newsfirstkannada.com

Cardiac Arrest: ಚುನಾವಣಾ ಕರ್ತವ್ಯದಲ್ಲಿದ್ದಾಗ ಕಾರ್ಡಿಯಾಕ್ ಅರೆಸ್ಟ್, ಇಬ್ಬರು ಅಧಿಕಾರಿಗಳು ನಿಧನ

Share :

Published May 8, 2024 at 9:01am

    ನಿನ್ನೆ ದೇಶದಲ್ಲಿ ಮೂರನೇ ಹಂತದ ಮತದಾನ ನಡೆದಿದೆ

    ಮತದಾನದ ವೇಳೆ ಕರ್ತವ್ಯದಲ್ಲಿದ್ದಾಗ ನಿಧನರಾಗಿದ್ದಾರೆ

    ಕುಟುಂಬಸ್ಥರಿಗೆ ಮೃತದೇಹಗಳ ಹಸ್ತಾಂತರ ಆಗಿದೆ

ಬಿಹಾರದ ಐದು ಲೋಕಸಭೆ ಕ್ಷೇತ್ರಗಳಿಗೆ ನಿನ್ನೆ ಶಾಂತಿಯುತ ಮತದಾನ ಆಗಿದೆ. ಶೇಕಡಾ 60 ರಷ್ಟು ಮತದಾನ ಆಗಿದ್ದು, 2019ರ ಲೋಕಸಭೆಗಿಂತ ಈ ಬಾರಿ ಒಂದು ಪರ್ಸೆಂಟ್ ಮತದಾನ ಕಡಿಮೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಘಾತಕಾರಿ ವಿಚಾರ ಏನೆಂದರೆ ಚುನಾವಣಾ ಕರ್ತವ್ಯದಲ್ಲಿ ಇಬ್ಬರು ಅಧಿಕಾರಿಗಳು ಕಾರ್ಡಿಯಾಕ್ ಅರೆಸ್ಟ್​ನಿಂದ ಸಾವನ್ನಪ್ಪಿದ್ದಾರೆ. ಅರಾರಿಯಾ ಮತ್ತು ಸುಪೌಲ್ ಲೋಕಸಭೆ ಕ್ಷೇತ್ರದ ಕರ್ತವ್ಯದಲ್ಲಿದ್ದ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಹೋಮ್ ಗಾರ್ಡ್​ ಮಹೇಂದ್ರ ಶಾಹ, ಶೈಲೇಂದ್ರ ಕುಮಾರ್ ಮೃತ ದುರ್ದೈವಿಗಳು. ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ: 48 ಗಂಟೆಯಲ್ಲಿ.. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಎಚ್ಚರಿಕೆ

ಖಗೆರಿಯಾಯದಲ್ಲಿ ಸಣ್ಣ ಗಲಾಟೆ ನಡೆದಿದೆ. ಅದು ಬಿಟ್ಟರೆ ಬೇರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಕಳೆದ ಬಾರಿ 61.22 ರಷ್ಟು ಮತದಾನ ನಡೆದಿತ್ತು. ಅರಾರಿಯಾದಲ್ಲಿ ಶೇಕಡಾ 62.80 ರಷ್ಟು ಮತದಾನವಾದರೆ, ಸುಪೌಲ್​ನಲ್ಲಿ 62.40, ಮಧೇಪುರದಲ್ಲಿ 61, ಖಗೆರಿಯಾದಲ್ಲಿ 58.20 ಹಾಗೂ ಝಂಝ್​ಪುರದಲ್ಲಿ 55.50 ರಷ್ಟು ಮತದಾನವಾಗಿದೆ.

ಇದನ್ನೂ ಓದಿ:ಕೊರೊನಾ ವ್ಯಾಕ್ಸಿನ್ ಹಿಂತೆಗೆದುಕೊಂಡ AstraZeneca; ಲಸಿಕೆ ಪಡೆದವರಲ್ಲಿ ಹೆಚ್ಚಿದ ಮತ್ತಷ್ಟು ಆತಂಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cardiac Arrest: ಚುನಾವಣಾ ಕರ್ತವ್ಯದಲ್ಲಿದ್ದಾಗ ಕಾರ್ಡಿಯಾಕ್ ಅರೆಸ್ಟ್, ಇಬ್ಬರು ಅಧಿಕಾರಿಗಳು ನಿಧನ

https://newsfirstlive.com/wp-content/uploads/2024/05/VOTE-2.jpg

Load More