newsfirstkannada.com

ಟಿವಿ ನೋಡುತ್ತಿದ್ದಾಗ ಹೃದಯಾಘಾತ.. ಭಾರತದ ಖ್ಯಾತ ಸಿಂಗರ್​ ಉಷಾ ಉತ್ತುಪ್ ಪತಿ ನಿಧನ

Share :

Published July 9, 2024 at 8:46am

Update July 9, 2024 at 8:48am

  78 ವರ್ಷ ವಯಸ್ಸಿನ ಪತಿಯನ್ನು ಕಳೆದುಕೊಂಡ ಉಷಾ ಉತ್ತುಪ್​

  ಜಾನಿಯನ್ನು ಉಷಾ ಉತ್ತುಪ್​ ಮೊದಲು ಭೇಟಿ ಮಾಡಿದ್ದೆಲ್ಲಿ ಗೊತ್ತಾ?

  2ನೇ ಪತಿ ಕಳೆದುಕೊಂಡ ಭಾರತದ ಖ್ಯಾತ ಸಿಂಗರ್​ ಉಷಾ ಉತ್ತುಪ್

ಭಾರತದ ಖ್ಯಾತ ಸಿಂಗರ್​ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೊ ಉತ್ತುಪ್ ನಿಧನರಾಗಿದ್ದಾರೆ. ಸೋಮವಾರದಂದು ಕೋಲ್ಕತ್ತಾದ ಮನೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.

ಏನಾಯಿತು?

78 ವರ್ಷ ವಯಸ್ಸಿನ ಜಾನಿ ತಮ್ಮ ನಿವಾಸದಲ್ಲಿ ಟಿವಿ ನೋಡುವಾಗ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೊನೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಇದನ್ನೂ ಓದಿ: VIDEO: ಹುಟ್ಟು ಹಬ್ಬದ ಮಾರನೇ ದಿನ ಹೃದಯಾಘಾತ.. 10 ತರಗತಿ ವಿದ್ಯಾರ್ಥಿ ಹಾರ್ಟ್​ ಅಟ್ಯಾಕ್​ಗೆ ಬಲಿ

ಜಾನಿ ಚಾಕೊ ಉತ್ತುಪ್ ಅವರು ಉಷಾರವರ 2ನೇ ಪತಿ. ಅದಕ್ಕೂ ಮುನ್ನ ರಾಮು ಅವರನ್ನು ಉಷಾ ಮದುವೆಯಾಗಿದ್ದರು. 70ರ ದಶಕದಲ್ಲಿ ಟೀ ಪ್ಲಾನ್ಟೇಶನ್​ನಲ್ಲಿ ಜಾನಿ ಚಾಕೊ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರನ್ನು ​ಉಷಾ ಉತ್ತುಪ್​ ಭೇಟಿಯಾದರು. ಬಳಿಕ ಈ ಜೋಡಿ ವಿವಾಹವಾದರು.

ಇದನ್ನೂ ಓದಿ: ಅಬ್ಬಾ! ಇದೆಂಥಾ ಅಪಘಾತ.. ಕರೆಂಟ್​ ಕಂಬವೇರಿದ ಮಹೀಂದ್ರಾ ಥಾರ್​!

ಉಷಾ ಉತ್ತುಪ್​​ರವರಿಗೆ ಸನ್ನಿ ಎಂಬ ಮಗ ಮತ್ತು ಅಂಜಲಿ ಎಂಬ ಮಗಳಿದ್ದಾರೆ. ಇಂದು ಜಾನಿ ಚಾಕೊ ಉತ್ತುಪ್ ಅಂತ್ಯಕ್ರಿಯೆ ನಡೆಯಲಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿವಿ ನೋಡುತ್ತಿದ್ದಾಗ ಹೃದಯಾಘಾತ.. ಭಾರತದ ಖ್ಯಾತ ಸಿಂಗರ್​ ಉಷಾ ಉತ್ತುಪ್ ಪತಿ ನಿಧನ

https://newsfirstlive.com/wp-content/uploads/2024/07/Usha-Uttup.jpg

Load More