ದೀಪಾವಳಿ ಪ್ರಯುಕ್ತ ಪೂಜೆ ನಡೆಯುತ್ತಿದ್ದ ವೇಳೆ ನಡೆದ ಅವಘಡ
ಬೆಂಕಿಯ ಕೆನ್ನಾಲಿಗೆಗೆ ಮೀನುಗಾರಿಕಾ ಬೋಟುಗಳು ಸುಟ್ಟು ಕರಕಲು
ಅಗ್ನಿಶಾಮಕ ದಳದವರ ಆಗಮನ, ಮುಂದುವರಿದ ರಕ್ಷಣಾ ಕಾರ್ಯಚರಣೆ
ಉಡುಪಿ: ಲಂಗರು ಹಾಕಿದ್ದ ಬೋಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಕ್ಕ ಪಕ್ಕದ ಏಳು ಮೀನುಗಾರಿಕಾ ಬೋಟುಗಳು ಸುಟ್ಟು ಕರಕಲಾದ ಘಟನೆ ಗಂಗೊಳ್ಳಿ ಮೀನುಗಾರಿಕಾ ಬಂದರು ಪರಿಸರದಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ದುರಂತ ಸಂಭವಿಸಿದೆ.
ಪ್ರಾರಂಭದಲ್ಲಿ ಪೂಜೆ ಸಮಯದಲ್ಲಿ ಪಟಾಕಿ ಸಿಡಿಸಿದ ಕಾರಣ ಬೋಟ್ನಲ್ಲಿ ಬೆಂಕಿ ಹಬ್ಬಿರಬಹುದೇ ಎಂಬ ಸಂಶಯ ವ್ಯಕ್ತವಾಗಿತ್ತು. ಆದರೆ ಪೊಲೀಸರೇ, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಅಗ್ನಿಶಾಮಕ ದಳದವರು ಆಗಮಿಸಿದ್ದು, ರಕ್ಷಣಾ ಕಾರ್ಯಚರಣೆ ಮಾಡುತ್ತಿದ್ದಾರೆ. ಜೊತೆಗೆ ಹೆಚ್ಚುವರಿ ಅಗ್ನಿಶಾಮಕ ವಾಹನ ಕರೆಸಿಕೊಳ್ಳಲು ಮುಂದಾಗಿದ್ದಾರೆ.
#Udupi: ಲಂಗರು ಹಾಕಿದ್ದ ಬೋಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಕ್ಕ ಪಕ್ಕದ ಏಳು ಮೀನುಗಾರಿಕಾ ಬೋಟುಗಳು ಸುಟ್ಟು ಕರಕಲಾದ ಘಟನೆ ಗಂಗೊಳ್ಳಿ ಮೀನುಗಾರಿಕಾ ಬಂದರು ಪರಿಸರದಲ್ಲಿ ನಡೆದಿದೆ. ದೀಪಾವಳಿ ಪ್ರಯುಕ್ತ ಪೂಜೆ ನಡೆಯುತ್ತಿದ್ದ ವೇಳೆ ಬೆಂಕಿ ದುರಂತ ಸಂಭವಿಸಿದೆ. pic.twitter.com/K4OFMB65ea
— Harshith Achrappady (@HAchrappady) November 13, 2023
ಇನ್ನು ಈ ದುರಂತದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದ್ದು, 11 ಬೋಟ್ಗಳು ಬೆಂಕಿಗೆ ಸುಟ್ಟು ಕರಕಲಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ