/newsfirstlive-kannada/media/post_attachments/wp-content/uploads/2024/04/HSN-ACCIDENT.jpg)
ಹಾಸನ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಎರಡು ಅಪಘಾತ ಪ್ರಕರಣಗಳಲ್ಲಿ ಒಟ್ಟು 5 ಮಂದಿ ಸಾವನ್ನಪ್ಪಿ ಓರ್ವನಿಗೆ ಗಂಭೀರ ಗಾಯವಾಗಿದೆ. ಹೃದಯ ವಿದ್ರಾವಕ ವಿಚಾರ ಏನೆಂದರೆ ಸಾವಿನಲ್ಲೂ ದಂಪತಿ ಒಂದಾಗಿದೆ.
ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ರಾಮೇಗೌಡ (55), ಭಾಗ್ಯಮ್ಮ (45) ಹಾಗೂ ಬೇಡಿಗನಹಳ್ಳಿ ಗ್ರಾಮದ ನಂಜಮ್ಮ (65) ಮೃತ ದುರ್ದೈವಿಗಳು. ಒಂದೇ ಬೈಕ್‌ನಲ್ಲಿ ಮೂಡಲ ಮಾಯಗೋಡನಹಳ್ಳಿ ಗ್ರಾಮಕ್ಕೆ ದಂಪತಿ ಹಾಗೂ ಬೀಗತಿ ತೆರಳುತ್ತಿದ್ದರು. ಹೊಳೆನರಸೀಪುರ ತಾಲೂಕಿನ ಆಲದಹಳ್ಳಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ‘ನನ್ನ ಪಾಲಿಗೆ ಆಕೆ ಸತ್ತಂತೆ..’ ಮಗಳು ಬದುಕಿರುವಾಗಲೇ ಶ್ರದ್ಧಾಂಜಲಿ ಸಲ್ಲಿಸಿ ಹೆತ್ತ ತಂದೆ ಆಕ್ರೋಶ
ಮತ್ತೊಂದು ಪ್ರಕರಣದಲ್ಲಿ ಬೈಕ್‌ಗೆ ಆಪೆ ಆಟೋ ಡಿಕ್ಕಿಯಾಗಿದೆ. ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ. ಕುಂಚೇವು ಕೋಡಿಹಳ್ಳಿ ಗ್ರಾಮದ ಕುಮಾರ್ (18), ರತೀಶ್ (17) ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಜುನಾಥ್‌ಗೆ (27) ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನ ಅಗ್ರಹಾರ ಗೇಟ್ ಬಳಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ