newsfirstkannada.com

ಆ್ಯಪಲ್​ ಕಂಪನಿ ವಿರುದ್ಧ ಕೋರ್ಟ್​ ಮೊರೆ ಹೋದ ಅಮೆರಿಕ.. ಇನ್ಮುಂದೆ ಐಫೋನ್ ಎಲ್ಲರ ಕೈಗೆ ಸಿಗ್ತಾವಾ?

Share :

Published March 24, 2024 at 10:11am

Update March 24, 2024 at 10:13am

    ಏಕಸ್ವಾಮ್ಯ ಹೊಂದಿ ಮಾರುಕಟ್ಟೆಯಲ್ಲಿ ಆಪಲ್ ಪ್ರಾಬಲ್ಯ ಹೊಂದಿದೆ

    ಆ್ಯಪಲ್​ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ ಇತರರಿಗೆ ಲಭ್ಯವಿಲ್ಲ

    ಅಮೆರಿಕ ಸರ್ಕಾರದ ವಿರುದ್ಧ ಕೋರ್ಟ್​​ನಲ್ಲಿ ಆ್ಯಪಲ್​ ಹೇಳಿರುವುದೇನು?

ಐಫೋನ್​ ಸಂಸ್ಥೆ ಕಾನೂನುಬಾಹಿರವಾಗಿ ನಿರಂತರವಾಗಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುತ್ತಿದೆ. ತನ್ನ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್​ ಅನ್ನು ಇತರರು ಬಳಸದಂತೆ ಸೀಮಿತಗೊಳಿಸಿದ್ದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಅಡ್ಡಿಯಾಗಿದೆ ಎಂದು ಆ್ಯಪಲ್​ ಸಂಸ್ಥೆ ವಿರುದ್ಧ ಅಮೆರಿಕ ಸರ್ಕಾರ ಕೋರ್ಟ್ ಮೊರೆ ಹೋಗಿದೆ.

ಆ್ಯಪಲ್​ ಸಂಸ್ಥೆ ವಿರುದ್ಧದ ಅರ್ಜಿಯನ್ನು ಅಮೆರಿಕ ನ್ಯಾಯಾಂಗ ಇಲಾಖೆ (DoJ) ವಿಚಾರಣೆ ನಡೆಸಿತು. ಆಪಲ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ ಇತರರಿಗೆ ಲಭ್ಯವಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಅಡ್ಡಿಪಡಿಸಿದೆ. ಸಂಸ್ಥೆಯ ಉತ್ಪನ್ನಗಳನ್ನ ಪ್ರತ್ಯೇಕಿಸಿದರೆ ಬೆದರಿಕೆ ಹಾಕುತ್ತದೆ. ಹೀಗಾಗಿ ಈ ಮೊಕದ್ದಮೆಯು ಆ್ಯಪಲ್​ ​ನಲ್ಲಿ ಕೆಲವೊಂದು ಬದಲಾವಣೆಯನ್ನು ಬಯಸುತ್ತದೆ ಎಂದು ಹೇಳಲಾಗಿದೆ.

ಆ್ಯಪಲ್​ ಫೋನ್​, ವಾಚ್​ ಸೇರಿದಂತೆ ತನ್ನದೇ ಉತ್ಪನ್ನಗಳನ್ನ ಮಾತ್ರ ಸಂಪರ್ಕಿಸಬಹುದಾಗಿದೆ. ಸ್ಪರ್ಧಾತ್ಮಕ ಪೈಪೋಟಿಯಲ್ಲಿ ತನ್ನದೇ ಆದ ಏಕಸ್ವಾಮ್ಯ ಹೊಂದಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಐಫೋನ್​ ಮುಕ್ತಗೊಳಿಸಬೇಕು. ಎಲ್ಲರಿಗೂ ಸಿಗುವಂತೆ ಆಗಬೇಕು. ಆ್ಯಪಲ್​ ಸಂಸ್ಥೆ ಸದೃಢತೆ ಕಾಪಾಡಿಕೊಂಡಿರುವುದು ಶ್ರೇಷ್ಠತೆಯಿಂದಲ್ಲ. ಬದಲಿಗೆ ಕಾನೂನುಬಾಹಿರ ನಡವಳಿಕೆಯಿಂದ ಎಂದು ಸರ್ಕಾರ ಕೋರ್ಟ್​ ಮುಂದೆ ಹೇಳಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಾಗಿ ಲೋಕಸಭೆ, ಉಪಚುನಾವಣೆ ಬಹಿಷ್ಕಾರ ಮಾಡೋದಾಗಿ ಗ್ರಾಮಸ್ಥರು ಎಚ್ಚರಿಕೆ.. ಯಾಕೆ?

ಈ ಬಗ್ಗೆ ಕೋರ್ಟ್​ಗೆ ಪ್ರತಿಕ್ರಿಯೆ ನೀಡಿರುವ ಆ್ಯಪಲ್​ ಸಂಸ್ಥೆ, ಐಫೋನ್ ಅನ್ನು ಆಂಡ್ರಾಯ್ಡ್ ಆಗಿ ಪರಿವರ್ತಿಸಲು ಯುಎಸ್ ಸರ್ಕಾರ ಪ್ರಯತ್ನಿಸುತ್ತಿದೆ. ಆ್ಯಪಲ್​ ಕಾಲಕ್ಕೆ ತಕ್ಕಂತೆ ತನ್ನ ಗ್ರಾಹಕರಿಗೆ ಸಾಧ್ಯವಾಗುವ ಸೇವೆಗಳನ್ನು ಮತ್ತು ತಂತ್ರಜ್ಞಾನದ ಬಗ್ಗೆ ಮಾಹಿತಿ ಕೊಡುತ್ತಿದೆ. ಆದರೆ ಸರ್ಕಾರ ಸುಮ್ಮನೆ ಆರೋಪಿಸುತ್ತಿದೆ ಎಂದು ಆಪಲ್ ಹೇಳಿದೆ.

iMessage and Siriಯಂತಹ ಫ್ಯೂಚರ್​​ಗಳಿಗೆ ಪ್ರತಿಸ್ಪರ್ಧಿಗಳ ಪ್ರವೇಶವನ್ನು ಆ್ಯಪಲ್​ ನಿರಾಕರಿಸುತ್ತದೆ. ಏಕೀಕರಣ ತಂತ್ರದಿಂದ ಹಾರ್ಡ್‌ವೇರ್ ಮಿತಿಗಳನ್ನು ಹೊಂದಿದ್ದರಿಂದ ಇದು ಮಾರುಕಟ್ಟೆ ಪ್ರವೇಶ ನಿರ್ಬಂಧಿಸುತ್ತದೆ. ಇತರೆ ಅಪ್ಲಿಕೇಶನ್​ಗಳನ್ನು ಐಫೋನ್​ ತೆಗೆದುಕೊಳ್ಳುವುದಿಲ್ಲ. ಆ್ಯಪಲ್​ ವಾಚ್​ಗಳಿಂದ ಇತರೆ ಕಂಪನಿಯ ವಾಚ್​ಗಳ ಮೌಲ್ಯ ಕುಸಿಯುತ್ತಿದೆ. ಇದು ಅಲ್ಲದೇ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಬೇಕಾಗಿದ್ದರಿಂದ ಸಾಮಾನ್ಯರ ಕೈಗೆಟುಕುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಆ್ಯಪಲ್​ ಅನ್ನು ಮುಕ್ತಗೊಳಿಸಬೇಕು ಎಂದು ಸರ್ಕಾರ ಕೋರ್ಟ್​ಗೆ ಮನವಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ್ಯಪಲ್​ ಕಂಪನಿ ವಿರುದ್ಧ ಕೋರ್ಟ್​ ಮೊರೆ ಹೋದ ಅಮೆರಿಕ.. ಇನ್ಮುಂದೆ ಐಫೋನ್ ಎಲ್ಲರ ಕೈಗೆ ಸಿಗ್ತಾವಾ?

https://newsfirstlive.com/wp-content/uploads/2024/03/IPHONE_2.jpg

Load More