/newsfirstlive-kannada/media/post_attachments/wp-content/uploads/2024/07/B-Nagendra-Arrest.jpg)
ವಾಲ್ಮೀಕಿ ನಿಗಮದ ಹಗರಣದಲ್ಲಿ ಈಗಾಗಲೇ ಎಸ್​ಐಟಿ ಚಾರ್ಜ್​ಶೀಟ್ ಸಲ್ಲಿಸಿದ್ದು ಈ ಬೆನ್ನಲ್ಲೇ ಇ.ಡಿ. ಕೂಡ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದೆ. ಮಾಜಿ ಸಚಿವ ಬಿ.ನಾಗೇಂದ್ರರೇ ಹಗರಣದ ಕಿಂಗ್​ಪಿನ್ ಅಂತ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್​ಗೆ ಚಾರ್ಜ್​ಶೀಟ್​​​ನಲ್ಲಿ ಕ್ಲೀನ್​ಚಿಟ್ ನೀಡಲಾಗಿದೆ.
ವಾಲ್ಮೀಕಿ ಹಗರಣದಲ್ಲಿ 4,970 ಪುಟಗಳ ಚಾರ್ಜ್​ಶೀಟ್
ವಾಲ್ಮೀಕಿ ನಿಗಮ ಹಗರಣದ ತನಿಖೆ ನಡೆಸುತ್ತಿರುವ ಇ.ಡಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಬರೋಬ್ಬರಿ 4,970 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದು ಅಕ್ರಮದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರರೇ ಕಿಂಗ್​​ಪಿನ್​​ ಅಂತ ಉಲ್ಲೇಖಿಸಿದೆ. ನಾಗೇಂದ್ರ ನಿರ್ದೇಶನದಂತೆಯೇ ಅಷ್ಟೂ ಹಣದ ಅವ್ಯವಹಾರ ನಡೆದಿದೆ ಅಂತ ತಿಳಿಸಿದೆ. ಒಟ್ಟು 25 ಆರೋಪಿಗಳ ವಿರುದ್ಧ ಆರೋಪ ಹೊರೆಸಿದೆ.
ಇದನ್ನೂ ಓದಿ: ಉಪನಾಯಕನ ವಿಚಾರದಲ್ಲಿ BCCI ಜಾಣ ನಡೆ; ಭಾರೀ ಚರ್ಚೆ ಆಗ್ತಿದೆ ಈ ನಿರ್ಧಾರ
ಕಿಂಗ್​​ಪಿನ್​​​ ನಾಗೇಂದ್ರ
- 4,970 ಪುಟಗಳ ಚಾರ್ಜ್​ಶೀಟ್, 144 ಪುಟಗಳ ದೂರು ಸಲ್ಲಿಕೆ
- ಎ1 ನಾಗೇಂದ್ರ, ಎ2 ಸತ್ಯನಾರಾಯಣ ವರ್ಮ, ಬ್ರೋಕರ್
- ಎ3 ಇಟಕಾಲ ಸತ್ಯನಾರಾಯಣವರ್ಮ, ಫಸ್ಟ್ ಬ್ಯಾಂಕ್ ಮಾಲೀಕ
- ಎ4 ಜೆ.ಜಿ ಪದ್ಮನಾಭ, ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ
- ನಾಗೇಂದ್ರ ಮತ್ತು ಗ್ಯಾಂಗ್​​ ಅಕ್ರಮ ನಡೆಸಿರೋದು ತನಿಖೆಯಲ್ಲಿ ಧೃಡ
- ಹಣ ಅಕ್ರಮಕ್ಕೆ ಒಳಸಂಚು, ಸಾಕ್ಷ್ಯನಾಶ ಮಾಡಲು ಒಳಸಂಚು
ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆ!
ನಕಲಿ ಖಾತೆ ತೆರೆದು ಹಣ ಡೆಪಾಸಿಟ್ ಮಾಡಲು ಸ್ವತಃ ನಾಗೇಂದ್ರ ಸೂಚನೆ ನೀಡಿದ್ದರು.. ನಾಗೇಂದ್ರ ಸೂಚನೆಯಂತೆ ಎಂಡಿ ಜೆ.ಜಿ.ಪದ್ಮನಾಭ ಅಕ್ರಮ ಎಸಗಿದ್ದರು ಅನ್ನೋದು ಬಯಲಾಗಿದೆ. ನಿಗಮದ 20.19 ಕೋಟಿ ಹಣವನ್ನ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆಯಾಗಿತ್ತು ಎಂಬ ವಿಚಾರ ತನಿಖೆಯಲ್ಲಿ ಪತ್ತೆಯಾಗಿದೆ. ಬಳ್ಳಾರಿಯ ಪ್ರತಿ ಬೂತ್​​ಗೂ ಹಣ ಹಂಚಿಕೆ ಮಾಡಿರೋದು ಬಯಲಾಗಿದೆ. ಇದ್ರಲ್ಲಿ ಸ್ವತಃ ನಾಗೇಂದ್ರ 5.26 ಕೋಟಿ ಹಣ ಬಳಕೆ ಮಾಡಿರೋದು ಗೊತ್ತಾಗಿದೆ.
ಇ.ಡಿ ತನಿಖೆಯಲ್ಲಿ ಇಲ್ಲ ಶಾಸಕ ಬಸನಗೌಡ ದದ್ದಲ್ ಪಾತ್ರ
ಎಸ್​ಐಟಿ ಚಾರ್ಜ್​ಶೀಟ್​ನಂತೆ ಇಡಿ ಚಾರ್ಜ್​ಶೀಟ್​​ನಲ್ಲಿ ಸಾಕಷ್ಟು ಭಿನ್ನವಾಗಿದೆ. ಎಸ್​ಐಟಿ ಚಾರ್ಜ್​ಶೀಟ್​ನಲ್ಲಿ ನಾಗೇಂದ್ರಗೆ ಕ್ಲೀನ್​ಚಿಟ್​ ನೀಡಿದೆ. ದದ್ದಲ್ ಪಾತ್ರವೂ ಉಲ್ಲೇಖವಾಗಿಲ್ಲ. ಆದ್ರೆ, ಇಡಿ ಚಾರ್ಜ್​ಶೀಟ್​ನಲ್ಲಿ ನಾಗೇಂದ್ರ ಕಿಂಗ್​​​ಪಿನ್​​ ಅಂತ ಆರೋಪಿಸಿದೆ. ಒಟ್ಟಾರೆ, ವ್ಯತಿರಿಕ್ತ ಚಾರ್ಜ್​​ಶೀಟ್​​ಗಳು ಆಯಾ ಸರ್ಕಾರಗಳನ್ನ ಬಿಂಬಿಸ್ತಿರುವಂತೆ ಕಾಣಿಸ್ತಿದೆ.
ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ