ಹೊಸ ರೀಲ್ಸ್ ಮಾಡೋ ಮೂಲಕ ಸಾಕಷ್ಟು ಸದ್ದು ಮಾಡಿದ ವರ್ಷಾ ಹಾಗೂ ವರುಣ್
ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ ಇಬ್ಬರ ಈ ಬ್ರೇಕಪ್ ಸ್ಟೋರಿ
ವರ್ಷಾ, ವರುಣ್ ಬ್ರೇಕಪ್‌ಗೆ ಸಖತ್ ಕಾಲೆಳೆದು ಕಾಮೆಂಟ್ ಮಾಡಿದ ನೆಟ್ಟಿಗರು
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ಜನರು ಒಬ್ಬರಿಗೊಬ್ಬರು ಪರಿಚಯ ಆಗುತ್ತಾರೆ. ದಿನ ಕಳೆದಂತೆ ಆ ಸ್ನೇಹ ಪ್ರೀತಿಗೆ ತಿರುಗಿ ಮದುವೆ ಸಹ ಮಾಡಿಕೊಳ್ಳುತ್ತಾರೆ. ಅದೇ ಸಾಲಿನಲ್ಲಿ ರೀಲ್ಸ್ ಸ್ಟಾರ್ಸ್ ಎಂದೇ ಖ್ಯಾತಿ ಪಡೆದಿರೋ ವರ್ಷ ಕಾವೇರಿ ಹಾಗೂ ವರುಣ್ ಜೋಡಿ ಕೂಡ ಒಂದು.
ಇದನ್ನು ಓದಿ: ಸಮ್‌ಥಿಂಗ್ ಸ್ಪೆಷಲ್.. ಈ ಬಾರಿಯ ಬಿಗ್ಬಾಸ್ಗೆ ಮುಹೂರ್ತ ಫಿಕ್ಸ್; ಕಿಚ್ಚನ ಕಥೆ ನಿಮ್ಮ ಜೊತೆ ಯಾವತ್ತಿಂದ?
ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ತಮ್ಮದೇ ಆದ ಹೈಪ್ ಕ್ರಿಯೇಟ್ ಮಾಡಿದ್ದಾರೆ ಈ ವರ್ಷಾ ಹಾಗೂ ವರುಣ್ ಜೋಡಿ. ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಈ ಜೋಡಿಗಳ ರೀಲ್ಸ್ ಒಂದಾದ ಮೇಲೆ ಒಂದು ಬರ್ತಾನೆ ಇರುತ್ತವೆ. ಈ ಇಬ್ಬರ ವಿಡಿಯೋವನ್ನು ನೋಡಬೇಕೆಂದು ಅದೆಷ್ಟೋ ಜನರು ಕಾಯ್ತಾ ಇರ್ತಾರೆ. ಈ ಜೋಡಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಜೋಡಿ ಆಗಾಗ ಹೊಸ ಹೊಸ ಭಿನ್ನ ವಿಭಿನ್ನ ರೀಲ್ಸ್ ಮಾಡುವ ಮೂಲಕ ನೆಟ್ಟಿಗರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದರು.
ಈ ಇಬ್ಬರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾ ಇದ್ದರು. ಶೇರ್ ಮಾಡಿಕೊಂಡ ವಿಡಿಯೋಗಳಿಗೆ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಳ್ಳುತ್ತಿದ್ದವು. ಇಷ್ಟಲ್ಲದೇ ಈ ಜೋಡಿ ಯೂಟ್ಯೂಬ್ನಲ್ಲಿಯೂ ಕೂಡ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಇನ್ನು ಈ ಹಿಂದೆ ವರ್ಷ ಹಾಗೂ ವರುಣ್ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಅಭಿಮಾನಿಗಳ ಜೊತೆಗೆ ಶೇರ್ ಕೂಡ ಮಾಡಿಕೊಂಡಿದ್ದರು.
ವರ್ಷ ಕಾವೇರಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ ಪೋಸ್ಟ್ನಲ್ಲಿ ಏನಿದೆ..?
“ಎಲ್ಲರಿಗೂ ನಮಸ್ಕಾರ ತುಂಬಾ ದಿನದಿಂದ ನೀವೆಲ್ಲ ನನಗೆ ಕೇಳಿದಂಥ ಸಾಮಾನ್ಯ ಪ್ರಶ್ನೆ ಏನೆಂದರೆ ನಿನಗೂ ಮತ್ತು ವರುಣ್‌ಗೂ ಏನಾಯಿತು ಎಂದು ಆ ವಿಷಯದ ಬಗ್ಗೆ ಇವತ್ತು ನಾನು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ ಸುಮಾರು ವರ್ಷಗಳಿಂದ ನಾನು ಮತ್ತು ಅವರು ಇಬ್ಬರು ಪ್ರೀತಿಸುತ್ತಿರುವುದು ನಿಮಗೆಲ್ಲಾ ಗೊತ್ತಿರುವ ವಿಷಯ ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನನ್ನು ಬಿಟ್ಟು ಬೇರೆ ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದ ನನಗೆ ಆ ಹುಡುಗಿಯ ಹೆಸರು ಹೇಳಲು ಇಷ್ಟವಿಲ್ಲ ಏಕೆಂದರೆ ಇನ್ನೊಬ್ಬರ ಮನೆಯ ಹೆಣ್ಣು ಮಗಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ಈ ವಿಷಯಕ್ಕಾಗಿ ಹಲವಾರು ಬಾರಿ ನನ್ನ ಮತ್ತು ಮಧ್ಯೆ ಮನಸ್ತಾಪಗಳು ಬಂದಿದ್ದು ನಾನು ಎಷ್ಟು ಹೇಳಿದರು ಸಹ ಅವನು ಆ ಹುಡುಗಿಯನ್ನು ಬಿಡುವುದಕ್ಕೆ ತಯಾರಿಲ್ಲ ಆದುದರಿಂದ ಅವನೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ ನಾನು ಆ ಹುಡುಗಿಯ ಜೊತೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಹೇಳಿದಾಗ ನನಗೆ ಮನಸ್ಸಿಗೆ ತುಂಬಾ ನೋವಾಯ್ತು ಆದುದರಿಂದ ನಾನು ಕಳೆದ ಸುಮಾರು ತಿಂಗಳುಗಳಿಂದ ನನ್ನ ಮತ್ತು ವರು ವಿಡಿಯೋಸ್ ಗಳನ್ನು ಅಪ್ಲೋಡ್ ಮಾಡುತ್ತಿಲ್ಲ ನಮ್ಮನ್ನು ಪ್ರೀತಿಸುವ ಜನಗಳಿಗೆ ಹೇಳದಿದ್ದರೆ ನನಗೆ ನಾನೇ ಮೋಸ ಮಾಡಿಕೊಳ್ಳುತ್ತಿದ್ದೇನೆ ಎಂದು ನನ್ನ ಮನಸ್ಸಿಗೆ ಅನಿಸಿದೆ ಆದುದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯವನ್ನು ಹೇಳಿಕೊಳ್ಳಲು ಇಷ್ಟಪಡುತ್ತೇನೆ ಇನ್ನು ಮುಂದೆ ನನ್ನ ಮತ್ತು ವರುಣ್ ಮಧ್ಯೆ ಯಾವುದೇ ರೀತಿಯ ಪ್ರೀತಿ ಸಂಬಂಧ ಇರುವುದಿಲ್ಲ ಅವನು ಆ ಹುಡುಗಿಯ ಜೊತೆ ಖುಷಿಯಾಗಿರಲಿ ನನ್ನನ್ನು ನಂಬಿಕೊಂಡು ನನ್ನ ಕುಟುಂಬದ ನಾನು ಅವರಿಗಾಗಿ ಜೀವನವನ್ನು ನಡೆಸಲೇಬೇಕು ಆದುದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ ದಯವಿಟ್ಟು ಇದನ್ನು ನೀವು ಅರ್ಥ ಮಾಡಿಕೊಳ್ಳುವಿರಿ ಎಂದು ನಾನು ಭಾವಿಸಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಇನ್ನೂ, ಸುಮಾರು ನಾಲ್ಕು ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ ಈಗ ನಾನೊಂದು ತೀರ ನೀನೊಂದು ತೀರ ಎಂಬಂತೆ ಆಗಿದ್ದರು ಎನ್ನಲಾಗಿದೆ. ಈ ಹಿಂದೆ ನಾವಿಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದೇವೆ ಎಂದು ರೀಲ್ಸ್ ಸ್ಟಾರ್ ವರ್ಷ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟ್ ಅನ್ನು ನೋಡಿದ ಅದೆಷ್ಟೋ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇದೀಗ ಕನ್ನಡದ ಬಿಗ್ಬಾಸ್ ಸೀಸನ್ 10ಗೆ ಹೋಗುತ್ತಿರಬಹುದು. ಹೀಗಾಗಿ ಈ ಇಬ್ಬರು ಬ್ರೇಕಪ್ ಮಾಡಿಕೊಳ್ಳುವ ನಾಟಕ ಮಾಡುತ್ತಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಆದರೆ ಬಿಗ್ ಬಾಸ್ ಶೋಗೆ ಹೋಗುವ ಬಗ್ಗೆ ವರ್ಷಾ ಹಾಗೂ ವರುಣ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈಗ ವರ್ಷ ಹಾಗೂ ವರುಣ್ ಬ್ರೇಕಪ್ ಆಗಿರೋ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಹೀಗಾಗಿ ನೆಟ್ಟಿಗರು ಈ ಕುರಿತು ಕಾಮೆಂಟ್ಸ್ ಮೂಲಕ ಇಬ್ಬರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ