newsfirstkannada.com

VIDEO: ‘ಕಾಲ್ ಬಂದಿದ್ದೇ ಬೆಳಗ್ಗೆ 11 ಗಂಟೆಗೆ’- ಘಟಾನುಘಟಿಗಳ ಮಧ್ಯೆ ಸೋಮಣ್ಣಗೆ ಖುಲಾಯಿಸಿದ ಅದೃಷ್ಟ; ಹೇಗೆ ಗೊತ್ತಾ?

Share :

Published June 9, 2024 at 2:22pm

    ಪ್ರಧಾನಿ ಮನೆಯಿಂದ ವಿ. ಸೋಮಣ್ಣ ಅವರಿಗೆ ದಿಢೀರ್ ಆಹ್ವಾನ

    ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿಗೆ ಕೈ ತಪ್ಪಿದ ಅವಕಾಶ

    ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ

ನವದೆಹಲಿ: ನರೇಂದ್ರ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಯಾರು ಕೇಂದ್ರ ಸಚಿವರಾಗುತ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಕರ್ನಾಟಕದಿಂದ ಐವರಿಗೆ ಈ ಬಾರಿ ಕೇಂದ್ರ ಸಚಿವ ಸ್ಥಾನ ನೀಡಲಾಗುತ್ತಿದೆ. ಅಚ್ಚರಿ ಎಂಬಂತೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾದ ವಿ.ಸೋಮಣ್ಣ ಅವರಿಗೆ ಅದೃಷ್ಟ ಖುಲಾಯಿಸಿದೆ.

ಇದನ್ನೂ ಓದಿ: ModiCabinet: ಮೋದಿ ಕ್ಯಾಬಿನೆಟ್‌ನಲ್ಲಿ ಯಾರಿಗೆಲ್ಲಾ ಸ್ಥಾನ? ನೂತನ ಕೇಂದ್ರ ಸಚಿವರ ಪಟ್ಟಿ ಇಲ್ಲಿದೆ 

ಕೇಂದ್ರ ಸಚಿವರಾಗುವ ನಾಯಕರಿಗೆ ಪ್ರಧಾನಿ ನಿವಾಸದಲ್ಲಿ ಇಂದು ಸಭೆ ನಡೆಸಲಾಯಿತು. ಈ ಸಭೆಯಲ್ಲಿ ತುಮಕೂರು ಸಂಸದ ವಿ. ಸೋಮಣ್ಣ ಅವರು ಭಾಗಿಯಾಗಿದ್ದರು. ಮೋದಿ ಮನೆಯ ಚಹಾಕೂಟದಲ್ಲಿ ಭಾಗಿಯಾಗಿದ್ದ ಸೋಮಣ್ಣ ಅವರಿಗೆ ಕೇಂದ್ರ ಸಚಿವ ಸ್ಥಾನ ಖಾತ್ರಿಯಾಗಿದೆ.

ಕರ್ನಾಟಕದಿಂದ ಈ ಬಾರಿ ಲಿಂಗಾಯತ ಕೋಟಾದಲ್ಲಿ ಘಟಾನುಘಟಿಗಳ ಮಧ್ಯೆ ಸಂಸದ ವಿ. ಸೋಮಣ್ಣ ಅವರು ಕೇಂದ್ರ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮೋದಿ ಸಂಪುಟದಲ್ಲಿ ಸೋಮಣ್ಣ ಅವರಿಗೆ ಅದೃಷ್ಟ ಖುಲಾಯಿಸಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿಗೆ ಕೇಂದ್ರ ಸಚಿವ ಸ್ಥಾನ ಕೈ ತಪ್ಪಿದೆ.

ಇದನ್ನೂ ಓದಿ: BREAKING: ಕರ್ನಾಟಕಕ್ಕೆ ಬಂಪರ್‌.. ಮೋದಿ ಕ್ಯಾಬಿನೆಟ್‌ನಲ್ಲಿ ಐವರಿಗೆ ಮಂತ್ರಿ ಸ್ಥಾನ ಫಿಕ್ಸ್‌; ಯಾರ್ ಯಾರು? 

ಪ್ರಧಾನಿ ನಿವಾಸದಿಂದ ಹೊರ ಬಂದ ಬಳಿಕ ವಿ.ಸೋಮಣ್ಣ ನ್ಯೂಸ್‌ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿದರು. ನನಗೆ ಕೇಂದ್ರ ಸಚಿವ ಸ್ಥಾನ ಸಿಗುವ ನಿರೀಕ್ಷೆ ಖಂಡಿತ ಇರಲಿಲ್ಲ. ನನಗೆ ಕಾಲ್ ಬಂದಿದ್ದೇ 11 ಗಂಟೆಗೆ. ಕರೆದ್ರು ನಾನು ಅಲ್ಲಿಗೆ ಹೋದೆ. ನಿನ್ನ ಕೇಂದ್ರ ಸಚಿವ ಮಾಡಿದ್ದೇವೆ ಅಂದ್ರು. ಆನಂದ ಆಯ್ತು. ಇನ್ನು ಮುಂದೆ ಜವಾಬ್ದಾರಿ ಜಾಸ್ತಿ ಆಯ್ತು. ಅದನ್ನು ನಿರ್ವಹಣೆ ಮಾಡುತ್ತೇವೆ. ಯಾವ ಖಾತೆಯೂ ನಿರೀಕ್ಷೆಯು ನನಗಿಲ್ಲ. ಮೋದಿ ಅವರು ಹಲವಾರು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಅವುಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುತ್ತೇವೆ ಎಂದು ವಿ. ಸೋಮಣ್ಣ ಹೇಳಿದ್ದಾರೆ.

ತುಮಕೂರಿಗೆ ಮೊದಲ ಮಂತ್ರಿಗಿರಿ
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ. ಈ ಹಿಂದೆ ಬಿಜೆಪಿಯ ಎಸ್‌. ಮಲ್ಲಿಕಾರ್ಜುನಯ್ಯ ಅವರು ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಆಗಿದ್ದರು. ಅದನ್ನು ಹೊರತುಪಡಿಸಿ ತುಮಕೂರು ಲೋಕಸಭಾ ಸದಸ್ಯರಿಗೆ ರಾಷ್ಟ್ರಮಟ್ಟದಲ್ಲಿ ಇದುವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ವಿ.ಸೋಮಣ್ಣ ಅವರು ಕೇಂದ್ರ ಸಚಿವರಾಗುವ ಮೂಲಕ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಕಾಲ್ ಬಂದಿದ್ದೇ ಬೆಳಗ್ಗೆ 11 ಗಂಟೆಗೆ’- ಘಟಾನುಘಟಿಗಳ ಮಧ್ಯೆ ಸೋಮಣ್ಣಗೆ ಖುಲಾಯಿಸಿದ ಅದೃಷ್ಟ; ಹೇಗೆ ಗೊತ್ತಾ?

https://newsfirstlive.com/wp-content/uploads/2024/06/V-Somanna-Minister.jpg

Load More