/newsfirstlive-kannada/media/post_attachments/wp-content/uploads/2024/05/Pavithra-Jayaram-2-1.jpg)
ಮಂಡ್ಯ: ಕಿರುತೆರೆ ನಟಿ ಪವಿತ್ರಾ ಜಯರಾಂ ಅವರ ಅಕಾಲಿಕ ಸಾವಿನ ಬಳಿಕ ನಟ ಚಂದ್ರಕಾಂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪವಿತ್ರಾ ಅವರ ಸ್ನೇಹಿತನ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇಬ್ಬರ ನಡುವಿನ ರೂಮರ್ಸ್‌ಗೆ ಪವಿತ್ರಾ ಜಯರಾಂ ಅವರ ಪತ್ರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದ ಉಮ್ಮಡಹಳ್ಳಿಯಲ್ಲಿ ಪವಿತ್ರ ಪುತ್ರ ಪ್ರಜ್ವಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಊರಿನೊಂದಿಗೆ ಅಮ್ಮನ ಒಡನಾಟ ಚೆನ್ನಾಗಿಯೇ ಇತ್ತು. ನಾನು, ನನ್ನ ತಂಗಿ ಇಬ್ಬರು ತಾಯಿಯೊಂದಿಗೆ ಹೈದರಾಬಾದ್‌ನಲ್ಲಿಯೇ ಇದ್ದೆವು. ಹೈದರಾಬಾದ್‌ಗೆ ಅಜ್ಜಿ, ಚಿಕ್ಕಮ್ಮ ಬಂದಿದ್ದರು. ಅವರನ್ನು ವಾಪಸ್ ಬಿಟ್ಟು ಬರುವಾಗ ಅಪಘಾತವಾಯಿತು.
ಕಾರು ಅಪಘಾತದ ಬಳಿಕ ವೈದ್ಯರು ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ರು ಎಂದಿದ್ದಾರೆ. ಘಟನಾ ಸ್ಥಳದಲ್ಲಿದ್ದವರು ಆಸ್ಪತ್ರೆಗೆ ಹೋಗುವ ಮುನ್ನ ಉಸಿರಾಡುತ್ತಿದ್ದರು ಎಂದಿದ್ದರು. ನಮಗೆ ಇಂದಿಗೂ ಆ ವಿಚಾರ ಸರಿಯಾಗಿ ಗೊತ್ತಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.
ಇದನ್ನೂ ಓದಿ: ನಟಿ ಪವಿತ್ರಾ ಸಹವಾಸದಿಂದ ಹೆಂಡತಿ, ಮಕ್ಕಳಿಂದ ದೂರ ಇದ್ದ; ಚಂದು ಬಗ್ಗೆ ತಾಯಿಯ ಆರೋಪವೇನು?
ಇನ್ನು, ಪವಿತ್ರಾ ಜಯರಾಂ ಹಾಗೂ ಚಂದ್ರಕಾಂತ್ ನಡುವಿನ ಮದುವೆಯ ರೂಮರ್ಸ್‌ಗೆ ಪ್ರಜ್ವಲ್ ಸ್ಪಷ್ಟನೆ ನೀಡಿದ್ದಾರೆ. ಇಂಡಸ್ಟ್ರಿಯಲ್ಲಿ ಯಾರಾದ್ರೂ ಜೊತೆಯಲ್ಲಿದ್ದರೆ ಮೊದಲು ಹುಟ್ಟಿಕೊಳ್ಳೋದೇ ಈ ರೀತಿಯ ರೂಮರ್ಸ್. ಆದ್ರೆ ಅಮ್ಮ ಹಾಗೂ ಚಂದ್ರಕಾಂತ್ ಎಷ್ಟು ಒಳ್ಳೆಯ ಪ್ರೆಂಡ್ ಎಂದು ನನಗೆ ಹಾಗೂ ಇಂಡಸ್ಟ್ರಿಗೆ ಗೊತ್ತು. ಅವರಿಬ್ಬರು ಬೆಸ್ಟ್ ಪ್ರೆಂಡ್ ಆಗಿದ್ದರು.
ಕೆಲವು ಸಂದರ್ಶನಗಳಲ್ಲಿ ಪವಿತ್ರಾ ಹಾಗೂ ಚಂದ್ರಕಾಂತ್ ಇಬ್ಬರು ಮದುವೆ ಆಗೋಕೆ ತೀರ್ಮಾನ ಮಾಡಿದ್ದರು ಅಂತಿದ್ದಾರೆ. ಆದ್ರೆ ಅಷ್ಟೊಂದು ಮಾತುಕತೆ ಅವರ ಮಧ್ಯೆ ನಡೆದಿರಲಿಲ್ಲ. ನಮಗೆ ಅದರ ಬಗ್ಗೆ ಗೊತ್ತಿಲ್ಲ. ಚಂದ್ರಕಾಂತ್ ಅವರ ಸಾವು ನಮಗೂ ಶಾಕ್ ಆಗಿದೆ. ಹೈದರಾಬಾದ್‌ನಲ್ಲಿ ನಮಗೆ ಹತ್ತಿರ ಇದ್ದದ್ದು ಅವರೊಬ್ಬರೇ ಎಂದು ಪ್ರಜ್ವಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಅಭಿಮಾನಿಗಳ ಅಭಯ, ಹೆಂಡತಿಯ ಸಪೋರ್ಟ್.. ಹೋರಾಟದ ಹಾದಿ ನೆನೆದು ಕಣ್ಣೀರು ಹಾಕಿದ ಕೊಹ್ಲಿ
ನಮ್ಮ ಅಪ್ಪ ಶಿವಕುಮಾರ್ ಮಂಡ್ಯದ ಉಮ್ಮಡಹಳ್ಳಿ ಗ್ರಾಮದಲ್ಲೇ ಇದ್ದರು. ಅಮ್ಮ-ಅಪ್ಪ ಗಂಡ ಹೆಂಡತಿ ರೀತಿ ಇರಲಿಲ್ಲ. ಬೆಸ್ಟ್ ಪ್ರೆಂಡ್ ರೀತಿ ಇದ್ದರು. ಅಪ್ಪ ಟಾರ್ಚರ್ ಕೊಟ್ಟಿದ್ದರು ಎಂಬುದು ಸತ್ಯವಲ್ಲ. ಅವರ ಬಾಂಧವ್ಯ, ಒಡನಾಟ ಏನು ಅನ್ನೋದು ಇಡೀ ಊರಿನವರಿಗೆ ಗೊತ್ತು. ಅಮ್ಮ ನಮ್ಮ ಭವಿಷ್ಯದ ಬಗ್ಗೆ ಕನಸ್ಸು ಕಟ್ಟಿಕೊಂಡಿದ್ದರು. ನನ್ನ ಮಕ್ಕಳು ಹೆಸರು ಮಾಡಬೇಕಿತ್ತು ಎಂಬ ಕನಸ್ಸು ಕಟ್ಟಿಕೊಂಡಿದ್ದರು. ಅದಕ್ಕಾಗಿಯೇ ಅಮ್ಮ ಅಷ್ಟೊಂದು ಕಷ್ಟಪಟ್ಟಿದ್ದು. ಅಮ್ಮ ನನ್ನನ್ನು ಆ್ಯಕ್ಟರ್ ಮಾಡಬೇಕು. ತಂಗಿಯನ್ನ ಚೆನ್ನಾಗಿ ಓದಿಸಿ ವಿದೇಶಕ್ಕೆ ಕಳುಹಿಸಬೇಕು ಅನ್ಕೊಂಡಿದ್ದರು.
ಅಮ್ಮ ಸಾವನ್ನಪ್ಪಿದಾಗ ಚಂದ್ರಕಾಂತ್ ಅವರು ಶಾಕ್ ಆಗಿದ್ರು. ಅಂತ್ಯಕ್ರಿಯೆ ಬಳಿಕ ನಾನಿದ್ದೀನಿ ಎಂಬ ಮಾತುಗಳನ್ನಾಡಿದ್ದರು. ಆದಾದ ಎರಡು ಮೂರು ದಿನವೂ ಚೆನ್ನಾಗಿಯೇ ಇದ್ದರು. ಪವಿತ್ರಾ-ಚಂದ್ರಕಾಂತ್‌ರ ಸಂಬಂಧದ ಬಗ್ಗೆ ಚಂದ್ರು ಕುಟುಂಬಸ್ಥರು ಆರೋಪ ಮಾಡುತ್ತಿರೋದು ಬೇಸರ ತರಿಸಿದೆ. ಅವರಿಬ್ಬರು ಹೇಗಿದ್ದರು, ಎಷ್ಟು ಒಳ್ಳೆಯ ಫ್ರೆಂಡ್ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ. ನೋವಿದೆ ಎಂದು ಮಾತಾಡಬಾರದು. ನಿಜ ವಿಷಯಗಳನ್ನ ಮಾತಾಡಿ ಎಂದು ಚಂದ್ರು ಕುಟುಂಬಸ್ಥರ ವಿರುದ್ಧ ಪ್ರಜ್ವಲ್ ಬೇಸರ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ