TV ನೋಡುತ್ತಿದ್ದ ವೇಳೆ ಎದೆನೋವು.. ಹೃದಯಾಘಾತಕ್ಕೆ ಬಲಿಯಾದ 11 ವರ್ಷದ ಬಾಲಕ

author-image
AS Harshith
Updated On
TV ನೋಡುತ್ತಿದ್ದ ವೇಳೆ ಎದೆನೋವು.. ಹೃದಯಾಘಾತಕ್ಕೆ ಬಲಿಯಾದ 11 ವರ್ಷದ ಬಾಲಕ
Advertisment
  • 11 ವರ್ಷದ ಬಾಲಕ ಹೃದಯಾಘಾತಕ್ಕೆ ಬಲಿ
  • ಟಿವಿ ನೋಡುತ್ತಿದ್ದ ಬಾಲಕ ಅಲ್ಲೇ ಉಸಿರು ನಿಲ್ಲಿಸಿದ
  • ಹೃದಯಾಘಾತಕ್ಕೆ 8ನೇ ತರಗತಿ ವಿದ್ಯಾರ್ಥಿ ಸಾವು

ಹಾಸನ: ಬಾಲಕನೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. 11 ವರ್ಷ ವಯಸ್ಸಿನ ಸಚಿನ್ ಮೃತಪಟ್ಟ ಬಾಲಕ.

ಸಚಿನ್ ಗ್ರಾಮದ ಕಾವ್ಯಶ್ರೀ ಎಂಬುವವರ ಮಗ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ. ನಿನ್ನೆ ಇದ್ದಕ್ಕಿದ್ದಂತೆ ಸಚಿನ್‌ಗೆ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಶಾಲೆಗೆ ಹೋಗದೆ ಮನೆಯಲ್ಲಿ ಟಿವಿ ನೋಡುತ್ತಿದ್ದನು. ಈ ವೇಳೆ ಏಕಾಏಕಿ ಸಚಿನ್‌ಗೆ ಎದೆನೋವು ಕಾಣಿಸಿಕೊಂಡಿದೆ. ಇದ್ದಲ್ಲಿಯೇ ಕೊನೆಯುಸಿರೆಳೆದಿದ್ದೇನೆ.

ಇದನ್ನೂ ಓದಿ: Pager ಸ್ಫೋಟಗೊಂಡತೆ Smartphone​ ಬ್ಲಾಸ್ಟ್​ ಆಗುತ್ತಾ? ಎಕ್ಸ್​ಫರ್ಟ್ಸ್​​ ಬಿಚ್ಚಿಟ್ಟಿದ್ದಾರೆ ಅಚ್ಚರಿಯ ಸಂಗತಿ

ಸ್ವಲ್ಪ ಸಮಯದ ನಂತರ ಸಚಿನ್‌‌ನನ್ನು ಮಾತನಾಡಿಸಲು ಮನೆಯವರು ಬಂದಿದ್ದಾರೆ. ಆದರೆ ಸಚಿನ್​ ಮಾತನಾಡದೆ ಇರುವುದನ್ನ ಗಮನಿಸಿ ತಕ್ಷಣವೇ ಆಲೂರು ಸರ್ಕಾರಿ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿದ ಬಾಲಕ ಮೃತಪಟ್ಟಿರುವುದನ್ನು ದೃಢ ಪಡಿಸಿದರು.

ಇದನ್ನೂ ಓದಿ: ಜೇನುಹುಳದ ವಿಷ ಕ್ಯಾನ್ಸರ್​​ ಕೊಲ್ಲುತ್ತಾ? ಏನಿದು ಹೊಸ ಆವಿಷ್ಕಾರ? ನೀವು ಓದಲೇಬೇಕು!

ಇಷ್ಟು ಚಿಕ್ಕವಯಸ್ಸಿನಲ್ಲೇ ಬಾಲಕ ಹೃದಯಾಘಾತಕ್ಕೆ ಬಲಿಯಾಗಿರುವ ವಿಚಾರ ತಿಳಿದು ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment