ನ್ಯೂಯಾರ್ಕ್ನಲ್ಲಿ ನಡೆದ ಯುಎಸ್ ಓಪನ್ ಫೈನಲ್ ಪಂದ್ಯ
ರೋಹನ್ ಬೋಪಣ್ಣ ಜೋಡಿ ವಿರುದ್ಧ ಫೈನಲ್ ಗೆದ್ದವಱರು?
ಮೊದಲ ಸೆಟ್ನಲ್ಲಿ ರೋಹನ್ ಜೋಡಿ ಮುನ್ನಡೆ ಸಾಧಿಸಿತ್ತು
ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ಯುಎಸ್ ಓಪನ್ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯದ ಪುರುಷರ ಡಬಲ್ಸ್ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಮುಗ್ಗರಿಸಿದೆ.
ಅಮೆರಿಕದ ರಾಜೀವ್ ರಾಮ್ ಮತ್ತು ಲಂಡನ್ ಜೋ ಸಾಲಿಸ್ಬರಿ ವಿರುದ್ಧ ಫೈನಲ್ ಮ್ಯಾಚ್ನಲ್ಲಿ ಸೆಣಸಾಟ ನಡೆಸಿದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ 6-2, 3-6, 4-6 ಸೆಟ್ಗಳಲ್ಲಿ ಸೋತಿದ್ದಾರೆ. ಆಟದ ಮೊದಲ ಸೆಟ್ನಲ್ಲಿ ರೋಹನ್ ಬೋಪಣ್ಣ ಜೋಡಿ ಭರ್ಜರಿಯಾಗಿ ಮುನ್ನಡೆ ಪಡೆದಿತ್ತು. ಆದರೆ ನಂತರದ ಸೆಟ್ಗಳಲ್ಲಿ ಇಬ್ಬರ ಪ್ರದರ್ಶನ ಅಷ್ಟೇನೂ ಸುಧಾರಣೆ ಇಲ್ಲದ ಕಾರಣ ಫೈನಲ್ ಮ್ಯಾಚ್ ಅನ್ನು ಕೈಚೆಲ್ಲಿದ್ದಾರೆ. ಇದರಿಂದ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ಐತಿಹಾಸಿಕ ಸಾಧನೆ ಮಾಡುವ ಹೊಸ್ತಿಲಿನಲ್ಲಿದ್ದ ರೋಹನ್ ಜೋಡಿ ಫೈನಲ್ನಲ್ಲಿ ಸೋತಿರುವುದಕ್ಕೆ ಅಭಿಮಾನಿಗಳು ಸಾಕಷ್ಟು ನಿರಾಸೆಗೊಂಡಿದ್ದಾರೆ. ಇನ್ನು ಅಮೆರಿಕದ ರಾಮ್ ಮತ್ತು ಲಂಡನ್ ಜೋ ಅವರು ಇದೇ ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
43 ವರ್ಷದ ರೋಹನ್ ಬೋಪಣ್ಣ ಅವರು ಯುಎಸ್ ಓಪನ್ ಆಡುತ್ತಿರುವ ಅತ್ಯಂತ ಹಿರಿಯ ಆಟಗಾರ ಎಂದು ಖ್ಯಾತಿ ಪಡೆದಿದ್ದರು. 2ನೇ ಬಾರಿಗೆ ಪುರುಷರ ಡಬಲ್ಸ್ನಲ್ಲಿ ಬೋಪಣ್ಣ ಅವರು ಫೈನಲ್ಗೆ ಬಂದಿದ್ದರು. ಹೀಗಾಗಿ ಫೈನಲ್ನಲ್ಲಿ ಎದುರಾಳಿಗಳನ್ನು ಸೋಲಿಸಿ ಕಪ್ ಗೆದ್ದೇ ಗೆಲ್ಲುತ್ತಾರೆ ಎಂದು ಫ್ಯಾನ್ಸ್ ಭಾರೀ ನೀರಿಕ್ಷೆಯಲ್ಲಿದ್ದರು. ಆದ್ರೆ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಬೋಪಣ್ಣ ಜೋಡಿ ಭಾರೀ ನಿರಾಸೆ ಮಾಡಿದೆ. ಇನ್ನು 2010ರಲ್ಲಿ ಫೈನಲ್ ಪುರುಷರ ಡಬಲ್ಸ್ನಲ್ಲಿ ಬೋಪಣ್ಣ ಹಾಗೂ ಪಾಕ್ನ ಐಸಾಮ್-ಉಲ್-ಹಕ್ ಸೋತಿದ್ದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ