ಫೇಸ್​​ಬುಕ್ ಲವ್​​; ಪ್ರೇಯಸಿಯನ್ನು ಮದುವೆ ಆಗಲು ಪಾಕ್​ಗೆ ಹೋದ ಭಾರತೀಯ; ಆಮೇಲೇನಾಯ್ತು?

author-image
Veena Gangani
Updated On
ಫೇಸ್​​ಬುಕ್ ಲವ್​​; ಪ್ರೇಯಸಿಯನ್ನು ಮದುವೆ ಆಗಲು ಪಾಕ್​ಗೆ ಹೋದ ಭಾರತೀಯ; ಆಮೇಲೇನಾಯ್ತು?
Advertisment
  • ಈ ಹಿಂದೆ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕ್​ನಿಂದ ಬಂದಿದ್ದ ಸೀಮಾ
  • ಫೇಸ್​ಬುಕ್ ಲವ್ವರ್​​ ಭೇಟಿಗಾಗಿ ಪಾಕಿಸ್ತಾನಕ್ಕೆ ಹೋಗಿದ್ದ ವ್ಯಕ್ತಿ ಅರೆಸ್ಟ್​
  • ಫೇಸ್‌ಬುಕ್‌ನಲ್ಲಿ ಪ್ರೀತಿಸಿದ ಯುವತಿ ನೋಡಲು ಹೋದವನು ಏನಾದಾ?

ಸೀಮಾ ಹೈದರ್​​ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪಬ್​ಜೀ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದವರು. ಇದಾದ ಬಳಿಕ ಫೇಸ್​ಬುಕ್ ಲವ್ವರ್​​ ಭೇಟಿಗಾಗಿ ಅಂಜು ಪಾಕಿಸ್ತಾನ ಹೋಗಿ ಮರಳಿ ಬಂದಿದ್ದಳು. ಇದೀಗ ಇಂತಹದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಪಾಕಿಸ್ತಾನದಿಂದ ಬಂದ ಸೀಮಾಗೆ ಮತ್ತೆ ಕಂಟಕ; ಬಾಲಿವುಡ್​ನಲ್ಲಿ ಸಿನಿಮಾ ಮಾಡದಂತೆ ಎಚ್ಚರಿಕೆ..!

ಹೌದು, ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಯುವತಿ ಜೊತೆಗೆ ಸ್ನೇಹ ಬೆಳೆಸಿದ್ದಾನೆ. ಇದಾದ ಬಳಿಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಭೇಟಿಯಾಗಲು ಅಕ್ರಮವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ. ಆದ್ರೆ, ತಪಾಸಣೆ ವೇಳೆ ಭಾರತದಿಂದ ಅಕ್ರಮವಾಗಿ ಪಾಕಿಸ್ತಾನಕ್ಕೆ ಬಂದ ಆರೋಪದ ಮೇಲೆ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಮಂಡಿ ಬಹೌದ್ದೀನ್ ನಗರದಲ್ಲಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ನಾಗ್ಲಾ ಖಟ್ಕರಿ ಗ್ರಾಮದ ನಿವಾಸಿ ಬಾದಲ್ ಬಾಬು (30) ಎಂದು ಗುರುತಿಸಲಾಗಿದೆ.

publive-image

ಡಿಸೆಂಬರ್ 27ರಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಬಾದಲ್ ಬಾಬು ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ ಪಾಕಿಸ್ತಾನದ ವಿದೇಶಿಯರ ಕಾಯಿದೆ, 1946ರ ಸೆಕ್ಷನ್ 13 ಮತ್ತು 14ರ ಅಡಿಯಲ್ಲಿ ಬಾದಲ್ ಬಾಬು ವಿರುದ್ಧ ಪ್ರಕರಣ ದಾಖಲಿಸಿ, ಕೋರ್ಟ್​ಗೆ ಹಾಜರುಪಡಿಸಲಾಯಿತು. ಇನ್ನೂ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅವರು ಜನವರಿ 10, 2025ರಂದು ಬಿಡುಗಡೆಯಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment