ಯುವಕರ ಉತ್ತಮ ಭವಿಷ್ಯ ಹಾಳು ಮಾಡುತ್ತಿದೆಯಾ ಸರ್ಕಾರ?
ರಾಜ್ಯ ಸರ್ಕಾರದ ವಿರುದ್ಧ ಎಕ್ಸ್ ಅಕೌಂಟ್ನಲ್ಲಿ ಬಿಜೆಪಿ ವಾಗ್ದಾಳಿ
ಗ್ರೂಪ್-ಬಿ ಹುದ್ದೆಗಳ ಪ್ರವೇಶ ಪತ್ರ, ಪರೀಕ್ಷಾ ಕೇಂದ್ರಗಳ ಗೊಂದಲ
ಬೆಂಗಳೂರು: ಯುಪಿಎಸ್‌ಸಿ ಮುಖ್ಯ ಪರೀಕ್ಷೆ ನಡೆಯುವ ದಿನ ಸೆಪ್ಟೆಂಬರ್ 22 ರಂದೇ ಪಿಎಸ್‌ಐ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಎಕ್ಸ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಯುಪಿಎಸ್‌ಸಿ ಪರೀಕ್ಷೆ ನಡೆಯುವ ದಿನವೇ ರಾಜ್ಯ ಸರ್ಕಾರ ಪಿಎಸ್ಐ ಪರೀಕ್ಷೆಗಳನ್ನು ನಡೆಸಲು ಹೊರಟಿದೆ. ಯುವಕರ ಭವಿಷ್ಯ ಕುರಿತು ಸರ್ಕಾರಕ್ಕೆ ಎಳ್ಳಷ್ಟು ಕಾಳಜಿ ಇಲ್ಲದಂತೆ ಕಾಣುತ್ತಿದೆ. ಯುವಕರ ಉತ್ತಮ ಭವಿಷ್ಯ ಸರ್ಕಾರವೇ ಹಾಳು ಮಾಡಲು ಹೋಗುತ್ತಿದೆ. ಯುಪಿಎಸ್‌ಸಿ ತಿಂಗಳುಗಳ ಮೊದಲೇ ಪರೀಕ್ಷಾ ದಿನಾಂಕ ಹೊರಡಿಸುತ್ತದೆ. ಅದರಂತೆ ಜೂನ್ 16 ರಂದು ಪ್ರಿಲಿಮ್ಸ್ ಎಕ್ಸಾಂ ನಡೆದಿದ್ದು ಇದೇ 22ಕ್ಕೆ ಮುಖ್ಯ ಪರೀಕ್ಷೆ ನಡೆಯಲಿದೆ. ಆದರೆ ಅದೇ ದಿನ ಪಿಎಸ್ಐ ಪರೀಕ್ಷೆ ನಡೆಸುತ್ತಿರುವುದು ನೋಡಿದರೆ ರಾಜ್ಯ ಸರ್ಕಾರಕ್ಕೆ ವಿವೇಚನೆ ಇಲ್ಲದಂತೆ ಕಾಣಿಸುತ್ತೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಇದನ್ನೂ ಓದಿ: ಸರ್ಕಾರಿ ನ್ಯೂ ಇಂಡಿಯಾ ಅಶ್ಯೂರೆನ್ಸ್ನಲ್ಲಿ ಉದ್ಯೋಗಗಳು.. ಆಯ್ಕೆ ಆದವರಿಗೆ 80 ಸಾವಿರ ರೂ. ಸ್ಯಾಲರಿ
ಸರ್ಕಾರ ಮತ್ತೊಂದು ಎಡವಟ್ಟು ಮಾಡಲು ಹೊರಟಿದ್ದು ಯುಪಿಎಸ್‌ಸಿ, ಎಸ್ಎಸ್ಸಿ ಪರೀಕ್ಷೆಗಳ ದಿನಾಂಕದಂದೆ ಪಿಎಸ್ಐ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ಉದ್ಯೋಗಾಕಾಂಕ್ಷಿಗಳ ವಿರೋಧಿ ಧೋರಣೆ ಆಗಿದೆ. ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆ.14 ಮತ್ತು 15ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೆ.5 ರಂದು ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕೆಲ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಹಂಚಿಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ತಾತ್ಕಾಲಿಕವಾಗಿ ಪ್ರವೇಶ ಪತ್ರದ ಡೌನ್ಲೋಡ್ ಪ್ರಕ್ರಿಯೆಯು ಸ್ಥಗಿತಗೊಳಿಸಿ ಕೆಪಿಎಸ್‌ಸಿ ಹಾಗೂ ಸರ್ಕಾರದ ಹುಳುಕು ಬಯಲಾಗಿದೆ. ಹೀಗಾಗಿ ಸರ್ಕಾರ ಸೆಪ್ಟೆಂಬರ್ 22 ರಂದು ನಡೆಸಲು ನಿರ್ಧರಿಸಿರುವ ಪಿಎಸ್ಐ ಪರೀಕ್ಷೆ ಮುಂದೂಡಬೇಕು. ಅಲ್ಲದೇ ಗ್ರೂಪ್-ಬಿ ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ, ಪರೀಕ್ಷಾ ಕೇಂದ್ರಗಳ ಗೊಂದಲ ನಿವಾರಿಸಬೇಕು ಎಂದು ಕರ್ನಾಟಕ ಬಿಜೆಪಿ ಆಗ್ರಹ ಮಾಡಿದೆ.
ಇದನ್ನೂ ಓದಿ: 39 ಸಾವಿರಕ್ಕೂ ಅಧಿಕ ಸರ್ಕಾರಿ ಉದ್ಯೋಗಗಳು.. ಜಸ್ಟ್ SSLC ಪಾಸ್ ಆಗಿದ್ರೆ ಸಾಕು, ಜಾಬ್ ಸಿಗುತ್ತೆ
ಕೆಪಿಎಸ್‌ಸಿ ಪರೀಕ್ಷೆಯ ಗೊಂದಲಗಳ ನಡುವೆ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ನ್ಯೂನತೆ ಬಯಲಾದ ಬೆನ್ನಲ್ಲೇ ಮತ್ತೆ ಮರು ಪರೀಕ್ಷೆಗೆ ಆದೇಶ ಹೊರಡಿಸಿ ಸಾವಿರಾರು ಪರೀಕ್ಷಾರ್ಥಿಗಳ ಶಾಪಕ್ಕೆ ಗುರಿಯಾಗಿತ್ತು.
ಇದೀಗ ಅಂತದ್ದೇ ಮತ್ತೊಂದು ಎಡವಟ್ಟು ಮಾಡಲು ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್… pic.twitter.com/SDyjzdzYBz
— Vijayendra Yediyurappa (@BYVijayendra) September 9, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ