newsfirstkannada.com

ಕರ್ನಾಟಕದಲ್ಲಿ ವರ್ಷದ ಮೊದಲ ಮಳೆಗೆ ಇಬ್ಬರು ಸಾವು, ಭಾರೀ ಅನಾಹುತ

Share :

Published April 14, 2024 at 8:31am

    ಮಲೆನಾಡು ಭಾಗಗಳಲ್ಲಿ ಸುರಿದ ಭಾರೀ ಮಳೆ

    ಸಿಡಿಲ ಬಡಿತಕ್ಕೆ ಯಾದಗಿರಿಯಲ್ಲಿ ಎರಡು ಎತ್ತು ಸಾವು

    ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಮಳೆ

ಬೆಂಗಳೂರು: ಒಂದು ಕಡೆ ಮಳೆಯ ಆಗಮನದಿಂದ ಜನರು ಖುಷಿಯಾಗಿದ್ರೆ, ಮತ್ತೊಂದೆಡೆ ಧಾರಾಕಾರವಾಗಿ ಸುರಿದ ಮಳೆಗೆ ಅವಾಂತರಗಳೇ ಸೃಷ್ಟಿಯಾಗಿವೆ. ಸಿಡಿಲಿಗೆ ಇಬ್ಬರು ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ಹಲವೆಡೆ ಮಳೆ ಸುರಿದಿದ್ದು, ಗುಡುಗು-ಸಿಡಿಲಿನಿಂದ ಎನ್.ಆರ್ ಪುರ ತಾಲೂಕಿನ ಅರಳಿಕೊಪ್ಪದ ಶಂಕರ್​ ಎನ್ನುವ ರೈತ ಸಾವನ್ನಪ್ಪಿದ್ದಾರೆ. ಇತ್ತ ಬಯಲು ಭಾಗದ ತರೀಕೆರೆ ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದು, ರಸ್ತೆಗಳ ಮೇಲೆ 2-3 ಅಡಿಗಳಷ್ಟು ನೀರು ಹರಿದಿದೆ.

ಇದನ್ನೂ ಓದಿ: ‘ಅಕ್ಕಾ.. ಸ್ವಲ್ಪ ಎಣ್ಣೆ ಹೊಡೆದು ಮಲಗಿಕೊಳ್ಳಿ’ ಎಂದ ಪಾಟೀಲ್; ಹೆಬ್ಬಾಳ್ಕರ್ ಬೆಂಬಲಿಗರಿಂದ ಆಪ್ತನಿಗೆ ಕಪಾಳಮೋಕ್ಷ..!

ಇನ್ನು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆ ಸುರಿದೆ.. ಪರಿಣಾಮ ಸಿಡಿಲು ಬಡಿದು ಮಂಜುನಾಥ್ ಎನ್ನುವ ಯುವಕ ಮೃತಪಟ್ಟಿದ್ದಾನೆ.. ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸಿಡಿಲ ಅಬ್ಬರ ಜೋರಾಗಿದ್ದು, ಸಿಡಿಲ ಬಡಿತಕ್ಕೆ ಲಾಳಸಂಗಿ ಗ್ರಾಮದ ರೈತ ಕಾಸಿಮ್ ಬಾಗವಾನ್ ಎಂಬುವವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ.

ಇದನ್ನೂ ಓದಿ:ತಂಪೆರೆದ ಮಳೆರಾಯ.. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಭಾರೀ ಮಳೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕದಲ್ಲಿ ವರ್ಷದ ಮೊದಲ ಮಳೆಗೆ ಇಬ್ಬರು ಸಾವು, ಭಾರೀ ಅನಾಹುತ

https://newsfirstlive.com/wp-content/uploads/2024/04/CKM-RAIN.jpg

Load More