newsfirstkannada.com

ನೀರಲ್ಲಿ ಬಿದ್ದವನ ರಕ್ಷಣೆ ಮಾಡಲು ಹೋದ ಮತ್ತೊಬ್ಬ.. ಒಂದೇ ಊರಿನ ಗೆಳೆಯರ ದುರಂತ ಅಂತ್ಯ

Share :

Published May 1, 2024 at 4:46pm

Update May 1, 2024 at 4:47pm

    ಲಿಂಗಸುಗೂರು ತಾಲೂಕಿನ ಬಸವಸಾಗರ ಜಲಾಶಯದ ಕಾಲುವೆಯಲ್ಲಿ ಘಟನೆ

    ಈ ಘಟನೆ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

    ನೀರಿನಲ್ಲಿ ಬಿದ್ದವರನ್ನು ರಕ್ಷಣೆ ಮಾಡಲು ಹೋಗಿದ್ದ ಮತ್ತೊಬ್ಬ ಯುವಕ ಕೂಡ ಸಾವು

ರಾಯಚೂರು: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿರೋ ಘಟನೆ ಲಿಂಗಸುಗೂರು ತಾಲೂಕಿನ ಬಸವಸಾಗರ ಜಲಾಶಯದ ಕಾಲುವೆಯಲ್ಲಿ ನಡೆದಿದೆ. ಲಕ್ಕಣ್ಣ (22) ಬಸವಂತ (25) ಮೃತ ಯುವಕರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ.. ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಖಡಕ್ ಪ್ರಶ್ನೆ; ಹೇಳಿದ್ದೇನು?

ಇಬ್ಬರು ಯುವಕರು ಬಸವಸಾಗರ ಜಲಾಶಯದ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇನ್ನು, ಬಟ್ಟೆ ತೊಳೆಯುವಾಗ ಮೊದಲು ಓರ್ವ ಯುವಕ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು ಹೋಗಿದ್ದ ಮತ್ತೊಬ್ಬ ಕೂಡ ನೀರಿನಲ್ಲಿ ಬಿದ್ದಿದ್ದಾರೆ. ಆದರೆ ಈ ಇಬ್ಬರಿಗೂ ಈಜು ಬಾರದೆ ಕಾಲುವೆಯಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮೃತ ಇಬ್ಬರು ಕೂಡ ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದ ನಿವಾಸಿಗಳು.

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸ್ಥಳೀಯರು ದೌಡಾಯಿಸಿ ಇಬ್ಬರ ರಕ್ಷಣೆಗೆ ಪ್ರಯತ್ನಪಟ್ಟರೂ ಕೂಡ ಅದು ಸಾಧ್ಯವಾಗಲಿಲ್ಲ. ಬಳಿಕ ಸ್ಥಳೀಯರು ಮೃತ ಯುವಕರ ಶವವನ್ನು ಹೊರ ತೆಗೆದಿದ್ದಾರೆ. ಇನ್ನು, ಮನೆ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀರಲ್ಲಿ ಬಿದ್ದವನ ರಕ್ಷಣೆ ಮಾಡಲು ಹೋದ ಮತ್ತೊಬ್ಬ.. ಒಂದೇ ಊರಿನ ಗೆಳೆಯರ ದುರಂತ ಅಂತ್ಯ

https://newsfirstlive.com/wp-content/uploads/2024/05/death40.jpg

Load More