/newsfirstlive-kannada/media/post_attachments/wp-content/uploads/2024/05/RCB-50-1.jpg)
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಕಳೆದ ಶನಿವಾರ ಆರ್​ಸಿಬಿ ಮತ್ತು ಚೆನ್ನೈ ನಡುವೆ ರೋಚಕ ಪಂದ್ಯ ನಡೆಯಿತು. ಆರ್​ಸಿಬಿ ಎದುರಾಳಿ ಸಿಎಸ್​​ಕೆಯನ್ನು 27 ರನ್​ಗಳಿಂದ ಮಣಿಸಿ ಪ್ಲೇ-ಆಫ್ ಪ್ರವೇಶ ಮಾಡಿತು.
ರಣ ರೋಚಕ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸಿಎಸ್​ಕೆ ಹಾಗೂ ಆರ್​ಸಿಬಿ ಅಭಿಮಾನಿಗಳು ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದವು. ಪಂದ್ಯದ ವೇಳೆ ಇಬ್ಬರು ಅಭಿಮಾನಿಗಳು ಸಿಎಸ್​ಕೆ ಡ್ರೆಸ್​ ಹಾಕೊಂಡು ಬಂದಿದ್ದರು. ಆದರೆ ಯಾವಾಗ ಆರ್​ಸಿಬಿ ಗೆಲ್ಲುತ್ತೆ ಅನ್ನೋದು ಖಚಿತ ಆಗ್ತಿದ್ದಂತೆ.. ತಾವು ಧರಿಸಿದ್ದ ಸಿಎಸ್​ಕೆ ಡ್ರೆಸ್ ಬದಲಾಯಿಸಿ, ಆರ್​ಸಿಬಿ ಬಣ್ಣದಲ್ಲಿ ಕಾಣಿಸಿಕೊಂಡು ಆರ್​ಸಿಬಿಗೆ ಸಪೋರ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಇರಾನ್ ಅಧ್ಯಕ್ಷ ರೈಸಿ ಇನ್ನಿಲ್ಲ.. ಹೆಲಿಕಾಪ್ಟರ್ ಅಪಘಾತದಲ್ಲಿ ವಿದೇಶಾಂಗ ಸಚಿವ ಸೇರಿ ಎಲ್ಲರೂ ಸಾವು
/newsfirstlive-kannada/media/post_attachments/wp-content/uploads/2024/05/RCB-50.jpg)
ಈ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕ್ರಿಕೆಟ್ ಪ್ರಿಯರು ಈ ಅಭಿಮಾನಿಗಳ ನಡೆಯನ್ನು ತಮ್ಮದೇ ರೀತಿಯಲ್ಲಿ ವಿಮರ್ಶೆ ಮಾಡ್ತಿದ್ದಾರೆ. ‘ನೋಡಿ ಗೆದ್ದೆತ್ತಿನ ಬಾಲ ಹಿಡಿಯುತ್ತಿದ್ದಾರೆ’ ಅಂತಾ ಕೆಲವರು ಹೇಳಿದ್ರೆ, ಇನ್ನ ಹಲವರು ಆರ್​ಸಿಬಿ ಅಭಿಮಾನಿಗಳ ಕೆಟ್ಟ ನಡವಳಿಕೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದೇ ರೀತಿ ಅನೇಕ ನೆಟ್ಟಿಗರು ತಮಗೆ ತೋಚಿದ ರೀತಿಯಲ್ಲಿ ಕಮೆಂಟ್ಸ್​ ಮಾಡುತ್ತಿದ್ದಾರೆ.
ಇದನ್ನೂ ಓದಿ:ಆರ್​ಸಿಬಿ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ.. ಟ್ವಿಟರ್​ನಲ್ಲಿ ಭಾರೀ ಆಕ್ರೋಶ..!
— Out Of Context Cricket (@GemsOfCricket) May 19, 2024
ಇದನ್ನೂ ಓದಿ:RCB ವಿರುದ್ಧ ಬಲಿಷ್ಠ ತಂಡ ಕಣಕ್ಕೆ.. ಪ್ಲೇ-ಆಫ್​ನಲ್ಲಿ ಯಾರು, ಯಾರ ಜೊತೆ ಸೆಣಸಾಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us