newsfirstkannada.com

ಗಂಡ-ಹೆಂಡತಿ ಜಗಳ.. ಸಿಟ್ಟಿನಲ್ಲಿ ಮೊಸಳೆ ಇರುವ ಕಾಲುವೆಗೆ ಮಗುವನ್ನ ಎಸೆದ ಪಾಪಿ ತಾಯಿ

Share :

Published May 5, 2024 at 9:18am

    ಆರು ವರ್ಷದ ಗಂಡು ಮಗುವನ್ನ ನಾಲೆಗೆ ಎಸೆದ ಪಾಪಿ ತಾಯಿ

    ನಿನ್ನೆ ರಾತ್ರಿಯಿಂದ ಮಗುವಿಗಾಗಿ ಮುಂದುವರೆದ ಶೋಧ ಕಾರ್ಯ

    ಏನು ಅರಿಯದ 6 ವರ್ಷದ ಪುಟಾಣಿ ಕಂದ ಮೊಸಳೆ ಬಾಯಿ ಸೇರಿತೇ?

ಗಂಡ ಹೆಂಡತಿಯ ಜಗಳದಿಂದಾಗಿ ಆರು ವರ್ಷದ ಗಂಡು ಮಗುವನ್ನ ನಾಲೆಗೆ ಎಸೆದ ಅಮಾನವೀಯ ಘಟನೆಯೊಂದು ಶನಿವಾರ ರಾತ್ರಿ ಬೆಳಕಿಗೆ ಬಂದಿದೆ. ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ಈ ದುರ್ಘಟನೆ ನಡೆದಿದೆ.

ಹಾಲಮಡ್ಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ರವಿಕುಮಾರ್ ಶೆಳ್ಳೆ ಮತ್ತು ಸಾವಿತ್ರಿ ದಂಪತಿಗಳು ಪರಸ್ಪರ ಜಗಳ‌ ಮಾಡಿಕೊಂಡಿದ್ದಾರೆ. ಜಗಳದಿಂದ ಮಾನಸಿಕವಾಗಿ‌ ನೊಂದ ಸಾವಿತ್ರಿ 6 ವರ್ಷದ ಮಗು ವಿನೋದ್​​ನನ್ನು ಅಲ್ಲೆ ಹತ್ತಿರದಲ್ಲಿರುವ ದೊಡ್ಡ ನಾಲೆಗೆ ಎಸೆದು ಬಂದಿದ್ದಾಳೆ.

ಸ್ವಲ್ಪ ಹೊತ್ತಿನ‌ ಬಳಿಕ ಈ ಘಟನೆಯಿಂದ ಮಾನಸಿಕವಾಗಿ ಅಘಾತಗೊಂಡ ಸಾವಿತ್ರಿ ಮಗುವನ್ನು ಎಸೆದು ಬಂದಿರುವುದನ್ನು ಸ್ಥಳೀಯರಿಗೆ ತಿಳಿಸಿದ್ದಾಳೆ. ತಕ್ಷಣವೇ ಸ್ಥಳೀಯರು ನಾಲೆಯ ಹತ್ತಿರ ಬಂದು ಮಗುವಿನ ಹುಡುಕಾಟವನ್ನು ನಡೆಸಿದ್ದಾರೆ. ಕೂಡಲೇ ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: ರೇವಣ್ಣ ಅರೆಸ್ಟ್.. ಒಂದೇ ಹೋಟೆಲ್​ನಲ್ಲಿ ಅಮಿತ್ ಶಾ, ಕುಮಾರಸ್ವಾಮಿ.. ಮಾತಿಲ್ಲ, ಕತೆ ಇಲ್ಲ..!

ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸಹಕಾರದಲ್ಲಿ ಹಾಗೂ ಸ್ಥಳೀಯ ಮುಳುಗು ತಜ್ಞರ ಮತ್ತು ಸ್ಥಳೀಯರ ನೆರವಿನೊಂದಿಗೆ ಮಗುವಿನ ಶೋಧ ಕಾರ್ಯ ನಡೆಸಿದ್ದಾರೆ. ಸದ್ಯ ಮಗು ಸಿಗದ ಹಿನ್ನೆಲೆ ಶೋಧ ಕಾರ್ಯಾ ಭಾನುವಾರಕ್ಕೆ ಮುಂದುವರೆದಿದೆ.

ಇನ್ನು ನಾಲೆಯಲ್ಲಿ ಮೊಸಲೆಯಿದ್ದು, ಸ್ಥಳೀಯರು ಮಗುವನ್ನು ಮೊಸಳೆ ತಿಂದಿರಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ-ಹೆಂಡತಿ ಜಗಳ.. ಸಿಟ್ಟಿನಲ್ಲಿ ಮೊಸಳೆ ಇರುವ ಕಾಲುವೆಗೆ ಮಗುವನ್ನ ಎಸೆದ ಪಾಪಿ ತಾಯಿ

https://newsfirstlive.com/wp-content/uploads/2024/05/Uttarkannada.jpg

Load More