂಡು ಗೆಲುವಿನ ನಗೆ ಬೀರಿದ್ದಾರೆ. ಸದ್ಯ ಸೋಮಣ್ಣ ಗೆದ್ದಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

ಇದನ್ನೂ ಓದಿ: ಜೈಲಿಂದಲೇ ಸ್ಪರ್ಧಿಸಿ ಲೀಡ್​ನಲ್ಲಿರೋ ಅಮೃತ್ ಪಾಲ್ ಸಿಂಗ್.. ಯಾವ ಕ್ಷೇತ್ರ?

ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಅವರಿಗೆ ಟಿಕೆಟ್ ನೀಡದೇ ವಿ.ಸೋಮಣ್ಣ ಅವರಿಗೆ ಟಿಕೆಟ್​ ನೀಡಿದ್ದಕ್ಕೆ ಪಕ್ಷದವರೇ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಛಲ ಬೀಡದೇ ಸ್ಪರ್ಧೆ ಮಾಡಿದ ಅವರು ಸದ್ಯ ಮತ ಎಣಿಕೆಯಲ್ಲಿ ಗೆಲುವು ಪಡೆದಿದ್ದಾರೆ. ಆದರೆ ಗೆಲ್ಲುವ ಅಭ್ಯರ್ಥಿ ಎಂದು ಹೇಳಲಾಗಿದ್ದ ಕಾಂಗ್ರೆಸ್​ ಅಭ್ಯರ್ಥಿ ಮುದ್ದಹನುಮೇಗೌಡ ಭಾರಿ ಹಿನ್ನಡೆ ಅನುಭವಿಸುವ ಮೂಲಕ ಸೋತಿದ್ದಾರೆ. ಇನ್ನು ವಿ.ಸೋಮಣ್ಣ ಅವರು ಹೊರಗಿನಿಂದ ಬಂದು ತುಮಕೂರಿನಲ್ಲಿ ಗೆದ್ದು ಕಲ್ಪತರು ನಾಡಿನ ಇತಿಹಾಸವನ್ನೇ ಉಲ್ಟಾ ಮಾಡಿದ್ದಾರೆ. ಹೀಗಾಗಿ ತುಮಕೂರು ಕ್ಷೇತ್ರ ಸೋಮಣ್ಣ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿದಂತೆ ಆಗಿದೆ. ಹೊರಗಿನವರು ಎನ್ನುವ ಕೂಗಿನ ಮಧ್ಯೆ ಲೋಕಸಭಾ ಎಲೆಕ್ಷನ್​ನಲ್ಲಿ ಭರ್ಜರಿಯಾಗಿ ಸೋಮಣ್ಣ ದೊಡ್ಡ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಅಭ್ಯರ್ಥಿಗೆ ಬಿಗ್ ಶಾಕ್​.. ಬೆಂಗಳೂರಿಂದ ಬಂದು ತುಮಕೂರಲ್ಲಿ ಗೆದ್ದ ವಿ.ಸೋಮಣ್ಣ

https://newsfirstlive.com/wp-content/uploads/2023/06/BJP_SOMANNA.jpg

Load More