Advertisment

ಖರ್ಚಿಗಾಗಿ ಅಮ್ಮನಿಗೆ 200 ರೂಪಾಯಿ ಕೊಟ್ಟ ಮಗ.. ಇಬ್ಬರು ಮಕ್ಕಳ ಜೊತೆ ಹಾಳು ಬಾವಿಗೆ ಹಾರಿದ ಪತ್ನಿ..

author-image
Ganesh
Updated On
ಖರ್ಚಿಗಾಗಿ ಅಮ್ಮನಿಗೆ 200 ರೂಪಾಯಿ ಕೊಟ್ಟ ಮಗ.. ಇಬ್ಬರು ಮಕ್ಕಳ ಜೊತೆ ಹಾಳು ಬಾವಿಗೆ ಹಾರಿದ ಪತ್ನಿ..
Advertisment
  • ಮಹಿಳೆಯ ದುಡುಕಿನ ನಿರ್ಧಾರಕ್ಕೆ ಬೆಚ್ಚಿಬಿದ್ದ ಇಡೀ ಗ್ರಾಮ
  • ಗ್ರಾಮದಲ್ಲಿ ಶೋಕ ಸಾಗರ, ಮುದ್ದಾದ ಮಕ್ಕಳು ಸಾವು
  • ಕೇಸ್ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭ

ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಮಹಿಳೆಯೊಬ್ಬಳು ತನ್ನ ಇಬ್ಬರು ಮುಗ್ಧ ಮಕ್ಕಳೊಂದಿಗೆ ಬಾವಿಗೆ ಹಾರಿದ ಘಟನೆ ನಡೆದಿದೆ. ತಾಯಿ ಮಾಡಿದ ದುಡುಕಿನ ನಿರ್ಧಾರದಿಂದ ಮೂವರೂ ಸಾವನ್ನಪ್ಪಿದ್ದಾರೆ.

Advertisment

ಬಾವಿಗೆ ಹಾರಿದ ಪತಿ ತನ್ನ ತಾಯಿಗೆ 200 ರೂಪಾಯಿ ಕೊಟ್ಟಿದ್ದಕ್ಕೆ ಕೋಪಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಹಣದ ವಿಚಾರಕ್ಕೆ ಪತಿ ಮತ್ತು ಪತ್ನಿ ನಡುವೆ ಜಗಳ ತಾರಕಕ್ಕೇರಿ ಸಾವಿನಲ್ಲಿ ಅಂತ್ಯವಾಗಿದೆ ಎಂದು ವರದಿಯಾಗಿದೆ. ಒಂದೇ ಮನೆಯ ಮೂವರು ಸಾವಿಗೀಡಾದ ಪ್ರಕರಣವು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಪೊಲೀಸರು ಕೇಸ್ ದಾಖಲಿಸಿಕೊಂಡು ಬಾವಿಯಲ್ಲಿ ಬಿದ್ದಿದ್ದ ಮೂವರ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:ವಿಲ್ ಜಾಕ್ಸ್​​ರಲ್ಲಿ ಎಬಿ ಡಿವಿಲಿಯರ್ಸ್​ ಕಂಡ ಫ್ಯಾನ್ಸ್.. ಆರ್​ಸಿಬಿ ಸ್ಫೋಟಕ ಆಟಗಾರನಿಗೆ ಒಲಿಯಿತು ‘ಆ ಪಟ್ಟ’..!

publive-image

ನಿನ್ನೆ ಪತಿಯೊಂದಿಗೆ ಜಗಳವಾಡಿ ಬಾವಿಗೆ ಹಾರಿದ್ದಾಳೆ. ಆಕೆಯ ಹೆಸರು ಅಂಜು (22) ಎಂದು ತಿಳಿದುಬಂದಿದೆ. ಚಿತ್ರಕೂಟದ ಎಸ್​ಪಿ ಅರುಣ್ ಕುಮಾರ್ ಸಿಂಗ್ ಪ್ರಕರಣದ ಬಗ್ಗೆ ಮಾತನಾಡಿ.. ಗ್ರಾಮದಲ್ಲಿ ವಾಸವಿರುವ ಸಬಿತ್ ಬೆಳಗ್ಗೆ ತವರು ಮನೆಗೆ ಹೋಗುತ್ತಿದ್ದ ತಾಯಿಗೆ ಖರ್ಚಿಗೆ ಎಂದು 200 ರೂಪಾಯಿ ಕೊಟ್ಟಿದ್ದ. ಇದಕ್ಕೆ ಅಂಜು ಕೋಪಿಸಿಕೊಂಡಿದ್ದಳು. ಕೊನೆಗೆ ಸಬಿತ್ ಯಾವುದೋ ಚಿಕಿತ್ಸೆ ಹಿನ್ನೆಯಲ್ಲಿ ಆಸ್ಪತ್ರೆಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಹೆಂಡತಿ ಹಾಗೂ ಇಬ್ಬರು ಮಕ್ಕಳು ಕಾಣಲಿಲ್ಲ.

Advertisment

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್​ ಬಳಕೆದಾರರಿಗೆ ಬಿಗ್ ಶಾಕ್.. ನೀವು ಓದಲೇಬೇಕಾದ ಶಾಕಿಂಗ್ ನ್ಯೂಸ್..!

publive-image

ಹೆಂಡತಿ ಮತ್ತು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅಕ್ಕ-ಪಕ್ಕದ ಮನೆಯವರನ್ನು ಕೇಳಿದ್ದಾರೆ. ನಂತರ ಸಂಬಂಧಿಕರ ಬಳಿ ವಿಚಾರಿಸಲು ಪ್ರಾರಂಭಿಸಿದ್ದ. ಸುಮಾರು 2 ಗಂಟೆಗಳ ಬಳಿಕ ದಾರಿಯಲ್ಲಿನ ಬಾವಿಯಲ್ಲಿ ಮಹಿಳೆಯ ಶವ ಬಿದ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹೋಗಿ ನೋಡಿದಾಗ ಆಘಾತ ಎದುರಾಗಿದೆ.

ಇದನ್ನೂ ಓದಿ:ಕೋರ್ಟ್​ ಮುಂದೆ ಸತ್ಯ ಒಪ್ಪಿಕೊಂಡ ಕೊರೊನಾ ಲಸಿಕೆ ಕಂಪನಿ.. ಕೋವಿಶೀಲ್ಡ್​ ತೆಗೆದುಕೊಂಡವ್ರಿಗೆ ಗಢಗಢ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment