newsfirstkannada.com

ಅಬ್ಬಾ..! ಪಾರ್ಟಿಯಲ್ಲಿ ಕರಡಿ ಮಾಂಸ ತಿಂದವರ ಮೆದುಳಿನಲ್ಲಿ ಹುಳುಗಳು ಪತ್ತೆ

Share :

Published May 25, 2024 at 5:09pm

    ಕರಡಿ ಮಾಂಸವನ್ನು ಅರೆಬರೆ ಬೇಯಿಸಿ ತಿಂದಿದ್ದ 9 ಕುಟುಂಬಗಳು

    ಕುಟುಂಬದವರಲ್ಲಿ ಜ್ವರ, ಸ್ನಾಯು ನೋವು, ಕಣ್ಣುಗಳ ಸುತ್ತ ಊತ

    ಫ್ಯಾಮಿಲಿ ಸದಸ್ಯರಿಂದ ಕಾಯಿಲೆ ಬೇರೆ ಬೇರೆಯವರಿಗೆ ಹರಡಿತಾ?

ಪಾರ್ಟಿಯಲ್ಲಿ ಕರಡಿ ಮಾಂಸ ಅರ್ಧಂಬರ್ಧ ಬೇಯಿಸಿ ತಿಂದ 12 ವರ್ಷದ ಬಾಲಕಿ ಸೇರಿ 5 ಕುಟುಂಬ ಸದಸ್ಯರಿಗೆ ಮೆದುಳಿನಲ್ಲಿ ಹುಳುಗಳು ಪತ್ತೆಯಾಗಿರುವುದು ಭಾರೀ ಆಘಾತ ಉಂಟುಮಾಡಿದೆ. ಈ ಬಗ್ಗೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ವರದಿ ನೀಡಿದೆ. ಅಮೆರಿಕದ ದಕ್ಷಿಣ ಡಕೋಟಾದಲ್ಲಿ ಈ ಘಟನೆ ನಡೆದಿದೆ.

ದಕ್ಷಿಣ ಡಕೋಟಾದ 29 ವರ್ಷದ ವ್ಯಕ್ತಿಯೊಬ್ಬರು ಫ್ಯಾಮಿಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಒಟ್ಟು 9 ಕುಟುಂಬಗಳ ಸದಸ್ಯರು ಭಾಗಿಯಾಗಿದ್ದರು. ಈ ವೇಳೆ ಪಾರ್ಟಿಯಲ್ಲಿ ಕರಡಿ ಮಾಂಸದಿಂದ ಮಾಡಿದ ಕಬಾಬ್​ಗಳನ್ನು ಎಲ್ಲರಿಗೂ ನೀಡಲಾಗಿತ್ತು. ಇದನ್ನು ತಿಂದ ವ್ಯಕ್ತಿ ನಂತರ ದಿನಗಳಲ್ಲಿ ಜ್ವರ, ತೀವ್ರವಾದ ಸ್ನಾಯು ನೋವು, ಕಣ್ಣುಗಳ ಸುತ್ತ ಊತ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದನು. ಹೀಗಾಗಿ ಪದೇ ಪದೇ ಆಸ್ಪತ್ರೆಗೆ ಹೋಗಿದ್ದಕ್ಕೆ ಮಿನ್ನೇಸೋಟ ಎನ್ನುವ ಆರೋಗ್ಯ ಇಲಾಖೆ ಈ ಬಗ್ಗೆ ತಿಳಿದುಕೊಂಡಿದೆ. ಇದನ್ನು ತನಿಖೆ ನಡೆಸಿದ ಇಲಾಖೆ ವ್ಯಕ್ತಿ ಫ್ಯಾಮಿಲಿ ಪಾರ್ಟಿಯಲ್ಲಿ ಭಾಗಿಯಾಗಿರುವುದನ್ನ ಖಚಿತ ಪಡಿಸಿಕೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?

ಪಾರ್ಟಿ ನಡೆಯುವುದಕ್ಕೂ ಒಂದೂವರೆ ತಿಂಗಳು ಮೊದಲು ಕರಡಿ ಮಾಂಸವನ್ನು ಫ್ರೀಜ್​ನಲ್ಲಿ ಇಡುತ್ತಾರೆ. ಏಕೆಂದರೆ ಒಂದು ರೀತಿಯ ಗಾಢ ಬಣ್ಣದಿಂದ ಆಕರ್ಷಣೆಯಾಗಿ ಮಾಂಸ ಕಾಣುತ್ತದೆ. ಇದನ್ನೇ ಪಾರ್ಟಿ ನಡೆದ ದಿನ ಬೇಯಿಸಿ ಎಲ್ಲರಿಗೂ ಕೊಟ್ಟಿದ್ದಾರೆ. ಹೀಗಾಗಿಯೇ ಅವರಲ್ಲಿ ವಾಕರಿಕೆ, ವಾಂತಿ, ತಲೆನೋವು ಮತ್ತು ಇತರೆ ಸಮಸ್ಯೆಗಳು ಕಾಣಿಸಿವೆ. 12 ವರ್ಷದ ಬಾಲಕಿ ಸೇರಿ 5 ಕುಟುಂಬ ಸದಸ್ಯರಿಗೆ ಮೆದುಳಿನಲ್ಲಿ ಹುಳುಗಳು ಪತ್ತೆಯಾಗಿವೆ. ಅವರಿಗೆ ಅಲ್ಬೆಂಡಜೋಲ್ (albendazole) ಎಂಬ ಔಷಧ ನೀಡಲಾಗುತ್ತದೆ. ಅಲ್ಬೆಂಡಜೋಲ್ ಹುಳುಗಳನ್ನ ಕೊಲ್ಲುತ್ತದೆ ಎಂದು ಸಿಡಿಸಿ ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ..! ಪಾರ್ಟಿಯಲ್ಲಿ ಕರಡಿ ಮಾಂಸ ತಿಂದವರ ಮೆದುಳಿನಲ್ಲಿ ಹುಳುಗಳು ಪತ್ತೆ

https://newsfirstlive.com/wp-content/uploads/2024/05/US_BEAR.jpg

Load More