Advertisment

ಕಿಟಗಿ ಇದ್ದರೆ ಸಾಕು ನುಸುಳಲು.. ದಂಗು ಬಡಿಸುವಂತಿದೆ ಕಳ್ಳ ಅಕ್ಕ-ತಮ್ಮನ ಕೈಚಳಕ..!

author-image
Ganesh
Updated On
ಕಿಟಗಿ ಇದ್ದರೆ ಸಾಕು ನುಸುಳಲು.. ದಂಗು ಬಡಿಸುವಂತಿದೆ ಕಳ್ಳ ಅಕ್ಕ-ತಮ್ಮನ ಕೈಚಳಕ..!
Advertisment
  • ಬೆಂಗಳೂರಲ್ಲಿ ಸಿಕ್ಕಿಬಿದ್ದಿದ್ದಾರೆ ಕಿಲಾಡಿ ಕಳ್ಳರು
  • ಕಳ್ಳತನ ಮಾಡಿದ ಹಣದಲ್ಲಿ ಸಂಸಾರ ಸಮೇತ ಟ್ರಿಪ್
  • ಇಲ್ಲೇ ಎಲ್ಲೋ ಹೋಗ್ತಿರಲಿಲ್ಲ, ಗೋವಾ ಅವರ ಪ್ರವಾಸಿ ಕೇಂದ್ರ

ಬೆಂಗಳೂರು: ಕಿಟಕಿ ಮೂಲಕ ಮನೆ ಹಾಗೂ ಅಂಗಡಿಗಳಿಗೆ ಎಂಟ್ರಿ ಕೊಡುವ ಕಳ್ಳ ಅಕ್ಕ-ತಮ್ಮನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಆನಂದ್ ಹಾಗೂ ಗಾಯತ್ರಿ ಬಂಧಿತ ಆರೋಪಿಗಳು. ಮನೆ ಹಾಗೂ ಅಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇವರು ಸಂಸಾರ ಸಮೇತ ಗೋವಾ ಟ್ರಿಪ್ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

Advertisment

ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಡಯಾಗ್ನಾಸ್ಟಿಕ್ ಸೆಂಟರ್​ನ ಕಿಟಕಿಯ ಎಕ್ಸಾಸ್ಟಿಂಗ್ ಫ್ಯಾನ್ ಬಿಚ್ಚಿ ಖದೀಮರು ಒಳನುಗ್ಗಿದ್ದರು. ನಂತರ ಅಲ್ಲಿದ್ದ 8 ಲಕ್ಷ 20 ಸಾವಿರ ನಗದನ್ನು ಕಳ್ಳತನ ಮಾಡಿದ್ದರು. 3 ಲಕ್ಷ ಹಣವನ್ನು ತನ್ನ ಬಳಿ ಇಟ್ಟುಕೊಂಡಿದ್ದ ಆನಂದ್, ಉಳಿದ 5 ಲಕ್ಷವನ್ನು ಅಕ್ಕ ಗಾಯತ್ರಿಗೆ ಕೊಟ್ಟಿದ್ದ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ.. ಬಿಸಿಸಿಐನ ಈ ತಾರತಮ್ಯ ಯಾಕೆ?

ಕಳ್ಳತನ ಮಾಡಿ ದೋಚಿದ ಹಣದಲ್ಲಿ ಫ್ಯಾಮಿಲಿಯನ್ನು ಗೋವಾ ಟ್ರಿಪ್​ಗೆ ಕರೆದುಕೊಂಡು ಹೋಗಿದ್ದರು. ಪೊಲೀಸರ ತನಿಖೆ ವೇಳೆ ಅನಂದ್ ತನ್ನ ಅಕ್ಕನಿಗೆ ಹಣ ನೀಡಿರುವುದಾಗಿ ಹೇಳಿದ್ದ. ಕೊನೆಗೆ ಇಬ್ಬರನ್ನೂ ತೀವ್ರ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ. ಬಂಧಿತರಿಂದ 4 ಲಕ್ಷದ 50 ಸಾವಿರ ಹಣ ಹಾಗೂ ಒಂದು ಇಂಡಿಗೋ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 15ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisment

ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment