/newsfirstlive-kannada/media/post_attachments/wp-content/uploads/2024/04/theft-china-nach-1.jpg)
ಬೆಂಗಳೂರು: ಹಲವು ದಿನಗಳಿಂದ ಸರಗಳ್ಳತನ ಮಾಡುತ್ತಿದ್ದ ತಾಯಿ ಹಾಗೂ ಮಗನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಚಿಂತಾಮಣಿ ಮೂಲದ ರೋಜಾ (32) ಹಾಗೂ ಆಕೆಯ ಅಪ್ರಾಪ್ತ ಮಗನನ್ನು ವಶಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:Breaking: ಜಾತ್ರೆಯಲ್ಲಿ ಉರುಳಿ ಬಿದ್ದ 120 ಅಡಿ ಎತ್ತರದ ಬೃಹತ್​ ತೇರು
ಅಪ್ರಾಪ್ತ ಮಗನ ಸರಗಳ್ಳತನ ಮಾಡುವುದಕ್ಕೆ ತಾಯಿಯೇ ಬ್ಲೂಪ್ರಿಂಟ್ ರೆಡಿ ಮಾಡುತ್ತಿದ್ದಳಂತೆ. ಬಳಿಕ ತಾಯಿ ರೋಜಾ ಬೆಳಗ್ಗೆ ಮಗನೊಂದಿಗೆ ಏರಿಯಾದಲ್ಲಿ ರೌಂಡ್ಸ್ ಹಾಕುತ್ತಿದ್ದಳಂತೆ. ಯಾವ ಏರಿಯಾ, ಯಾವ ಗಲ್ಲಿಯಲ್ಲಿ ಮಹಿಳೆಯರು ಒಬ್ಬಂಟಿಯಾಗಿ ಬೆಳಗಿನ ಜಾವ ಬರ್ತಾರೆ ಅನ್ನೊ ಮಾಹಿತಿ ಮಗನಿಗೆ ನೀಡುತ್ತಿದ್ದಳಂತೆ.
/newsfirstlive-kannada/media/post_attachments/wp-content/uploads/2024/04/theft-china-nach.jpg)
ಇನ್ನು, ತಾಯಿ ರೋಜಾ ಕೊಟ್ಟ ಮಾಹಿತಿ ಆಧಾರದ ಮೇಲೆ ಅಪ್ರಾಪ್ತ ಮಗ ಬೈಕ್​ನಲ್ಲಿ ಬಂದು ಮಹಿಳೆಯರ ಸರ ಕಳ್ಳತನ ಮಾಡಿ ಕೂಡಲೇ ಅಲ್ಲಿಂದ ಎಸ್ಕೇಪ್​ ಆಗುತ್ತಿದ್ದನಂತೆ. ಸದ್ಯ ಒಬ್ಬಂಟಿಯಾಗಿ ಓಡಾಡುತ್ತಿದ್ದವರನ್ನು ಟಾರ್ಗೆಟ್ ಮಾಡುತ್ತಿದ್ದ ತಾಯಿ ಹಾಗೂ ಮಗನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಐದು ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us