ನಟ ದರ್ಶನ್ಗೆ ನಿರ್ಮಾಪಕ ಉಮಾಪತಿ ಸಖತ್ ಕೌಂಟರ್
ನಂದೇನಿದ್ರೂ ಫೇಸ್ ಟು ಫೇಸ್ ಎಂದ ರಾಬರ್ಟ್ ಪ್ರೊಡ್ಯೂಸರ್
ಪದ ಬಳಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ವಾರ್ನಿಂಗ್!
ತನ್ನನ್ನು ತಗಡು ಎಂದು ಕರೆದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೌಂಟರ್ ಕೊಟ್ಟಿದ್ದಾರೆ. ಈ ಸಂಬಂಧ ನ್ಯೂಸ್ಫಸ್ಟ್ ಜತೆ ಮಾತಾಡಿದ ಉಮಾಪತಿ, ದರ್ಶನ್ ಅವರು ನನಗೆ ಮಾತಾಡಿದ್ರು ಎಂದು ಬೇಜಾರೇನಿಲ್ಲ. ಸಮಯ ಸಂದರ್ಭ ಹಾಗೇ ಮಾತಾಡಿಸಿರಬೇಕು. ಪದಗಳನ್ನು ಬಳಸಬೇಕಾದ್ರೆ ಚೂರು ಎಚ್ಚರಿಕೆಯಿಂದ ಇರಬೇಕು ಎಂದರು.
ನಾನು ದರ್ಶನ್ ಅವರ ಬೆಳವಣಿಗೆಯನ್ನೇ ಇಷ್ಟ ಪಡ್ತೀನಿ. ಅವರು ಬೆಳೆದಷ್ಟು ಒಂದಷ್ಟು ಜನಕ್ಕೆ ಮಾದರಿಯಾಗಿ ಇರ್ತಾರೆ. ಎಲ್ಲರಿಗೂ ಮಾದರಿಯಾಗಿ ಕೊನೆವರೆಗೂ ದರ್ಶನ್ ಅವರು ಇರಬೇಕು ಎಂದು ನಾನು ಭಾವಿಸ್ತೀನಿ. ಕಾರಣ ಗೆಲುವು ಲೈಫ್ ಟೈಮ್ ಇರಲ್ಲ. ಗೆದ್ದಾಗ ತಗ್ಗಿಬಗ್ಗಿ ನಡೆಯಬೇಕು, ಸೋತಾಗ ಏನು ಮಾಡಿದ್ರು ನಡೆಯುತ್ತೆ. ಗೆದ್ದಾಗ ಎಲ್ಲರ ಕಣ್ಣು ನಮ್ಮ ಮೇಲೆ ಇರುತ್ತೆ, ಸೋತರೆ ಯಾರು ನಮ್ಮನ್ನು ನೋಡಲ್ಲ ಎಂದರು.
ದರ್ಶನ್ ಅವರು ಮಾತಾಡಿದ್ದು ಸೂಕ್ತ ಅನಿಸಲಿಲ್ಲ. ಅವರು ಮಾತಾಡಿದ್ದು ಅವರಿಗೆ ಸರಿ ಅನಿಸಬೇಕು. ನನ್ನಿಂದ ಏನಾದ್ರೂ ತಪ್ಪಿದ್ರೆ ನಾನು ಕ್ಷಮೆ ಕೇಳ್ತೀನಿ. ನನ್ನದು ತಪ್ಪೇನಿಲ್ಲ, ಕ್ಷಮೆ ಕೇಳುವ ಪ್ರಮೇಯ ಕೂಡ ಇಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ, ನಾನು ಯೂಟರ್ನ್ ಹೊಡೆಯೋ ಗಿರಾಕಿ ಅಲ್ಲ. ಸಮಸ್ಯೆ ಬಂದಾಗ ಬೆನ್ನು ತೋರಿಸಲ್ಲ, ನಂದೇನಿದ್ರೂ ಫೇಸ್ ಟು ಫೇಸ್ ಅಷ್ಟೇ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ