ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ!
ಭೂಕುಸಿತದಲ್ಲಿ ಕರ್ನಾಟಕ ಮೂಲದ ಇಬ್ಬರು ನಾಪತ್ತೆ
ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕು ಮೂಲದವರು
ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಈ ದುರಂತದಲ್ಲಿ ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ 96ಕ್ಕೆ ಏರಿಕೆಯಾಗಿದೆ. ಹಲವು ಕುಟುಂಬಗಳು ಜಲಸಮಾಧಿಯಾಗಿವೆ.
ಇನ್ನು, ಇಷ್ಟೇ ಅಲ್ಲ ಈಗ ಕರ್ನಾಟಕದ ಕುಟುಂಬವೊಂದು ಈ ದುರಂತದಲ್ಲಿ ಸಿಲುಕಿದೆ ಎಂದು ತಿಳಿದು ಬಂದಿದೆ. ಇಂದು ನಸುಕಿನ ಜಾವ ಭೂಕುಸಿತ ಸಂಭವಿಸಿದ್ದು, ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಇಬ್ಬರು ನಾಪತ್ತೆಯಾಗಿದ್ದಾರೆ.
ಕೆ.ಆರ್ ಪೇಟೆಯ ಝಾನ್ಸಿ ಎಂಬುವರನ್ನು ಮೈಸೂರಿನ ಅನಿಲ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಇವರ ಕುಟುಂಬ ಕೇರಳದ ಮುಂಡಕ್ಕೈನಲ್ಲಿ ನೆಲೆಸಿತ್ತು. ಅನಿಲ್ ಮತ್ತು ಝಾನ್ಸಿ ಅವರೊಂದಿಗೆ ಪುತ್ರ ನಿಹಾಲ್ ಕೂಡ ಇದ್ದರು. ಜತೆಗೆ ಅನಿಲ್ ತಂದೆ ದೇವರಾಜು ಮತ್ತು ತಾಯಿ ಲೀಲಾವತಿ ಅವರಿದ್ದರು.
ನಿಹಾಲ್ ಮತ್ತು ಲೀಲಾವತಿ ನಾಪತ್ತೆ
ಸದ್ಯ ನಿಹಾಲ್ ಮತ್ತು ಲೀಲಾವತಿ ಅವರು ನಾಪತ್ತೆಯಾಗಿದ್ದಾರೆ. ಅನಿಲ್, ಝಾನ್ಸಿ ಮತ್ತು ದೇವರಾಜು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಇವರಿಗೆ ಕೇರಳದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಕೇರಳ ಮಳೆಯ ಎಫೆಕ್ಟ್.. ಕೊಡಗಿನಲ್ಲೂ 2 ದಿನ ರೆಡ್ ಅಲರ್ಟ್; ಕಾವೇರಿ ತೀರಕ್ಕೂ ಪ್ರವಾಹದ ಭೀತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ