Advertisment

ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು; ಭಾರತೀಯ ವಿಕಾಸ್ ಯಾದವ್ ಮೇಲೆ ಯುಎಸ್​ನಲ್ಲಿ ಕೇಸ್

author-image
Gopal Kulkarni
Updated On
ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು; ಭಾರತೀಯ ವಿಕಾಸ್ ಯಾದವ್ ಮೇಲೆ ಯುಎಸ್​ನಲ್ಲಿ ಕೇಸ್
Advertisment
  • ಅಮೆರಿಕಾದಲ್ಲಿ ಮತ್ತೊಬ್ಬ ಮಾಜಿ ರಾ ಅಧಿಕಾರಿ ಮೇಲೆ ಕೇಸ್
  • ಪ್ರಕರಣ ದಾಖಲಿಸಿಕೊಂಡ ಅಮೆರಿಕಾದ ನ್ಯಾಯಾಂಗ ಇಲಾಖೆ
  • ಖಲಿಸ್ತಾನ ಪರ ಇರುವ ಪನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪ

ಸಿಖ್​ ಫಾರ್ ಜಸ್ಟಿಸ್​ನ ಮುಖ್ಯಸ್ಥ, ಅಮೆರಿಕಾ ಹಾಗೂ ಕೆನಡಾದ ಉಭಯ ದೇಶಗಳ ನಾಗರಿಕತ್ವ ಪಡೆದಿರುವ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಭಾರತೀಯ ವಿಕಾಸ್ ಯಾದವ್ ಮೇಲೆ ಯುಎಸ್​ನ ನ್ಯಾಯಾಂಗ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. ಪನ್ನು ಭಾರತ ಘೋಷಿತ ಉಗ್ರ, ಸದ್ಯ ಅಮೆರಿಕಾ ಪ್ರಜೆ. ಇವನ ಹತ್ಯೆಗಾಗಿ ಸಂಚು ರೂಪಿಸಿದ ಆರೋಪದ ಮೇಲೆ ಭಾರತೀಯ ಗುಪ್ತಚರ ಇಲಾಖೆಯಾದ ರಾನ ಮಾಜಿ ಅಧಿಕಾರಿ ವಿಕಾಸ್ ಯಾದವ್ ವಿರುದ್ಧ ಹತ್ಯೆಗಾಗಿ ನೇಮಕ, ಸಂಚು ಹಾಗೂ ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಯುಎಸ್​ನ ನ್ಯಾಯಾಂಗ ಇಲಾಖೆಯಲ್ಲಿ ಕೇಸ್ ದಾಖಲಾಗಿದೆ.

Advertisment

ಇದನ್ನೂ ಓದಿ: ಹಮಾಸ್ ಮುಖ್ಯಸ್ಥ ಸಿನ್ವರ್​ನನ್ನು ಹೊಡೆದುರುಳಿಸಿದ ಇಸ್ರೇಲ್​; ಯಾರು ಈ ಯಾಹ್ಯಾ ಸಿನ್ವರ್​?

ಕಳೆದ ವರ್ಷ ಮತ್ತೊಬ್ಬ ಭಾರತೀಯ ನಿಖಿಲ್ ಗುಪ್ತಾ ವಿರುದ್ಧ ಇದೇ ರೀತಿ ಪ್ರಕರಣವೊಂದು ದಾಖಲಾಗಿತ್ತು. ಬ್ರೂಕ್​ಲೈನ್​ನಲ್ಲಿ ಈತನನ್ನು ಬಂಧಿಸಲಾಗಿತ್ತು. ನಿಖಿಲ್ ಗುಪ್ತಾರನ್ನ ಪನ್ನು ಹತ್ಯೆಗಾಗಿ ವಿಕಾಸ್ ಯಾದವ್ ನೇಮಕ ಮಾಡಿದ್ದರು ಎಂಬ ಆರೋಪ ಸದ್ಯ ಯಾದವ್ ಎದುರಿಸುತ್ತಿದ್ದಾರೆ.

ಗುರುವಾರದಂದೇ ಯಾದವ್ ವಿರುದ್ಧ ನ್ಯಾಯಾಂಗ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು. ಇದಾದ ಬಳಿಕ ಭಾರತೀಯ ತನಿಖಾ ತಂಡ ವಾಷಿಂಗ್​ಟನ್ ಡಿಸಿಗೆ ಭೇಟಿ ನೀಡಿ, ಇಲಾಖೆಯ ವಕ್ತಾರ ಮತ್ ಮಿಲ್ಲರ್ ಜೊತೆಗೆ ಮಾತುಕತೆ ನಡೆಸಿದೆ. ಮಿಲ್ಲರ್ ಹೇಳುವ ಪ್ರಕಾರ ವಿಕಾಸ್ ಯಾದವ ಬಹಳ ದಿನದಿಂದ ಭಾರತದ ಸರ್ಕಾರದಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ತನಿಖಾ ತಂಡ ಖಚಿತ ಪಡೆಸಿದೆಯಂತೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment