newsfirstkannada.com

ಸರಳು ತುಂಬಿದ ಲಾರಿಯ ಟೈರ್​ ಸ್ಫೋಟ.. ಎಸ್​ಯುವಿ ಕಾರಲ್ಲಿದ್ದ ಆರು ಜನರು ಸಾವು

Share :

Published April 30, 2024 at 10:42am

  ಸರಕು ತುಂಬಿದ ಲಾರಿ ಮತ್ತು ಎಸ್​ಯುವಿ ಕಾರಿನ ನಡುವೆ ಭೀಕರ ಅಪಘಾತ

  ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಲಾರಿ

  ಮದುವೆ ಪಾರ್ಟಿಗೆಂದು ಹೊರಟ ಆರು ಜನರು ಮಸಣ ಸೇರಿದರು

ಸರಕು ತುಂಬಿದ ಲಾರಿಯೊಂದು ಎಸ್​ಯುವಿ ಕಾರಿನ ಮೇಲೆ ಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿದ ಘಟನೆ ಬಿಹಾರದ ಭಾಗಲ್​ಪುರ್​​ದಲ್ಲಿ ನಡೆದಿದೆ. ಘೋಘಾ ಪೊಲೀಸ್​​ ಠಾಣಾ ವ್ಯಾಪ್ತಿಯ ಆಮಾಪುರ್​ ಗ್ರಾಮದ ಸಮೀಪವಿರುವ ಹೆದ್ದಾರಿ 80ರಲ್ಲಿ ಈ ಘಟನೆ ಸಂಭವಿಸಿದೆ.

ಲಾರಿ ಕಬ್ಬಿಣದ ಸರಳುಗಳನ್ನು ತುಂಬಿಕೊಂಡು ವೇಗವಾಗಿ ಬರುತ್ತಿತ್ತು. ಈ ವೇಳೆ ಲಾರಿ ಟೈರ್​ ಸ್ಫೋಟಗೊಂಡಿದೆ. ಸ್ಫೋಟಗೊಂಡಂತೆ  ಕಾರಿನ ಮೇಲೆ ಬಂದು ಬಿದ್ದಿದೆ.

ಇನ್ನು ಎಸ್​ಯುವಿ ಕಾರಿನಲ್ಲಿದ್ದವರು ಮದುವೆ ಪಾರ್ಟಿಗೆಂದು ತೆರಳುತ್ತಿದ್ದರು. ಕಹಲ್​ಗಾಂವ್​ನ ಶ್ರೀಮಂತ್​ಪುರಕ್ಕೆ ಪ್ರಯಾಣಿಸುತ್ತಿದ್ದರು. ಆದರೆ ಈ ವೇಳೆ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಮಾನಸಿಕ ಅಸ್ವಸ್ಥ ಬಾಲಕಿಯನ್ನೂ ಬಿಡದ ಕಾಮುಕ.. ಗರ್ಭಿಣಿ ಮಾಡಿದ ಅತ್ಯಾಚಾರಿಗೆ 106 ವರ್ಷ ಜೈಲು ಶಿಕ್ಷೆ

ಮೃತದೇಹಗಳನ್ನು ಕಾರಿನಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರಳು ತುಂಬಿದ ಲಾರಿಯ ಟೈರ್​ ಸ್ಫೋಟ.. ಎಸ್​ಯುವಿ ಕಾರಲ್ಲಿದ್ದ ಆರು ಜನರು ಸಾವು

https://newsfirstlive.com/wp-content/uploads/2024/04/Truck-Accident-3.jpg

Load More