newsfirstkannada.com

ಬಾಗಲಕೋಟೆಯಲ್ಲಿ ಕಾಂಗ್ರೆಸ್​ಗೆ ಬಿಗ್​ ಶಾಕ್​; ಸಿದ್ದು, ಡಿಕೆಶಿಗೆ ವೀಣಾ ಕಾಶಪ್ಪನವರದ್ದೇ ಆತಂಕ..!​

Share :

Published April 1, 2024 at 6:42am

  2-3 ದಿನದಲ್ಲಿ ಬೆಂಬಲಿಗರ ಸಭೆ ನಡೆಸಲಿರುವ ವೀಣಾ

  ವೀಣಾ ಕಾಶಪ್ಪನವರ್​ ಮನವೊಲಿಕೆಗೆ ಸಂಯುಕ್ತಾ ಯತ್ನ

  ಬೆಂಗಳೂರಿನಲ್ಲಿ ಎರಡೂ ಬಣದ ಮಧ್ಯೆ ಸಂಧಾನ ಸಭೆ

ಬಾಗಲಕೋಟೆ ಮತ್ತು ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಅನೌನ್ಸ್​ ಆದ್ರೂ, ಬಂಡಾಯದ ಕಿಡಿ ಇನ್ನೂ ಹೊಗೆಯಾಡುತ್ತಲೇ ಇದೆ. ಬೆಂಗಳೂರಿಗೆ ಬಂದು ಸಿಎಂ ಬಳಿ ಟಿಕೆಟ್​ ಬದಲಾವಣೆಗೆ ಬೇಡಿಕೆ ಇಟ್ಟಿದ್ದ ವೀಣಾ ಕಾಶಪ್ಪನವರ್​ ನಿರಾಶೆಯಲ್ಲೇ ಹಿಂದಿರಿಗಿದ್ರು. ಇದೀಗ ಬೆಂಬಲಗರ ಸಭೆ ಕರೆದಿರೋದು ಕಾಂಗ್ರೆಸ್​ಗೆ ಮತ್ತೆ ತಲೆನೋವು ತರಿಸಿದೆ. ಮತ್ತೊಂದೆಡೆ ಕೋಲಾರದಲ್ಲಿ ರಮೇಶ್​ಕುಮಾರ್​, ಮುನಿಯಪ್ಪ ಬಣದ ಮಧ್ಯೆ ರಾಜೀ ಸಂಧಾನ ಯಶಸ್ವಿಯಾಗಿದೆ.

ಮುಂದಿನ ರಾಜಕೀಯ ನಡೆ ಬಗ್ಗೆ ಸಭೆಯಲ್ಲಿ ಘೋಷಣೆ ಸಾಧ್ಯತೆ

ಬಾಗಲಕೋಟೆ ವಿಧಾನಸಭಾ ಟಿಕೆಟ್​ ಕೈತಪ್ಪಿದ್ರೂ, ಟಿಕೆಟ್​ ಆಕಾಂಕ್ಷಿ ವೀಣಾ ಕಾಶಪ್ಪನವರ್​ ಮಾತ್ರ, ತಮ್ಮ ಟಿಕೆಟ್​ ಪಡೆಯುವ ಪ್ರಯತ್ನವನ್ನು ಮಾತ್ರ ಕೈ ಬಿಟ್ಟಿಲ್ಲ. ಸಿಎಂ ಆಹ್ವಾನದ ಮೇರೆಗೆ ಬೆಂಗಳೂರಿಗೆ ಆಗಮಿಸಿ, ಟಿಕೆಟ್​ ಬದಲಾವಣೆ ಮಾಡುವಂತೆ ಬೇಡಿಕೆ ಇಟ್ಟಿದ್ರು. ಆದ್ರೆ ಸಿಎಂ ಟಿಕೆಟ್​ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ವೀಣಾ ಕಾಶಪ್ಪನವರ್​ಗೆ ಕಡ್ಡಿ ಮುರಿದಂತೆ ತಿಳಿಸಿದ್ದಾರೆ. ಇದರಿಂದ ನಿರಾಶೆಯಿಂದ ಬರಿಗೈಯಲ್ಲೇ ಕ್ಷೇತ್ರಕ್ಕೆ ವಾಪಸ್​ ಆದ ವೀಣಾ ಕಾಶಪ್ಪನವರ್​, ತಮ್ಮ ಬೆಂಬಲಿಗರ ಜೊತೆ ಸಭೆ ನಡೆಯಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಅಭಿಷೇಕ್​ ಅಂಬರೀಶ್​​ ರಾಜಕೀಯಕ್ಕೆ ಎಂಟ್ರಿ? HDK ಭೇಟಿ ಬಳಿ ಸುಮಲತಾ ಬಿಚ್ಚಿಟ್ಟ ಸತ್ಯವೇನು?

ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಇನ್ನೆರಡು ದಿನದಲ್ಲಿ ವೀಣಾ ಕಾಶಪ್ಪನವರ್​ ಬೆಂಬಲಿಗರ ಸಭೆ ನಡೆಸುವ ಸಾಧ್ಯತೆ ಇದೆ. ಜಿಲ್ಲೆಯ ಶಾಸಕರನ್ನ ಹೊರತುಪಡಿಸಿ, ಕೇವಲ ತಾಲೂಕ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಜೊತೆ ಸಭೆ ನಡೆಸಲು ನಿರ್ಧಾರಿಸಿದ್ದಾರೆ. ಸಿಎಂ ಮಾತಿನಿಂದ ಬೇಸರಗೊಂಡಿರುವ ವೀಣಾ ಕಾಶಪ್ಪನವರ್​, ಈಗಾಗಲೇ ಪ್ರಚಾರದಿಂದ ತಟಸ್ಥ ಉಳಿಯುವ ನಿರ್ಧಾರ ಕೈಗೊಂಡಿದ್ದ ವೀಣಾ, ಮುಂದಿನ ರಾಜಕೀಯ ನಡೆ ಬಗ್ಗೆ ಬೆಂಬಲಿಗರ ಚರ್ಚಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​ ಅಭ್ಯರ್ಥಿ ಸಂಯುಕ್ತಾ ಪಾಟೀಲ್​, ಹಿರಿಯ ಮುಖಂಡರೊಂದಿಗೆ ವೀಣಾ ಕಾಶಪ್ಪನವರ್​ರನ್ನು ಭೇಟಿಯಾಗಿ ಮನವೊಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುನಿಯಪ್ಪ ಭೇಟಿಯಾಗಿ ಆಶೀರ್ವಾದ ಪಡೆದ ಗೌತಮ್​

ಬಾಗಲಕೋಟೆ ಮಾತ್ರವಲ್ಲ. ಇತ್ತ ಕೋಲಾರದಲ್ಲೂ ಕಾಂಗ್ರೆಸ್​ನಲ್ಲಿ ಟಿಕೆಟ್​ ಗೊಂದಲ ಬಗೆಹರಿದರು ಅಸಮಾಧಾನದ ಕಿಡಿ ಇನ್ನೂ ಹೊಗೆಯಾಡುತ್ತಲೇ ಇದೆ. ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ ಆದಂತೆ, ಸಚಿವ ಕೆ.ಹೆಚ್​.ಮುನಿಯಪ್ಪ ಮತ್ತು ರಮೇಶ್​ಕುಮಾರ್​ ಬಣ ಬಡಿದಾಟದಲ್ಲಿ ಗೌತಮ್​ ಕೈಗೆ ಟಿಕೆಟ್​ ಸಿಕ್ಕಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ಅಭ್ಯರ್ಥಿ ಗೌತಮ್​ ಎರಡೂ ಬಣದ ಬೆಂಬಲ ಪಡೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಮುನಿಯಪ್ಪ ಮತ್ತು ರಮೇಶ್​ಕುಮಾರ್​ ಬಣದ ನಡುವೆ ಶಾಂತಿ ಸಂಧಾನ ಸಭೆ ನಡೆಸಿದ್ದಾರೆ. ಇನ್ನು ಕಾಂಗ್ರೆಸ್​ ಅಭ್ಯರ್ಥಿ ಗೌತಮ್​ ಸಚಿವ ಮುನಿಯಪ್ಪರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ. ಕರ್ನಾಟಕದಲ್ಲಿ 20 ಕ್ಷೇತ್ರಗಳನ್ನು ಟಾರ್ಗೆಟ್​ ಮಾಡಿಕೊಂಡಿರುವ ಕಾಂಗ್ರೆಸ್​ಗೆ, ಪ್ರತಿಷ್ಟೆ ಮತ್ತು ಬಣ ರಾಜಕೀಯ ತಲೆನೋವಾಗಿ ಪರಿಣಮಿಸಿದೆ. ಕೋಲಾರದಲ್ಲಿ ಒಂದು ಹಂತಕ್ಕೆ ಬಂಡಾಯ ಶಮನವಾದಂತೆ ಕಾಣ್ತಿದೆ. ಆದ್ರೆ ವೀಣಾ ಕಾಶಪ್ಪನವರ್​ ಮನವೊಲಿಕೆಗೆ ಕಾಂಗ್ರೆಸ್​ ಹರಸಾಹಸ ಪಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಗಲಕೋಟೆಯಲ್ಲಿ ಕಾಂಗ್ರೆಸ್​ಗೆ ಬಿಗ್​ ಶಾಕ್​; ಸಿದ್ದು, ಡಿಕೆಶಿಗೆ ವೀಣಾ ಕಾಶಪ್ಪನವರದ್ದೇ ಆತಂಕ..!​

https://newsfirstlive.com/wp-content/uploads/2024/03/veena-kashapanavar.jpg

Load More