ಇಬ್ಬರು ಮಕ್ಕಳಿಗೆ ತಂದೆ ಬಗ್ಗೆ ಇನ್ನೂ ಗೊತ್ತಿಲ್ವಂತೆ
ಮಾಜಿ ಪತಿಯ ಬೇಜವಾಬ್ದಾರಿ ಬಗ್ಗೆ ನಟಿ ಮಾತು
38 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿರುವ ನಟಿ
ಊರ್ವಶಿ ಧೋಲಕಿಯಾ.. ‘ಕೋಮೊಲಿಕಾ’ ಪಾತ್ರದ ಮೂಲಕ ದೇಶದಲ್ಲಿ ಮನೆ ಮಾತಾದವರು. ‘ಕಸೌಟಿ ಜಿಂದಿಗಿ ಕೀ’ ಟಿವಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ‘ಕೊಮೊಲಿಕಾ’ ಅವರ ವೃತ್ತಿ ಜೀವನದ ಜೊತೆ ಇದೀಗ ಅವರ ವೈಯಕ್ತಿ ಬದುಕು ಸಾಕಷ್ಟು ಸುದ್ದಿಯಲ್ಲಿದೆ. ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡ ಅವರು, ಕೆಲವು ಜನರು ಅವರಿಂದ ಲಾಭ ಪಡೆಯಲು ಹೇಗೆಲ್ಲ ಪ್ರಯತ್ನ ಮಾಡಿದರು ಅನ್ನೋದನ್ನು ವಿವರಿಸಿದ್ದಾರೆ.
ಖ್ಯಾತ ಯೂಟ್ಯೂಬರ್ ಸಿದ್ಧಾರ್ಥ್ ಕಣ್ಣನ್ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ. ಆರನೇ ವಯಸ್ಸಿನಿಂದ ಕೆಲಸ ಮಾಡಲು ಶುರುಮಾಡಿದೆ. ನಾನು 16ನೇ ವಯಸ್ಸಿಗೆ ಮದುವೆಯಾದೆ. 17ನೇ ವಯಸ್ಸಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದೆ. 18 ವಯಸ್ಸಿಗೆ ಡಿವೋರ್ಸ್ ಪಡೆದುಕೊಂಡೆ. ನನ್ನ ಮಕ್ಕಳು ಇದುವರೆಗೂ ಅಪ್ಪನ ಬಗ್ಗೆ ಕೇಳಿಲ್ಲ. ಮಾಜಿ ಪತಿ ಮಕ್ಕಳ ಬಗ್ಗೆ ಅಂದು ಸ್ವಲ್ಪವೂ ಕಾಳಜಿ ವಹಿಸಲಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
16ನೇ ವಯಸ್ಸಿನಲ್ಲಿ ನಾನು ಗಾಢವಾದ ಕಲ್ಪನೆಯ ಪ್ರೀತಿಯಲ್ಲಿದ್ದೆ. ಅಂದಿನ ದಿನಮಾನದಲ್ಲಿ ಹೆಣ್ಮಕ್ಕಳಿಗೆ ಮದುವೆ ಅನ್ನೋದು ದೊಡ್ಡದಾಗಿತ್ತು. ನನ್ನ ತಾಯಿ ಹೇಳಿದರು, ನೀನು ಏನ್ ಮಾಡ್ತೀಯೋ ಗೊತ್ತಿಲ್ಲ. ಮೊದಲು ಮದುವೆ ಆಗಬೇಕು ಎಂದು ಹೇಳಿದ್ದರು. ಆಗ ನನಗೆ ವಯಸ್ಸು 16. ನನಗೆ ಪ್ರಬುದ್ಧತೆ ಇರಲಿಲ್ಲ. ನನ್ನ ಮಾಜಿ ಪತಿಯ ಬಗ್ಗೆ ಮದುವೆಗೂ ಮೊದಲು ಅಂದರೆ ಒಂದೂವರೆ ವರ್ಷಗಳ ಹಿಂದಷ್ಟೇ ನನಗೆ ತಿಳಿದಿತ್ತು.
ಮದುವೆ ನಂತರ ನನಗೆ ಕೆಲಸ ಮಾಡಲು ಇಷ್ಟ ಇರಲಿಲ್ಲ. ಸಿಂಡ್ರೆಲ್ಲಾ ರೀತಿಯಲ್ಲಿ ಬದುಕಬೇಕು ಎಂದು ಕನಸು ಕಂಡಿದ್ದೆ. 16ನೇ ವಯಸ್ಸಿಗೆ ಮದುವೆ ಮಾಡಿಬಿಟ್ಟರು. 17ನೇ ವಯಸ್ಸಿಗೆ ಇಬ್ಬರು ಅವಳಿ ಮಕ್ಕಳು ಹಾಗೆಯೇ 18 ತುಂಬುವಷ್ಟರಲ್ಲಿ ನನಗೆ ಡಿವೋರ್ಸ್ ಆಯಿತು. ಅವರು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲಿಲ್ಲ. ಹಾಗಾಗಿ ನಮ್ಮಿಬ್ಬರ ಪ್ರೀತಿ ಅಲ್ಲಿಗೆ ಕೊನೆಗೊಂಡಿತ್ತು. ಆ ಸಮಯದಲ್ಲಿ ನನಗೆ ಹೆತ್ತವರಿಗಿಂತ ಹೆಚ್ಚಾಗಿ ಯಾರೂ ಬೆಂಬಲಿಸುವುದಿಲ್ಲ. ಆದರೆ ನನಗೆ ಅವರಿಗೆ ಹೊರೆಯಾಗಿರಲು ಇಷ್ಟ ಇರಲಿಲ್ಲ. ನಾನು ಕೆಲಸಕ್ಕೆ ಮತ್ತೆ ಮರಳಿದೆ. ಈ ವೇಳೆ ಜನ ನನ್ನಿಂದ ಲಾಭ ಪಡೆಯಲು ಯತ್ನಿಸಿದರು ಎಂದಿದ್ದಾರೆ.
ಮಕ್ಕಳಿಗೆ ತಮ್ಮ ತಂದೆಯ ಪರಿಚಯ ಇಲ್ಲ
ಡಿವೋರ್ಸ್ ಪಡೆದ ಬಳಿಕ ನಾನು ಮಾಜಿ ಪತಿಯೊಂದಿಗೆ ಯಾವತ್ತೂ ಮಾತನಾಡಲಿಲ್ಲ. ನನ್ನ ಮಕ್ಕಳಾದ ಧಂಜಾಜ್ ಮತ್ತು ಸಾಗರ್ ಧೋಲಾಕಿಯಾ ಕೂಡ ತಮ್ಮ ತಂದೆಯನ್ನು ಭೇಟಿಯಾಗಲಿಲ್ಲ. ಮಕ್ಕಳಿಗೆ ಅಪ್ಪನ ಬಗ್ಗೆ ಏನೂ ಗೊತ್ತಿಲ್ಲ. ಈ ಬಗ್ಗೆ ಅವರಿಗೆ ನಾನು ಹಲವು ಬಾರಿ ಹೇಳಲು ಪ್ರಯತ್ನಿಸಿದ್ದೆ. ಆದರೆ ಅವರು ತಿಳಿದುಕೊಳ್ಳಲು ಪ್ರಯತ್ನಿಸಲಿಲ್ಲ.
ಅಂದ್ಹಾಗೆ ಊರ್ವಸಿ ಅವರು ಕಳೆದ 38 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದಾರೆ. ದೇಖ್ ಭಾಯಿ ದೇಖ್, ಘರ್ ಏಕ್ ಮಂದೀರ್, ಕಬಿ ಸೌತಾನ್ ಕಭಿ ಸಹೇಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಪ್ರಸಾರ ಆಗುವ ಬಿಗ್ಬಾಸ್ ಸೀಸನ್ -6ರಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಊರ್ವಸಿ ಧೋಲಕೀಯಾ ನೆಗೆಟೀವ್ ರೋಲ್ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ