BREAKING: ಭೀಕರ ಅಪಘಾತಕ್ಕೆ ನಜ್ಜುಗುಜ್ಜಾದ ಎರಡು ಕಾರುಗಳು; ಐವರು ದಾರುಣ ಸಾವು

author-image
admin
Updated On
BREAKING: ಭೀಕರ ಅಪಘಾತಕ್ಕೆ ನಜ್ಜುಗುಜ್ಜಾದ ಎರಡು ಕಾರುಗಳು; ಐವರು ದಾರುಣ ಸಾವು
Advertisment
  • ಎರಡು ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಐವರು ದಾರುಣ ಸಾವು
  • ಸಿಯಾಜ್ ಮಾರುತಿ ಕಾರು ವೇಗವಾಗಿ ತುಮಕೂರು ಕಡೆಯಿಂದ ಬರುತ್ತಿತ್ತು
  • ಟಾಟಾ ಟಿಯಾ ಮಧುಗಿರಿ ಕಡೆಯಿಂದ ತುಮಕೂರು ಕಡೆ ಹೋಗುತ್ತಿತ್ತು

ತುಮಕೂರು: ಎರಡು ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಐವರು ಸಾವನ್ನಪ್ಪಿರೋ ಭಯಾನಕ ಘಟನೆ ಮಧುಗಿರಿ ತಾಲ್ಲೂಕು ಕಾಟಗಾನಹಟ್ಟಿ ಬಳಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಓರ್ವ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಾಗ ಪ್ರಾಣ ಬಿಟ್ಟಿದ್ದಾರೆ. ಮೃತದೇಹಗಳನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ: ಭೀಕರ ಅಪಘಾತ.. ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಗುದ್ದಿದ KSRTC ಬಸ್‌; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ! 

publive-image

ಸಿಯಾಜ್ ಮಾರುತಿ ಕಾರು ತುಮಕೂರು ಕಡೆಯಿಂದ ಬರುತ್ತಿತ್ತು. ಟಾಟಾ ಟಿಯಾ ಮಧುಗಿರಿ ಕಡೆಯಿಂದ ತುಮಕೂರು ಕಡೆ ಹೋಗುತ್ತಿತ್ತು. ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಹಾಗೂ ಕಾಟಗಾನಹಟ್ಟಿ ಬಳಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಸದ್ದಿಲ್ಲದೇ ಮದುವೆ ಆಗ್ತಿದ್ದಾರಾ ನಟಿ ರಮ್ಯಾ? ಮಾಜಿ ಸಂಸದೆ ಮನಗೆದ್ದ ಖ್ಯಾತ ಉದ್ಯಮಿ ಯಾರು ಗೊತ್ತಾ? 

publive-image

ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರಾಗಿದ್ದಾರೆ. ಐವರಲ್ಲಿ ಸಿಂಧೂ ಎಂಬ ಮಹಿಳೆಯ ಗುರುತು ಪತ್ತೆಯಾಗಿದೆ. ಮಹಿಳೆ ಗೀತಾ ಮತ್ತು ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ. ಇನ್ನುಳಿದವರ ಪರಿಶೀಲನೆ ಕಾರ್ಯ ಮುಂದುವರಿದಿದೆ. ಅಪಘಾತದ ಸ್ಥಳಕ್ಕೆ ಮಧುಗಿರಿ ಪಿಎಸ್‌ಐ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment