newsfirstkannada.com

ಕೊಹ್ಲಿ ಕಂಡ್ರೆ ಅದ್ಯಾಕೆ ಹಿಂಗೆ ಆಡ್ತಾರೋ ಜನ.. ಕಿಂಗ್ ಕೊಹ್ಲಿ ಉತ್ತರ ಮಾತ್ರ ಬೆಂಕಿ..!

Share :

Published April 30, 2024 at 10:23am

Update May 1, 2024 at 6:47am

    ಕೊಹ್ಲಿ ಟೀಕಿಸೋಕು ಮುನ್ನ ಎಚ್ಚರ, ಎಚ್ಚರ..!

    ಕೊಹ್ಲಿ ಆನ್ಸರ್​ಗೆ ಕಾಮೆಂಟೇಟರ್ಸ್​ ಗಪ್​ಚುಪ್

    ವಿಶ್ವಕಪ್​​ಗೆ ಆಯ್ಕೆಗೆ ಆಗೋಕೆ ಇನ್ನೇನು ಬೇಕು..?

ತಿರುಗೇಟು ಕೊಟ್ರೆ ಮುಟ್ಟಿನೋಡಿಕೊಳ್ಳುವಂಗೆ ಕೊಡಬೇಕು. ಅದ್ಹೇಗೆ ಅನ್ನೋದನ್ನ ಕಿಂಗ್ ಕೊಹ್ಲಿ ನೋಡಿ ಕಲಿಬೇಕು. ವಿರಾಟ್ ಕೊಹ್ಲಿ ಸ್ಟ್ರೈಕ್​ರೇಟ್​​ ಬಗ್ಗೆ ಟೀಕಿಸಿದೋರು ಒಬ್ಬರಾ? ಇಬ್ಬರಾ? ಒಂದು ಪಂದ್ಯದಲ್ಲಿ ಸ್ಟ್ರೈಕ್​ರೇಟ್​​​ ಕಮ್ಮಿ ಆಗಿದ್ದಕ್ಕೆ ಮನ ಬಂದಂತೆ ಟೀಕಿಸಿದ್ರು. ಅಂತವರಿಗೆ ರನ್ ಮಷೀನ್ ಖಡಕ್​​ ಆನ್ಸರ್ ಕೊಟ್ಟಿದ್ದಾರೆ.

ಹಲವರು ನನ್ನ ಸ್ಟ್ರೈಕ್​ರೇಟ್​ ಬಗ್ಗೆ ಹಾಗೂ ಸ್ಪಿನ್​ಗೆ ಚೆನ್ನಾಗಿ ಆಡಲ್ಲ ಅಂತ ಮಾತನಾಡುತ್ತಾರೆ. ಆದ್ರೆ ಮೈದಾನದಲ್ಲಿ ಆಡುವ ನನಗೆ ಪಂದ್ಯದ ಪರಿಸ್ಥಿತಿ ಗೊತ್ತಿರುತ್ತೆ. ಕಾಮೆಂಟೇಟರಿ ಬಾಕ್ಸ್​​​​​​​​​​​ ಅಲ್ಲಿ ಕುಳಿತಿರುವವರಿಗೆ ಅಲ್ಲ. ಟೀಮ್​​​​​​​ ಗೆಲ್ಲಿಸೋದಷ್ಟೇ ನನ್ನ ಜವಾಬ್ದಾರಿ -ವಿರಾಟ್ ಕೊಹ್ಲಿ, RCB ಆಟಗಾರ

ಗುಜರಾತ್ ಟೈಟನ್ಸ್​ ವಿರುದ್ಧದ ಪಂದ್ಯದಲ್ಲಿ ಗೆದ್ದ ನಂತರ ಕಿಂಗ್ ಕೊಹ್ಲಿ ಆಡಿದ ಖಡಕ್​​ ಮಾತುಗಳಿವು. ಸನ್​ರೈಸರ್ಸ್​​ ಹೈದ್ರಾಬಾದ್​ ಎದುರು ಸ್ಲೋ ಇನ್ನಿಂಗ್ಸ್​ ಆಡಿದ್ದಕ್ಕೆ ಟೀಕಾಕಾರರು ಮುಗಿಬಿದ್ದಿದ್ರು. ಸ್ಪಿನ್​ ವಿರುದ್ಧ ಪರದಾಡಿದ್ದಕ್ಕೆ ಹಿಗ್ಗಾಮುಗ್ಗಾ ಟೀಕಿಸಿದ್ರು. ಹೀಗೆ ಟೀಕೆಸಿದವರಿಗೆಲ್ಲಾ ಇದೀಗ ವಿರಾಟ್​ ಮುಟ್ಟಿ ನೋಡಿಕೊಳ್ಳುವಂತ ಅನ್ಸರ್ ಕೊಟ್ಟಿದ್ದಾರೆ. ವಿರಾಟ್ ಕೊಟ್ಟ ಈ ಖಡಕ್ ಆನ್ಸರ್​ಗೆ ಟೀಕಾಕಾರರು ಗಪ್​ಚುಪ್ ಆಗಿದ್ದಾರೆ.

ಇದನ್ನೂ ಓದಿ:ಕೋರ್ಟ್​ ಮುಂದೆ ಸತ್ಯ ಒಪ್ಪಿಕೊಂಡ ಕೊರೊನಾ ಲಸಿಕೆ ಕಂಪನಿ.. ಕೋವಿಶೀಲ್ಡ್​ ತೆಗೆದುಕೊಂಡವ್ರಿಗೆ ಗಢಗಢ..!

ಇಂಪ್ರೆಸ್ಸಿವ್ ಸ್ಟ್ರೈಕ್​​ರೇಟ್​​​​..!
ನಿಜ ಹೇಳಬೇಕಂದ್ರೆ ಕಿಂಗ್ ಕೊಹ್ಲಿ ಹೈದ್ರಾಬಾದ್​​​​ ಎದುರಿನ ಪಂದ್ಯವೊಂದನ್ನ ಹೊರತಪಡಿಸಿ ಉಳಿದೆಲ್ಲಾ ಪಂದ್ಯಗಳಲ್ಲಿ ಇಂಪ್ರೆಸ್ಸಿವ್​ ಸ್ಟ್ರೈಕ್​ರೇಟ್ನಲ್ಲಿ ಬ್ಯಾಟ್​ ಬೀಸಿದ್ದಾರೆ. ಆದರೂ ಮಾಜಿ ಕ್ರಿಕೆಟಿಗರು ಹಾಗೂ ಕೆಲ ಎಕ್ಸ್​ಪರ್ಟ್ಸ್ ಕೊಹ್ಲಿ ವಿರುದ್ಧ ಮುಗಿಬಿದ್ದಿದ್ರು. ಗುಜರಾತ್ ಟೈಟನ್ಸ್ ಸಿಡಿದೆದ್ದ ಕೊಹ್ಲಿ 159.09 ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​​ ಬೀಸಿ ವಿರೋಧಿಗಳ ಬಾಯಿ ಮುಚ್ಚಿಸಿದ್ರು. INTERESTING ಸಂಗತಿ ಏನಂದ್ರೆ ಸೆಂಚುರಿ ಸಾಮ್ರಾಟ ಸೀಸನ್​​ನಿಂದ ಸೀಸನ್​ಗೆ ಸ್ಟ್ರೈಕ್​ರೇಟ್ ಹೆಚ್ಚಿಸಿಕೊಳ್ತಲೇ ಇದ್ದಾರೆ.

ಕೊಹ್ಲಿ ಸ್ಟ್ರೈಕ್​ರೇಟ್​​
2022ನೇ ಐಪಿಎಲ್​​ನಲ್ಲಿ 115.09 ಬ್ಯಾಟಿಂಗ್ ಸ್ಟ್ರೈಕ್​​ರೇಟ್ ಹೊಂದಿದ್ದ ಕಿಂಗ್ ಕೊಹ್ಲಿ 2023 ರಲ್ಲಿ 139.82ಕ್ಕೆ ಸ್ಟ್ರೈಕ್​ರೇಟ್ ಹೆಚ್ಚಿಸಿಕೊಂಡ್ರು. ಪ್ರಸಕ್ತ ಐಪಿಎಲ್​​ನಲ್ಲಿ ಇನ್ನಷ್ಟು ವೈಲೆಂಟ್​​ ಆಗಿರೋ ವಿರಾಟ್ 147.49 ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸ್ತಿದ್ದಾರೆ.

ಇದನ್ನೂ ಓದಿ:ಪಾಂಡ್ಯಗೆ ಮತ್ತೊಂದು ಆಘಾತ.. ಸ್ಟಾರ್ ಆಟಗಾರನಿಂದ ಟೀಂ ಇಂಡಿಯಾದ ಉಪನಾಯಕನ ಪಟ್ಟ ಟೇಕ್ ಓವರ್..!

ಯಂಗ್​ಸ್ಟರ್ಸ್​ ನಾಚುವಂತ ‘ಧಮ್​’ದಾರ್​​​​​​ ಪರ್ಫಾಮೆನ್ಸ್​​​
35ರ ಕಿಂಗ್ ಕೊಹ್ಲಿ ಪ್ರಸಕ್ತ ಐಪಿಎಲ್​ನಲ್ಲಿ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಧಮ್​ದಾರ್ ಪ್ರದರ್ಶನ ನೀಡಿ ಯಂಗ್​ಸ್ಟರ್ಸ್​ಗೆ ಸಡ್ಡು ಹೊಡೆದಿದ್ದಾರೆ. ಟೂರ್ನಿ ಆರಂಭದಿಂದ ಇಲ್ಲಿ ತನಕ ಆರೆಂಜ್​​ ಕ್ಯಾಪ್​​​​​​ ಒಡೆಯನಾಗಿದ್ದಾರೆ. ಸೀಸನ್​​ 17ನೇ ಐಪಿಎಲ್​​​​ನಲ್ಲಿ ವಿರಾಟ್ ಕೊಹ್ಲಿ 10 ಪಂದ್ಯಗಳನ್ನಾಡಿದ್ದು 500 ರನ್ ಬಾರಿಸಿದ್ದಾರೆ. 4 ಅರ್ಧಶತಕ ಹಾಗೂ 1 ಅಮೋಘ ಶತಕ ಸಿಡಿಸಿದ್ದಾರೆ. ಸ್ಪಿನ್​ ವಿರುದ್ಧ ವಿರಾಟ್​ ಕೊಹ್ಲಿ ತೀರಾ ಕಳಪೆ ಪರ್ಫಾಮೆನ್ಸ್​ ಏನು ನೀಡಿಲ್ಲ. ಈ ಐಪಿಎಲ್​ನಲ್ಲಿ 135.66ರ ಡಿಸೆಂಟ್​ ಸ್ಟ್ರೈಕ್​ರೇಟ್ ಹೊಂದಿದ್ದಾರೆ. 157 ಎಸೆತ ಎದುರಿಸಿ 213 ರನ್​ಗಳಿಸಿದ್ದು, 11 ಬೌಂಡರಿ, 10 ಸಿಕ್ಸರ್​​ ಸಿಡಿಸಿದ್ದಾರೆ.

ವಿಶ್ವಕಪ್​​ಗೆ ಆಯ್ಕೆ ಆಗೋಕೆ ಇನ್ನೇನು ಬೇಕು?
ಒಂದೆಡೆ ಇಂಪ್ರೆಸ್ಸಿವ್ ಸ್ಟ್ರೈಕ್​ರೇಟ್​​. ಇನ್ನೊಂದೆಡೆ ಟೂರ್ನಿಯಲ್ಲಿ ಟಾಪ್​​ ಸ್ಕೋರರ್​​​. ಟಿ20 ವಿಶ್ವಕಪ್​ ಆಯ್ಕೆಗೆ ಇನ್ನೇನ್ ಬೇಕು ನೀವೇ ಹೇಳಿ.? ಅತಿ ಶೀಘ್ರದಲ್ಲೆ ಅಜಿತ್ ಅಗರ್ಕರ್​ ಆ್ಯಂಡ್ ಟೀಮ್, ಟಿ20 ವಿಶ್ವಕಪ್​ಗೆ ಭಾರತ ತಂಡವನ್ನ ಪ್ರಕಟಿಸಲಿದೆ. ಕಿಂಗ್ ಕೊಹ್ಲಿಗೆ ಸ್ಥಾನ ನೀಡುವ ಕುರಿತು ಗಂಭೀರ್​​ ಚರ್ಚೆ ನಡೆದಿದೆ. ಕೊಹ್ಲಿಯ ಅಪಾರ ಅನುಭವ ವಿಶ್ವಕಪ್​ನಲ್ಲಿ ತಂಡಕ್ಕೆ ವರದಾನವಾಗಲಿದೆ. ಆಟ ಹಾಗೂ ಅನುಭವದ ಲೆಕ್ಕಾಚಾರದಲ್ಲಿ ಅನುಭವಿ ಕೊಹ್ಲಿಗೆ ವಿಶ್ವಕಪ್​ ತಂಡದಲ್ಲಿ ಸ್ಥಾನ ಬಹುತೇಕ ಕನ್ಫರ್ಮ್ ಆಗಿದೆ. ಅಧಿಕೃತ ಅನೌನ್ಸ್​ಮೆಂಟ್​ ಮಾತ್ರ ಬಾಕಿಯಿದೆ.

ಇದನ್ನೂ ಓದಿ:ಭಾರೀ ಮಳೆಗೆ 10 ಮನೆಗಳು ಕುಸಿತ.. ನದಿಗಳಂತಾದ ರಸ್ತೆಗಳು, ಪ್ರವಾಹದ ಮುನ್ಸೂಚನೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ಕಂಡ್ರೆ ಅದ್ಯಾಕೆ ಹಿಂಗೆ ಆಡ್ತಾರೋ ಜನ.. ಕಿಂಗ್ ಕೊಹ್ಲಿ ಉತ್ತರ ಮಾತ್ರ ಬೆಂಕಿ..!

https://newsfirstlive.com/wp-content/uploads/2024/04/KOHLI-11.jpg

Load More