/newsfirstlive-kannada/media/post_attachments/wp-content/uploads/2024/04/VIRAT-KOHLI-4.jpg)
ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆರ್ಸಿಬಿ ಸೋತಿರೋದು ಮುಗಿದ ಅಧ್ಯಾಯ. ಅವತ್ತು ನಡೆದ ಪಂದ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಸೋಶಿಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅದು ಕೂಡ ವಿರಾಟ್ ಕೊಹ್ಲಿಗೆ ಸಂಬಂಧಿಸಿದ್ದಾಗಿದೆ.
ಇದನ್ನೂ ಓದಿ: 16 ವರ್ಷಗಳಿಂದ ಫ್ಯಾನ್ಸ್ ಹೃದಯ ಛಿದ್ರ, ಛಿದ್ರ.. ಆದರೂ ಆರ್ಸಿಬಿಗೆ ಎಲ್ಲಿಲ್ಲದ ಜನಪ್ರಿಯತೆ, ಗುಟ್ಟೇನು?
ವಿರಾಟ್ ಕೊಹ್ಲಿ ಅಂದರೆ ಎದುರಾಳಿ ಮತ್ತು ತಂಡದ ಆಟಗಾರರಿಗೆ ಎಷ್ಟು ಗೌರವ ಅನ್ನೋದನ್ನು ತಿಳಿಸುತ್ತಿದೆ ಈ ವಿಡಿಯೋ. ಮೊನ್ನೆ ನಡೆದ ಪಂದ್ಯ ಮುಗಿದ ಮೇಲೆ ಆ್ಯಂಗ್ರಿ ಮ್ಯಾನ್ ಗೌತಮ್ ಗಂಭಿರ್, ಕೊಹ್ಲಿಯನ್ನು ತಬ್ಬಿ ವಿಶ್ ಮಾಡಿದರು. ಎಲ್ಲರೂ ಮೈದಾನದಲ್ಲಿ ಎದುರಾಳಿ ತಂಡದ ಆಟಗಾರರನ್ನು ಕೈಕುಲುಕಿ ವಿಶ್ ಮಾಡಿದರು.
ಇದನ್ನೂ ಓದಿ:ಅಯ್ಯೋ, ಸಾವು ಹೀಗೂ ಬರುತ್ತೆ.. ಪಿಜಿ ಮಾಲೀಕನ ನಿರ್ಲಕ್ಷ್ಯಕ್ಕೆ ಐಟಿ ಉದ್ಯೋಗಿ ಬಲಿ, Video
Varun Chakravarthy & Nitish Rana showing the respect to Virat Kohli by removing the cap. 🫡
- An inspiration, King Kohli. pic.twitter.com/naROQzlNMQ— Johns. (@CricCrazyJohns) April 22, 2024
ಅಂತೆಯೇ ಆರ್ಸಿಬಿ ಸಾಲಿನಲ್ಲಿ ವಿರಾಟ್ ಕೊಹ್ಲಿ ಮುಂದೆ ಇದ್ದರು. ಕೊಹ್ಲಿ ಬರುತ್ತಿದ್ದಂತೆಯೇ ವರಣ್ ಚಕ್ರವರ್ತಿ ಮತ್ತು ನಿತೀಶ್ ಕುಮಾರ್ ತಮ್ಮ ತಲೆಯ ಮೇಲಿದ್ದ ಹ್ಯಾಟ್ ತೆಗೆದು ಗೌರವ ನೀಡಿದ್ದಾರೆ. ಕೊಹ್ಲಿ ಭಾರತ ತಂಡ ಸೇರಿದಂತೆ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಮೊನ್ನೆ ಔಟ್ ಆಗುತ್ತಿದ್ದಂತೆಯೇ, ಕೊಹ್ಲಿ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಕೆಲವರು ಟೀಕೆ ಮಾಡಿದ್ದರು. ಈ ಬೆನ್ನಲ್ಲೇ, ಕೊಹ್ಲಿಗೆ ಯುವ ಕ್ರಿಕೆಟಿಗರು ಗೌರವ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್