newsfirstkannada.com

ಸಾವಿಗೆ ಶರಣಾದ ಕರ್ನಾಟಕ ತಂಡದ ಪೇಸ್ ಸೆನ್ಸೆಷನ್.. ಜಾನ್ಸನ್ ನೆನೆದು ಭಾವುಕರಾದ ಕ್ರಿಕೆಟ್ ದೇವರು

Share :

Published June 21, 2024 at 12:43pm

    ಭಾರತದ ಮಾಜಿ ಕ್ರಿಕೆಟಿಗ ಡೇವಿಡ್​​ ಜಾನ್ಸನ್ ಇನ್ನಿಲ್ಲ

    52 ವರ್ಷಕ್ಕೆ ಇಹಲೋಕ ತ್ಯಜಿಸಿದ ಕರುನಾಡ ಕಣ್ಮಣಿ

    ನಿಧನಕ್ಕೆ ಕಂಬನಿ ಮಿಡಿದ ಮಾಜಿ-ಹಾಲಿ ಕ್ರಿಕೆಟಿಗರು

ಒಂದೆಡೆ ಟಿ20 ವಿಶ್ವಕಪ್​​ ಟೂರ್ನಿಯ ಸೂಪರ್​​​​-8 ಪಂದ್ಯಗಳ ಫೀವರ್​​ ಹೆಚ್ಚಾಗಿದೆ. ಆದ್ರೆ, ಇನ್ನೊಂದೆಡೆ ಕರ್ನಾಟಕದ ಕ್ರಿಕೆಟ್​ ಲೋಕವನ್ನ ನೀರವ ಮೌನ ಆವರಿಸಿದೆ. ಕರ್ನಾಟಕ ಕ್ರಿಕೆಟ್​ ಕಂಡ ಪೇಸ್​ ಸೆನ್ಸೇಷನ್, ಲೆಜೆಂಡ್​ ಡೇವಿಡ್​ ಜಾನ್ಸನ್​ ಜೀವನದ ಇನ್ನಿಂಗ್ಸ್​ ಅಂತ್ಯಗೊಳಿಸಿದ್ದಾರೆ. ಕೇವಲ 52 ವರ್ಷಕ್ಕೆ ಡೇವಿಡ್​ ಜಾನ್ಸನ್​​ ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಕರ್ನಾಟಕ ಫ್ಯಾನ್ಸ್​ಗೆ ಬರಸಿಡಿಲು ಬಡಿದಂತಾಗಿದೆ.

ಭಾರತ ವರ್ಸಸ್​ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್​​ನ ಸೂಪರ್​​-8 ಕಾದಾಟಕ್ಕೆ ವೇದಿಕೆ ಸಜ್ಜಾಗಿತ್ತು. ಕ್ರಿಕೆಟ್ ಪ್ರೇಮಿಗಳು ಫುಲ್ ಎಕ್ಸೈಟ್​​​​​​ನಿಂದ ಕಾಯ್ತಿದ್ರು. ಇಂತಹ ಹೊತ್ತಲ್ಲೆ ಕರ್ನಾಟಕದ ಕ್ರಿಕೆಟ್​ ಪ್ರೇಮಿಗಳ ಕಿವಿಗೆ ಒಂದು ಬರಸಿಡಿಲಿನ ಸುದ್ದಿ ಅಪ್ಪಳಿಸಿತು. 90ರ ದಶಕದಲ್ಲೇ ವೇಗದ ಬೌಲಿಂಗ್​ ಮಾಡೋದು ಹೇಗೆ ಅಂತಾ ಬಿಗ್​ ಸ್ಟೇಜ್​ನಲ್ಲಿ ತೋರಿಸಿದ್ದ ಹೆಮ್ಮಯ ಕನ್ನಡಿಗ ಅಷ್ಟೇ ವೇಗವಾಗಿ ಜೀವನದ ಇನ್ನಿಂಗ್ಸ್​ ಕೂಡ ಮುಗಿಸಿಬಿಟ್ಟಿದ್ದಾರೆ. ಕೇವಲ 52 ವರ್ಷಕ್ಕೆ ಕರ್ನಾಟಕ ಕ್ರಿಕೆಟ್​ ಕಂಡ ಲೆಂಜೆಡರಿ ಫಾಸ್ಟ್​​ ಬೌಲರ್​​, ಡೇವಿಡ್​ ಜಾನ್ಸನ್​ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ:ದರ್ಶನ್​​ ವಿರುದ್ಧ ನಾಲ್ಕು.. ​ಕಪ್ಪೆ, ರಘು, ಮೂರ್ತಿ ವಿರುದ್ಧವೂ ಕೇಸ್.. ಬೆಚ್ಚಿ ಬೀಳುವಂತಿವೆ ಕ್ರಿಮಿನಲ್ ಬ್ಯಾಕ್​ಗ್ರೌಂಡ್..!

ಬಹುಕಾಲದಿಂದ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲ್ತಿದ್ದ ಡೇವಿಡ್​ ಜಾನ್ಸನ್​ ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಅಸುನೀಗಿದ್ದಾರೆ. ಕಾಲು ಜಾರಿ ಬಿದ್ದ ಪರಿಣಾಮ ಪ್ರಾಣ ಪಕ್ಷಿ ಹಾರಿ ಹೋಯ್ತು ಎಂಬ ಸುದ್ದಿ ಒಂದು ಮೂಲದ್ದಾಗಿದ್ರೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಲವಾದ ಗಾಸಿಪ್​ ಕೂಡ ಹಬ್ಬಿದೆ. ಕುಟುಂಬದವರು ಮಾತ್ರ ಈ ವಿಚಾರದಲ್ಲಿ ಮೌನಕ್ಕೆ ಜಾರಿದ್ದಾರೆ. ಸಾವು ಹೇಗೆ ಸಂಭವಿಸಿರಲಿ. ಕ್ರಿಕೆಟ್ ಲೋಕ​ ಮಾತ್ರ ಡೇವಿಡ್​ ಜಾನ್ಸನ್​ ನಿಧನದಿಂದ ಬಡವಾಗಿರೋದಂತೂ ಸತ್ಯ. ಸಚಿನ್​ ತೆಂಡುಲ್ಕರ್​, ಅನಿಲ್​ ಕುಂಬ್ಳೆ, ಗೌತಮ್​ ಗಂಭೀರ್​ ಸೇರಿದಂತೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟರ್ಸ್​ ಡೇವಿಡ್​ ಜಾನ್ಸನ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

‘ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ’
‘ನನ್ನ ಮಾಜಿ ಸಹ ಆಟಗಾರ ಡೇವಿಡ್​ ಜಾನ್ಸನ್​​ ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಜೀವನದಲ್ಲಿ ತುಂಬಾ ಉತ್ಸುಕರಾಗಿದ್ದ ಜಾನ್ಸನ್​, ಆನ್​ ಫೀಲ್ಡ್​ನಲ್ಲಿ ಹೋರಾಟಗಾರನಾಗಿದ್ದರು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಖಃದಲ್ಲಿ ನಾನೂ ಭಾಗಿ’-ಸಚಿನ್​ ತೆಂಡುಲ್ಕರ್​, ಮಾಜಿ ಕ್ರಿಕೆಟಿಗ

ಇದನ್ನೂ ಓದಿ:ಅಗಲಿದ ಕನ್ನಡಿಗನ ಮರೆಯದ ಟೀಂ ಇಂಡಿಯಾ.. ಅಫ್ಘಾನ್ ವಿರುದ್ಧ ಕಪ್ಪು ಪಟ್ಟಿ ಕಟ್ಟಿ ಆಡಿದ ರೋಹಿತ್ ಪಡೆ..

90ರ ದಶಕದಲ್ಲಿ ಕರ್ನಾಟಕ ಕ್ರಿಕೆಟ್​ ತಂಡ ಭಾರತೀಯ ಕ್ರಿಕೆಟ್​ ಲೋಕದಲ್ಲಿ ಸೆನ್ಸೇಷನ್​ ಸೃಷ್ಟಿಸಿತ್ತು. ಆಗ ಕರ್ನಾಟಕದ ಒನ್​ ಆಫ್​ ಲೀಡಿಂಗ್​ ಪೇಸ್​​ ಬೌಲರ್​​ ಆಗಿದ್ರು ಡೇವಿಡ್​ ಜಾನ್ಸನ್. ಡೇವಿಡ್​ರ ಪೇಸ್​ ಆಡೋದಕ್ಕೆ ಎಷ್ಟೋ ಬ್ಯಾಟ್ಸ್​ಮನ್​​​ಗಳು​ ಹೆದರ್ತಾ ಇದ್ರು. ಆ ಮಟ್ಟಿಗಿತ್ತು ಹವಾ. ಡೇವಿಡ್​ ಜಾನ್ಸನ್​ ರಗಡ್​ ಆ್ಯಟಿಟ್ಯೂಡ್​ನೊಂದಿಗೆ ರನ್​ ಅಪ್​ ತಗೊಂಡ್ರೆ ಸಾಕು ಬ್ಯಾಟ್ಸ್​ಮನ್​ಗಳಿಗೆ ನಡುಕ ಹುಟ್ತಿತ್ತು. ಗಂಟೆಗೆ 150 ಕಿ.ಮೀ ವೇಗದಲ್ಲಿ ಬರ್ತಿದ್ದ ಎಸೆತಗಳನ್ನ ಎದುರಿಸಲು ಬ್ಯಾಟ್ಸ್​ಮನ್​ಗಳು ತಿಣುಕಾಡ್ತಿದ್ರು. ಬ್ಯಾಟ್ಸ್​ಮನ್​ ಕ್ಲೀನ್​ಬೋಲ್ಡ್​ ಆದ್ರೆ ಬೆಲ್ಸ್​ ಬೌಂಡರಿ ಲೈನ್​ನಲ್ಲಿ ಇರ್ತಾ ಇತ್ತು.

ಇದನ್ನೂ ಓದಿ:ಕುಡಿಯಲು ನೀರು ತುಂಬಿಸಿಕೊಳ್ತಿದ್ದಾಗ.. ಟ್ಯಾಂಕರ್​​ ಒಳಗೆ 25 ವರ್ಷದ ಮಹಿಳೆಯ ಶವ ಪತ್ತೆ..

ಕರ್ನಾಟಕ ತಂಡ 2 ಬಾರಿ ರಣಜಿ ಟ್ರೋಫಿ ಗೆದ್ದಾಗಲೂ ಡೇವಿಡ್​ ಜಾನ್ಸನ್ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ರು. ಈ ಪರ್ಫಾಮೆನ್ಸ್​ ಫಲವಾಗೇ ಟೀಮ್​ ಇಂಡಿಯಾಗೂ ಎಂಟ್ರಿ ಕೊಟ್ಟಿದ್ರು. ಆದ್ರೆ ಟೀಮ್​ ಇಂಡಿಯಾದ ಜರ್ನಿ ಕೇವಲ 2 ಟೆಸ್ಟ್​ಗಳಿಗೆ ಅಂತ್ಯವಾಯ್ತು. ಒಂದರ್ಥದಲ್ಲಿ ಇದಕ್ಕೆ ಪರೋಕ್ಷ ಕಾರಣ ಕನ್ನಡಿಗರೇ ಆಗಿದ್ದು ವಿಪಾರ್ಯಾಸ. ಆಗ ಅನಿಲ್​ ಕುಂಬ್ಳೆ, ಜಾವಗಲ್​ ಶ್ರೀನಾಥ್​, ವೆಂಕಟೇಶ್​ ಪ್ರಸಾದ್​, ರಾಹುಲ್​ ದ್ರಾವಿಡ್​, ಸುನಿಲ್​ ಜೋಷಿ, ದೊಡ್ಡ ಗಣೇಶ್ ಟೀಮ್​ ಇಂಡಿಯಾದಲ್ಲಿದ್ರು. ಭಾರತದಲ್ಲಿ ಕನ್ನಡಿಗರ ಪಾರುಪತ್ಯ ನಡೀತಾ ಇದ್ದಿದ್ದು ಡೇವಿಡ್​ ಜಾನ್ಸನ್​ ಸ್ಥಾನಕ್ಕೆ ಕುತ್ತು ತಂತು.

2 ಟೆಸ್ಟ್​ಗೆ ಟೀಮ್​ ಇಂಡಿಯಾ ಜರ್ನಿ ಅಂತ್ಯವಾಯ್ತು ಅಂತಾ ಡೇವಿಡ್ ಎದೆಗುಂದಲಿಲ್ಲ. ಮತ್ತೆ ಕರ್ನಾಟಕ ಪರ ಆಡಿದ್ರು. ನೀವು ನಂಬಲ್ಲ.. ಇವ್ರಿಗೆ ಕ್ರಿಕೆಟ್​ ಕ್ರೇಜ್​ ಎಷ್ಟಿತ್ತು ಅಂದ್ರೆ ನಿವೃತ್ತಿ ಆದ ಮೇಲೂ ಯುವ ಬೌಲರ್​​ಗಳಿಗೆ ಸೆಡ್ಡು ಹೊಡೆದು 2 ವರ್ಷ ಕೆಪಿಎಲ್​ ಟೂರ್ನಿ ಆಡಿದ್ರು. ಕ್ರಿಕೆಟ್​ ಮೇಲಿನ ಪ್ರೀತಿಯಿಂದ ಬಳಿಕ ಕೋಚ್​ ಆದ ಡೇವಿಡ್​ ಜಾನ್ಸನ್​, ಕ್ರಿಕೆಟ್​ ಅಕಾಡೆಮಿ ನಡೆಸ್ತಿದ್ರು. ಆ ಅಕಾಡೆಮಿಯಲ್ಲಿ ಬಡ ಮಕ್ಕಳಿಗೆ ಫ್ರಿ ಟ್ರೈನಿಂಗ್​ ನೀಡ್ತಾ ಇದ್ರು. ವುಮೆನ್ಸ್​ ಕ್ರಿಕೆಟರ್ಸ್​ಗೆ​ ಕಡಿಮೆ ಫೀಸ್​​ ತೆಗೆದುಕೊಂಡು ಕೋಚಿಂಗ್​ ಕೊಡ್ತಿದ್ರು.

ಇದನ್ನೂ ಓದಿ:ದರ್ಶನ್ ಕೇಸ್​​ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!

ಏನೇ ಹೇಳಿ ಸ್ಪೀಡ್​​​ ಸೆನ್ಷೆಷನ್​​​​ ಡೇವಿಡ್​​​​ ಜಾನ್ಸನ್​ ನಿಧನ ತುಂಬಲಾರದ ನಷ್ಟ. ಈ ಕ್ರಿಕೆಟ್ ಪ್ರೇಮಿ ಇನ್ನಷ್ಟು ವರ್ಷ ಬದುಕಿದ್ರೆ ಭಾರತೀಯ ಕ್ರಿಕೆಟ್​ಗೆ ಮತ್ತಷ್ಟು ಪ್ರತಿಭಾನ್ವಿತ ಕ್ರಿಕೆಟಿಗರ ಕೊಡುಗೆ ಸಿಗ್ತಿತ್ತು. ಸದ್ಯ ಡೇವಿಡ್​​ ಜಾನ್ಸನ್​​​​ ಅವರ ಇನ್ನಿಂಗ್ಸ್​​ ಅಂತ್ಯದೊಂದಿಗೆ ಆ ಆಶಾಭಾವವು ಕೊನೆಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿಗೆ ಶರಣಾದ ಕರ್ನಾಟಕ ತಂಡದ ಪೇಸ್ ಸೆನ್ಸೆಷನ್.. ಜಾನ್ಸನ್ ನೆನೆದು ಭಾವುಕರಾದ ಕ್ರಿಕೆಟ್ ದೇವರು

https://newsfirstlive.com/wp-content/uploads/2024/06/SACHIN-4.jpg

Load More