newsfirstkannada.com

ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಮಹಿಳಾ ಲೋಕೋಪೈಲಟ್.. ಎಲ್ರಿಗೂ ಆಶ್ಚರ್ಯ ಮೂಡಿಸಿದ ಆಹ್ವಾನ!

Share :

Published June 9, 2024 at 8:45am

  3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರಿಸಲಿರೋ ಮೋದಿ

  ಐಶ್ವರ್ಯರನ್ನು ಆಹ್ವಾನ ಮಾಡಿದರ ಹಿಂದೆ ಇದೆ ದೊಡ್ಡ ಕಾರಣ

  ಕಾರ್ಯಕ್ರಮಕ್ಕೆ ರೈಲ್ವೆ ಸಿಬ್ಬಂದಿಯನ್ನ ಆಹ್ವಾನಿಸಿದ ಅಧಿಕಾರಿಗಳು

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮೋದಿಯವರ ಅದ್ಧೂರಿ ಪ್ರಮಾಣವಚನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ಇಂದು ಸಂಜೆ ನಡೆಯುವ ಸಮಾರಂಭಕ್ಕೆ ದೇಶ-ವಿದೇಶಗಳ ಗಣ್ಯರ ಜೊತೆಗೆ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಲಾಗಿದೆ. ಇಂತಹ ಮಹಾನ್ ಕಾರ್ಯಕ್ರಮಕ್ಕೆ ವಂದೇ ಭಾರತ್ ಟ್ರೈನ್​ನ ಮಹಿಳಾ ಲೋಕೋಪೈಲಟ್​​ರನ್ನ ಕೂಡ ಆಹ್ವಾನಿಸಿರುವುದು ವಿಶೇಷ ಎನಿಸಿದೆ.

ಇದನ್ನೂ ಓದಿ: ಭಾರೀ ಮಳೆಯ ಮುನ್ಸೂಚನೆ.. ಜೂನ್ 11ರವರೆಗೆ ಅಲರ್ಟ್​ ಆಗಿರುವಂತೆ ಖಡಕ್ ವಾರ್ನಿಂಗ್

ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗದ ವಂದೇ ಭಾರತ್ ರೈಲಿನ ಮಹಿಳಾ ಲೋಕೋಪೈಲಟ್ ಐಶ್ವರ್ಯ ಎಸ್ ಮೆನನ್​ರಿಗೆ ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಐಶ್ವರ್ಯ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜನಶತಾಬ್ದಿಯಂತಹ ಪ್ರತಿಷ್ಠಿತ ರೈಲುಗಳನ್ನು 2 ಲಕ್ಷಕ್ಕೂ ಹೆಚ್ಚು ಗಂಟೆಗಳ ಕಾಲ ಚಾಲನೆ ಮಾಡಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಐಶ್ವರ್ಯ ಅವರ ಚುರುಕುತನ, ಜಾಗರೂಕತೆ ಮತ್ತು ರೈಲ್ವೆ ಸಿಗ್ನಲಿಂಗ್‌ನ ಸಮಗ್ರ ಜ್ಞಾನಕ್ಕಾಗಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: TDP, JDUಗೆ ಸಿಂಹಪಾಲು ಸಿಗಲಿದೆಯಾ.. ಮೋದಿ ಜೊತೆ ಇಂದು ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸ್ತಾರೆ?

ಐಶ್ವರ್ಯ ಚೆನ್ನೈ-ವಿಜಯವಾಡ ಮತ್ತು ಚೆನ್ನೈ-ಕೊಯಂಬತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ಪರಿಚಯಿಸಿದಾಗಿನಿಂದ ನಿಯಮಿತವಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಯೋಜನೆಗಳ ಫಲಾನುಭವಿಗಳ ವಿಭಾಗದಲ್ಲಿ ‘ವಿಕ್ಷಿತ್ ಭಾರತ್ ರಾಯಭಾರಿಗಳು’ ಎಂದು ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ. ಇದರ ಜೊತೆಗೆ, ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರು ಸೇರಿದಂತೆ ಇತರೆ ಕೆಲ ಸಿಬ್ಬಂದಿಯನ್ನು ವಿಶೇಷ ಅತಿಥಿಗಳೆಂದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಮಹಿಳಾ ಲೋಕೋಪೈಲಟ್.. ಎಲ್ರಿಗೂ ಆಶ್ಚರ್ಯ ಮೂಡಿಸಿದ ಆಹ್ವಾನ!

https://newsfirstlive.com/wp-content/uploads/2024/06/MODI_OATH.jpg

Load More