/newsfirstlive-kannada/media/post_attachments/wp-content/uploads/2024/06/BIGG_BOSS_CHANDRIKA.jpg)
ಬಹುನಿರೀಕ್ಷಿತ ರಿಯಾಲಿಟಿ ಶೋ ಹಿಂದಿಯ ಬಿಗ್ಬಾಸ್ ಒಟಿಟಿ ಸೀಸನ್- 3 ಈಗಾಗಲೇ ಆರಂಭವಾಗಿದೆ. ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಾಲಿವುಡ್ನ ಸ್ಟಾರ್ ನಟ ಅನಿಲ್ ಕಪೂರ್ ಇದೇ ಮೊದಲ ಬಾರಿಗೆ ‘ಬಿಗ್ಬಾಸ್’ ಅನ್ನು ನಡೆಸಿಕೊಡುತ್ತಿದ್ದಾರೆ. ಶೋಗೆ ಆಶ್ಚರ್ಯಕರ ರೀತಿಯ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಿಗ್ ಬಾಸ್ಗೆ ಆಯ್ಕೆಯಾದ ವಡಾ ಪಾವ್ ಗರ್ಲ್ ಎಂದೇ ಖ್ಯಾತಿಯಾದ ಚಂದ್ರಿಕಾ ದೀಕ್ಷಿತ್ ತನ್ನ ದಿನದ ಹಣದ ಗಳಿಕೆಯ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ:ಲಾಂಗ್ ಹಿಡಿದು ಇನ್ಸ್ಟಾದಲ್ಲಿ ವಿಡಿಯೋ ಶೇರ್.. ಜನರನ್ನ ಹೆದರಿಸ್ತಿದ್ದ ಇಬ್ಬರು ಕಿರಾತಕರು ಅರೆಸ್ಟ್
ಈ ಸಲದ ಬಿಗ್ ಬಾಸ್ ಸ್ಪರ್ಧಿ ಚಂದ್ರಿಕಾ ದೀಕ್ಷಿತ್ ನೋಡುವುದಕ್ಕೆ ಸಖತ್ ಬ್ಯೂಟಿಯಾಗಿದ್ದಾರೆ. ಇದರ ಜೊತೆಗೆ ಕೋಪ, ಮಾತು ಎಲ್ಲವೂ ಈಕೆಗೆ ಜಾಸ್ತಿನೆ. ಹೀಗಾಗಿಯೇ ಈ ಬ್ಯೂಟಿಯನ್ನು ಬಿಗ್ಬಾಸ್ಗೆ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎನ್ನುವ ಜನರ ಪ್ರಶ್ನೆಗಳು ಬಂದಿದ್ವು. ಆದರೆ ಈ ಎಲ್ಲದ ಬಗ್ಗೆ ಬಿಗ್ಬಾಸ್ ಮನೆಯಲ್ಲಿ ಮಾತನಾಡಿರುವ ಚಂದ್ರಿಕಾ ದೀಕ್ಷಿತ್ ಅವರು, ವಡಾ ಪಾವ್ ಮಾರಾಟ ಮಾಡಿ ಒಂದು ದಿನಕ್ಕೆ ಬರೋಬ್ಬರಿ 40 ಸಾವಿರ ರೂಪಾಯಿಗಳನ್ನು ಗಳಿಸುತ್ತೇನೆ. ಇದಕ್ಕಾಗಿ ನಾನು ತುಂಬಾ ಕಷ್ಟ ಪಡುತ್ತೇನೆ. ನೀವು ಕಷ್ಟಪಟ್ಟರೇ ಒಳ್ಳೆಯ ಫಲ ಸಿಗುತ್ತದೆ. ಯಾವುದೇ ಕಾರಣಕ್ಕೂ ನೀವು ಸ್ಮಾರ್ಟ್ಫೋನ್, ನೆಟ್ಫ್ಲಿಕ್ಸ್ ಅಂತವುಗಳನ್ನ ಬಳಸಬೇಡಿ. ಬೆಳಗ್ಗೆ ಎದ್ದ ತಕ್ಷಣ ಹೊರಗಡೆ ಹೋಗಿ ನಿಮಗಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಿಲ್ಕ್ರಿಸ್ಟ್ರಂತೆ ಮೋಸ್ಟ್ ಡೇಂಜರಸ್ ಪಂತ್.. ರಿಷಬ್ ಡೈನಾಮಿಕ್ ಬ್ಯಾಟಿಂಗ್, ಕೀಪಿಂಗ್ ಹೇಗಿರುತ್ತೆ?
Vadapav Girl Reveals she earns 40k Per Day just by selling Vadapav ?
Mumbai ka Taste Delhi mai de rahi hai 50 Rs ka Vadapav ?
BTW Infosys walo ki monthly salary hoti hai 40K ??#VadapavGirl#ChandrikaDixit#BiggbossOTT3#BiggBoss#SanaMakbul#Naezy#LuvKataria#AnilKapoor… pic.twitter.com/ElK0ZML4V5
— Anuj Prajapati (@anujprajapati11)
Vadapav Girl Reveals she earns 40k Per Day just by selling Vadapav 😳
Mumbai ka Taste Delhi mai de rahi hai 50 Rs ka Vadapav 🤔
BTW Infosys walo ki monthly salary hoti hai 40K 🤣🤣#VadapavGirl#ChandrikaDixit#BiggbossOTT3#BiggBoss#SanaMakbul#Naezy#LuvKataria#AnilKapoor… pic.twitter.com/ElK0ZML4V5— Anuj Prajapati (@anujprajapati11) June 22, 2024
">June 22, 2024
ಚಂದ್ರಿಕಾ ದೀಕ್ಷಿತ್ ಅವರು ಮಹಾರಾಷ್ಟ್ರದ ಫೇಮಸ್ ವಡಾ ಪಾವ್ ಅನ್ನು ದೆಹಲಿ ಬೀದಿಯಲ್ಲಿ ಮಾರಾಟ ಮಾಡ್ತಾರೆ. ವಡಾ ಪಾವ್ ಮಾರಾಟ ಮಾಡುತ್ತಲೇ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಹೀಗಾಗಿ ಇವರು ಈ ಸಲದ ಹಿಂದಿಯ ಬಿಗ್ಬಾಸ್ ಒಟಿಟಿ ಸೀಸನ್- 3ಯ ಸ್ಪರ್ಧಿಯಾಗಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜೊತೆ ನಡೆದ ಮಾತುಕತೆಯಲ್ಲಿ ಚಂದ್ರಿಕಾ ದೀಕ್ಷಿತ್ ತಮ್ಮ ದಿನದ ಗಳಿಕೆ 40 ಸಾವಿರ ಎಂದು ಹೇಳಿದ್ದಾರೆ. ಇದನ್ನು ಕೇಳಿರುವ ಸಹ ಸ್ಪರ್ಧಿಗಳು ಕೂಡ ಒಂದು ಕ್ಷಣ ಶಾಕ್ಗೆ ಒಳಗಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ