newsfirstkannada.com

ಲೆಜೆಂಡ್​​ಗಳಿಗೇ ನರಕ ದರ್ಶನ.. ಆರ್​ಸಿಬಿಗೆ ಸಿಕ್ಕಿದೆ ಹೊಸ ಭರವಸೆ..!

Share :

Published April 30, 2024 at 1:17pm

Update May 1, 2024 at 7:28am

  ಆರ್​​​ಸಿಬಿ ಅಭಿಮಾನಿಗಳ ದಿಲ್​ ಗೆದ್ದ ವಿಲ್​ ಜಾಕ್ಸ್​​​​

  ವಿಲ್​ ಜಾಕ್ಸ್​ ಜಬರ್ದಸ್ತ್​ ಆಟಕ್ಕೆ ದಂಗಾದ ಫ್ಯಾನ್ಸ್​..!

  ಯಂಗ್​​ ಬ್ಯಾಟರ್​ ಅರ್ಭಟ, ಲೆಜೆಂಡ್​​ಗೆ ನರಕ ದರ್ಶನ..!

ಒಂದೇ ಒಂದು ಸ್ಫೋಟಕ ಇನ್ನಿಂಗ್ಸ್​ನಿಂದ ವಿಲ್​ ಜಾಕ್ಸ್​ ಆರ್​​​ಸಿಬಿ ಅಭಿಮಾನಿಗಳ ದಿಲ್​ ಗೆದ್ದಿದ್ದಾರೆ. ಗುಜರಾತ್​​ ವಿರುದ್ಧ ಆಡಿದ್ದು, ಶತಕ ಸಿಡಿಸಿದ್ದು ಎಲ್ಲ.. ವಿಲ್​ ಜಾಕ್ಸೇ.. ಆದರೆ ಫ್ಯಾನ್ಸ್​​ಗೆ ನೆನಪಾಗ್ತಿರೋದು ಮಾತ್ರ ಎಬಿ ಡಿವಿಲಿಯರ್ಸ್​​.. ವಿಲ್​ ಜಾಕ್ಸ್​ ಆಟಕ್ಕೂ ಮಿಸ್ಟರ್​ 360 ಎಬಿಡಿಗೂ ಏನ್ ಸಂಬಂಧ ಅಂತೀರಾ?

ಆರ್​​ಸಿಬಿ vs ಗುಜರಾತ್​ ಟೈಟನ್ಸ್​ ನಡುವಿನ ಪಂದ್ಯ ಮುಗಿದು ಒಂದು ದಿನವೇ ಕಳೀತು. ಆದರೂ ಆ ಪಂದ್ಯದ ಮತ್ತಿನಿಂದ ಆರ್​​ಸಿಬಿ ಫ್ಯಾನ್ಸ್​ ಹೊರಬಂದಿಲ್ಲ. ಯಂಗ್​ ಬ್ಯಾಟರ್​ ವಿಲ್​ ಜಾಕ್ಸ್​ ಆಡಿದ ಅತ್ಯಮೋಘ ಇನ್ನಿಂಗ್ಸ್​ಗೆ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಗುಜರಾತ್​ ಬೌಲರ್ಸ್​ಗೆ ವಿಲ್​ ಜಾಕ್ಸ್​​ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟ ಏಟುಗಳನ್ನು ಮತ್ತೆ ಮತ್ತೆ ನೋಡ್ತಿದ್ದಾರೆ.

ಇದನ್ನೂ ಓದಿ:ನೇಹಾ ಹಿರೇಮಠ ಹತ್ಯೆ ಪ್ರಕರಣದ ಮೇಲೆ ನಮಗೆ ಅನುಮಾನ ಇದೆ -ಅಶೋಕ್ ಹೀಗ್ಯಾಕೆ ಅಂದರು?

ವಿಲ್​ ಜಾಕ್ಸ್​ ಜಬರ್ದಸ್ತ್​ ಆಟಕ್ಕೆ ದಂಗಾದ ಫ್ಯಾನ್ಸ್​
ಈ ಸೀಸನ್​ ಐಪಿಎಲ್​ನಲ್ಲಿ ಆರ್​​ಸಿಬಿಯ ಕಳಪೆ ಅಟ ನೋಡಿ ಫ್ಯಾನ್ಸ್​ ಬೇಸತ್ತು ಹೋಗಿದ್ರು. ಗುಜರಾತ್​ ಟೈಟನ್ಸ್​​ ತಂಡ 200ರ ಸವಾಲಿನ ಮೊತ್ತ ಕಲೆ ಹಾಕಿದಾಗಲೂ, ಆರ್​​ಸಿಬಿ ಬ್ಯಾಟರ್ಸ್​ ಇದನ್ನು ಚೇಸ್​ ಮಾಡ್ತಾರೆ ಅನ್ನೋ ನಂಬಿಕೆ ಫ್ಯಾನ್ಸ್​​ಗೆ ಇರಲಿಲ್ಲ. ಡುಪ್ಲೆಸಿ ವಿಕೆಟ್​ ಹೋದಾಗ ಆ ನಂಬಿಕೆ ಇನ್ನಷ್ಟು ಕುಸಿದು ಹೋಗಿತ್ತು. ವಿಲ್​ ಜಾಕ್ಸ್​​ ಆಡಿದ ಅತ್ಯಾದ್ಭುತ ಇನ್ನಿಂಗ್ಸ್​ ಫ್ಯಾನ್ಸ್​ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಿತು. ಜಾಕ್ಸ್​ ಜಬರ್ದಸ್ತ್​ ಆಟ ಕಂಡು ಫ್ಯಾನ್ಸ್​ ದಂಗಾದ್ರು.

ಯಂಗ್​​ ಬ್ಯಾಟರ್​ ಅರ್ಭಟ, ಲೆಜೆಂಡ್​​ಗೆ ನರಕ ದರ್ಶನ
ಗುಜರಾತ್​​ ಬೌಲರ್​​ಗಳನ್ನ ಸರಿಯಾಗಿ ರುಬ್ಬಿದ ವಿಲ್​ ಜಾಕ್ಸ್​​ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಆರಂಭದ 17 ಎಸೆತಗಳಲ್ಲಿ ವಿಲ್​ ಜಾಕ್ಸ್​ ಗಳಿಸಿದ್ದು ಕೇವಲ 17 ರನ್​ಗಳನ್ನ ಮಾತ್ರ. ಆ ಬಳಿಕ ಅರ್ಧಶತಕ ಸಿಡಿಸಿದ್ದು, 31 ಎಸೆತಗಳಲ್ಲಿ. ಆ ಹಂತದಲ್ಲಿ ಯಾರೊಬ್ಬರೂ ಕೂಡ ವಿಲ್​ ಜಾಕ್ಸ್​​ ಸೆಂಚುರಿ ಸಿಡಿಸ್ತಾರೆ ಅಂತಾ ಕನಿಷ್ಟ ಊಹಿಸಿಯೂ ಇರಲಿಲ್ಲ. ವಿಲ್​​ಜಾಕ್ಸ್​​ ಆನ್​​ಫೀಲ್ಡ್​ನಲ್ಲಿ​ ಮ್ಯಾಜಿಕ್​ ಮಾಡಿದರು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್​ ಬಳಕೆದಾರರಿಗೆ ಬಿಗ್ ಶಾಕ್.. ನೀವು ಓದಲೇಬೇಕಾದ ಶಾಕಿಂಗ್ ನ್ಯೂಸ್..!

ವಿಲ್​​ ಜಾಕ್ಸ್​​​​​​ ಆಟ ನೋಡಿ ಎಬಿಡಿ ನೆನಪಾದರು ಎಬಿಡಿ
31 ಎಸೆತಕ್ಕೆ ಹಾಫ್​ ಸೆಂಚುರಿ ಪೂರೈಸಿದ ವಿಲ್​ ಜಾಕ್ಸ್​​ ನಂತರದ 10 ಎಸೆತಗಳಲ್ಲಿ ಗೇಮ್​ ಚೇಂಜ್​ ಮಾಡಿಬಿಟ್ರು. ಮೋಹಿತ್​ ಶರ್ಮಾ ಓವರ್​​ನಲ್ಲಿ 29 ರನ್​ ಚಚ್ಚಿದ ಜಾಕ್ಸ್​, ಟಿ20 ಕ್ರಿಕೆಟ್​​ನ ಲೆಜೆಂಡ್​ ಅನ್ನಿಸಿಕೊಂಡ ರಶೀದ್​ ಖಾನ್​ರನ್ನೂ ಬಿಡಲಿಲ್ಲ. ರಶೀದ್​ ಬೌಲಿಂಗ್​ನಲ್ಲಿ 4 ಸಿಕ್ಸರ್​​, 1 ಬೌಂಡರಿ ಚಚ್ಚಿ ಸೆಂಚುರಿ ಪೂರೈಸಿದ್ರು. ಜಸ್ಟ್​ 6 ನಿಮಿಷಗಳಲ್ಲಿ ಗೇಮ್​ ಚೇಂಜ್​ ಮಾಡಿದ ಜಾಕ್ಸ್, ಇಡೀ ವಿಶ್ವವನ್ನೇ ವಿಸ್ಮಯಗೊಳಿಸಿದ್ರು. ಆ ಮ್ಯಾಜಿಕ್​ ಕಂಡ ಫ್ಯಾನ್ಸ್​ ನೆನಪಾಗಿದ್ದು ಎಬಿ ಡಿವಿಲಿಯರ್ಸ್​.

ಅಂದು ಎಬಿ ಡಿವಿಲಿಯರ್ಸ್​​.. ಇಂದು ವಿಲ್​​​ ಜಾಕ್ಸ್..!​
ಎಬಿ ಡಿವಿಲಿಯರ್ಸ್​.. ಆರ್​​ಸಿಬಿಯ ಆಪತ್ಭಾಂದವ.. ಎಷ್ಟೇ ದೊಡ್ಡ ಟಾರ್ಗೆಟ್​ ಇರಲಿ.. ಎದುರಾಳಿ ಎಂತಾ ಖತರ್ನಾಕ್​ ತಂಡವೇ ಅಗಿರಲಿ.. ಎಬಿಡಿ ಕ್ರಿಸ್​ನಲ್ಲಿದ್ದಷ್ಟು ಹೊತ್ತು ಆರ್​​ಸಿಬಿ ಫ್ಯಾನ್ಸ್​ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿರ್ತಾ ಇದ್ರು. ಮಿಸ್ಟರ್​ 360 ಕ್ರಿಸ್​​ನಲ್ಲಿದ್ದಷ್ಟು ಹೊತ್ತು ಭಯ ಅನ್ನೋದು ಎದುರಾಳಿ ಪಾಳಯದಲ್ಲಿ ಇರ್ತಿತ್ತು. ಡಿವಿಲಿಯರ್ಸ್​​ಗಿದ್ದ ತಾಖತ್ತೇ ಅಂತಾದ್ದು. ಬ್ಯಾಟ್​​ ಎಂಬ ಗದೆ ಹಿಡಿದು ಎಬಿಡಿ ಘರ್ಜಿಸಲು ಶುರುವಿಟ್ಟು ಕೊಂಡ್ರೆ, ಗೆಲುವಿನ ಗಡಿ ದಾಟುವವರೆಗೆ ಬಿಡ್ತಿರಲಿಲ್ಲ.

ಇದನ್ನೂ ಓದಿಆರ್​ಸಿಬಿಯ ವಿಲ್​ ಜಾಕ್ಸ್​ ಅಂತಿಂಥ ಬ್ಯಾಟ್ಸ್​​ಮನ್​ ಅಲ್ಲವೇ ಅಲ್ಲ.. ಇವರ ಇತಿಹಾಸ ಭಯಂಕರ..!

ಮಿಸ್ಟರ್​ 360 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ನಂತರದಲ್ಲಿ ಅಂತಾ ಒಬ್ಬ ಛಲದಂಕಮಲ್ಲನ ಕೊರತೆ ಆರ್​​ಸಿಬಿಗೆ ಕಾಡ್ತಿತ್ತು. ಇದೀಗ ಗುಜರಾತ್​ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ವಿಲ್​ ಜಾಕ್ಸ್​​, ಎಬಿಡಿಯನ್ನ ನೆನಪಿಸಿದ್ದಾರೆ. ಅಭಿಮಾನಿಗಳು ಥೇಟ್​ ಎಬಿಡಿ ಆಟವನ್ನೇ ನೋಡಿದಂತಾಯ್ತು ಅಂತಿದ್ದಾರೆ. ಆರ್​​ಸಿಬಿ ಫ್ರಾಂಚೈಸಿ ಕೂಡ ಎಬಿಡಿಯ SUCCESSOR ಎಂದೇ ಹೇಳಿದೆ.

ಒಟ್ಟಿನಲ್ಲಿ ಗುಜರಾತ್​ ವಿರುದ್ಧ ಬೊಂಬಾಟ್​ ಆಟವಾಡಿದ ವಿಲ್​ ಜಾಕ್ಸ್​ ಆರ್​​ಸಿಬಿ ಅಭಿಮಾನಿಗಳ ದಿಲ್​ ಗೆದ್ದಿದ್ದಾರೆ. ಒಂದು ಶತಕದಾಟ ನೋಡಿ ಎಬಿಡಿಯ ಉತ್ತರಾಧಿಕಾರಿ ಎಂಬ ಪಟ್ಟ ಕೊಟ್ಟಿದ್ದು, ವಿಲ್​ ಜಾಕ್ಸ್​ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಈ ನಿರೀಕ್ಷೆಯನ್ನ ವಿಲ್​ ಜಾಕ್ಸ್​​ ನಿರಾಸೆಗೊಳಿದಿರಲಿ ಅನ್ನೋದೇ ಎಲ್ಲರ ಆಶಯವಾಗಿದೆ.

ಇದನ್ನೂ ಓದಿ:ಟೀಕೆ ಟೀಕೆ ಟೀಕೆ.. ಕೊಹ್ಲಿ ಕಂಡ್ರೆ ಅದ್ಯಾಕೆ ಹಿಂಗೆ ಆಡ್ತಾರೋ.. ಆದರೆ ಕಿಂಗ್ ಕೊಹ್ಲಿ ಉತ್ತರ ಮಾತ್ರ ಬೆಂಕಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಲೆಜೆಂಡ್​​ಗಳಿಗೇ ನರಕ ದರ್ಶನ.. ಆರ್​ಸಿಬಿಗೆ ಸಿಕ್ಕಿದೆ ಹೊಸ ಭರವಸೆ..!

https://newsfirstlive.com/wp-content/uploads/2024/04/WILL-JACKS-7.jpg

Load More