ಕರಡಿ ಮಾಂಸವನ್ನು ಅರೆಬರೆ ಬೇಯಿಸಿ ತಿಂದಿದ್ದ 9 ಕುಟುಂಬಗಳು
ಕುಟುಂಬದವರಲ್ಲಿ ಜ್ವರ, ಸ್ನಾಯು ನೋವು, ಕಣ್ಣುಗಳ ಸುತ್ತ ಊತ
ಫ್ಯಾಮಿಲಿ ಸದಸ್ಯರಿಂದ ಕಾಯಿಲೆ ಬೇರೆ ಬೇರೆಯವರಿಗೆ ಹರಡಿತಾ?
ಪಾರ್ಟಿಯಲ್ಲಿ ಕರಡಿ ಮಾಂಸ ಅರ್ಧಂಬರ್ಧ ಬೇಯಿಸಿ ತಿಂದ 12 ವರ್ಷದ ಬಾಲಕಿ ಸೇರಿ 5 ಕುಟುಂಬ ಸದಸ್ಯರಿಗೆ ಮೆದುಳಿನಲ್ಲಿ ಹುಳುಗಳು ಪತ್ತೆಯಾಗಿರುವುದು ಭಾರೀ ಆಘಾತ ಉಂಟುಮಾಡಿದೆ. ಈ ಬಗ್ಗೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ವರದಿ ನೀಡಿದೆ. ಅಮೆರಿಕದ ದಕ್ಷಿಣ ಡಕೋಟಾದಲ್ಲಿ ಈ ಘಟನೆ ನಡೆದಿದೆ.
ದಕ್ಷಿಣ ಡಕೋಟಾದ 29 ವರ್ಷದ ವ್ಯಕ್ತಿಯೊಬ್ಬರು ಫ್ಯಾಮಿಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಒಟ್ಟು 9 ಕುಟುಂಬಗಳ ಸದಸ್ಯರು ಭಾಗಿಯಾಗಿದ್ದರು. ಈ ವೇಳೆ ಪಾರ್ಟಿಯಲ್ಲಿ ಕರಡಿ ಮಾಂಸದಿಂದ ಮಾಡಿದ ಕಬಾಬ್ಗಳನ್ನು ಎಲ್ಲರಿಗೂ ನೀಡಲಾಗಿತ್ತು. ಇದನ್ನು ತಿಂದ ವ್ಯಕ್ತಿ ನಂತರ ದಿನಗಳಲ್ಲಿ ಜ್ವರ, ತೀವ್ರವಾದ ಸ್ನಾಯು ನೋವು, ಕಣ್ಣುಗಳ ಸುತ್ತ ಊತ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದನು. ಹೀಗಾಗಿ ಪದೇ ಪದೇ ಆಸ್ಪತ್ರೆಗೆ ಹೋಗಿದ್ದಕ್ಕೆ ಮಿನ್ನೇಸೋಟ ಎನ್ನುವ ಆರೋಗ್ಯ ಇಲಾಖೆ ಈ ಬಗ್ಗೆ ತಿಳಿದುಕೊಂಡಿದೆ. ಇದನ್ನು ತನಿಖೆ ನಡೆಸಿದ ಇಲಾಖೆ ವ್ಯಕ್ತಿ ಫ್ಯಾಮಿಲಿ ಪಾರ್ಟಿಯಲ್ಲಿ ಭಾಗಿಯಾಗಿರುವುದನ್ನ ಖಚಿತ ಪಡಿಸಿಕೊಂಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?
ಪಾರ್ಟಿ ನಡೆಯುವುದಕ್ಕೂ ಒಂದೂವರೆ ತಿಂಗಳು ಮೊದಲು ಕರಡಿ ಮಾಂಸವನ್ನು ಫ್ರೀಜ್ನಲ್ಲಿ ಇಡುತ್ತಾರೆ. ಏಕೆಂದರೆ ಒಂದು ರೀತಿಯ ಗಾಢ ಬಣ್ಣದಿಂದ ಆಕರ್ಷಣೆಯಾಗಿ ಮಾಂಸ ಕಾಣುತ್ತದೆ. ಇದನ್ನೇ ಪಾರ್ಟಿ ನಡೆದ ದಿನ ಬೇಯಿಸಿ ಎಲ್ಲರಿಗೂ ಕೊಟ್ಟಿದ್ದಾರೆ. ಹೀಗಾಗಿಯೇ ಅವರಲ್ಲಿ ವಾಕರಿಕೆ, ವಾಂತಿ, ತಲೆನೋವು ಮತ್ತು ಇತರೆ ಸಮಸ್ಯೆಗಳು ಕಾಣಿಸಿವೆ. 12 ವರ್ಷದ ಬಾಲಕಿ ಸೇರಿ 5 ಕುಟುಂಬ ಸದಸ್ಯರಿಗೆ ಮೆದುಳಿನಲ್ಲಿ ಹುಳುಗಳು ಪತ್ತೆಯಾಗಿವೆ. ಅವರಿಗೆ ಅಲ್ಬೆಂಡಜೋಲ್ (albendazole) ಎಂಬ ಔಷಧ ನೀಡಲಾಗುತ್ತದೆ. ಅಲ್ಬೆಂಡಜೋಲ್ ಹುಳುಗಳನ್ನ ಕೊಲ್ಲುತ್ತದೆ ಎಂದು ಸಿಡಿಸಿ ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ