Advertisment

ಚೆನ್ನಾಗಿದ್ದೀರಾ ಬಾಸ್.. ಹೂ ಚಿನ್ನ; ದರ್ಶನ್ ಬಿಂದಾಸ್ ಲೈಫ್‌ಗೆ ಹೊಸ ಟ್ವಿಸ್ಟ್‌; ವಿಡಿಯೋ ಕಾಲ್ ಮಾಡಿದ್ಯಾರು?

author-image
admin
Updated On
ಚೆನ್ನಾಗಿದ್ದೀರಾ ಬಾಸ್.. ಹೂ ಚಿನ್ನ; ದರ್ಶನ್ ಬಿಂದಾಸ್ ಲೈಫ್‌ಗೆ ಹೊಸ ಟ್ವಿಸ್ಟ್‌; ವಿಡಿಯೋ ಕಾಲ್ ಮಾಡಿದ್ಯಾರು?
Advertisment
  • ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಯಾರ ಜೊತೆ ಮಾತಾಡಿದ್ರು?
  • ಜೈಲಿನ ಬ್ಯಾರಕ್‌ನಲ್ಲಿರುವ ದರ್ಶನ್‌ಗೆ ವಿಡಿಯೋ ಕಾಲ್ ಮಾಡಿದ್ಯಾರು?
  • ಫೋಟೋ ವೈರಲ್ ಆದ ಬೆನ್ನಲ್ಲೇ ವೈ-ಫೈ ವಿಡಿಯೋ ಕಾಲ್‌ ಗುಟ್ಟು ರಟ್ಟು!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಆರಾಮಾಗಿದ್ದಾರೆ. ದರ್ಶನ್ ಹೇಗಿದ್ದಾರೆ ಅನ್ನೋ ಫೋಟೋ ಇವತ್ತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೈಲಿನ ಫೋಟೋ ಸಂಚಲನ ಸೃಷ್ಟಿಸಿರುವ ಮಧ್ಯೆ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ.

Advertisment

publive-image

ಕೊಲೆ ಕೇಸ್‌ನಲ್ಲಿ A2 ಆಗಿರೋ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್‌ನಲ್ಲಿದ್ದಾರೆ. ಇದೇ ಬ್ಯಾರಕ್‌ನಲ್ಲಿರುವ ವ್ಯಕ್ತಿಗೆ ಅಭಿಮಾನಿಯೊಬ್ಬ ವಿಡಿಯೋ ಕಾಲ್ ಮಾಡಿದ್ದಾನೆ. ವಿಡಿಯೋ ಕಾಲ್‌ನಲ್ಲಿ ಚೆನ್ನಾಗಿದ್ದೀರಾ ಬಾಸ್ ಅಂತ ಅಭಿಮಾನಿ ಕೇಳಿದ್ದು, ಹೂ ಚಿನ್ನ ಅಂತ ದರ್ಶನ್ ಹೇಳಿದ್ದಾರೆ.

ಇದನ್ನೂ ಓದಿ: ವಿಗ್ ಲೆಸ್ ದರ್ಶನ.. ಜೈಲಿನಲ್ಲಿ A2 ಬಿಂದಾಸ್ ಲೈಫ್‌ನ ಅಸಲಿ ಮುಖ ಅನಾವರಣ; ಏನಿದರ ರಹಸ್ಯ? 

ಜೈಲಿನ ಬ್ಯಾರಕ್‌ನಲ್ಲಿರುವ ದರ್ಶನ್ ಅವರು ನೇರವಾಗಿ ಮೊಬೈಲ್ ಫೋನ್ ಬಳಕೆ ಆಡಿಲ್ಲ. ಆದರೆ ಜೊತೆಗಿರುವ ವ್ಯಕ್ತಿ ವೈಫೈ ಬಳಸಿ ಇನ್ಸಾಟಾಗ್ರಾಂನಲ್ಲಿ ವಿಡಿಯೋ ಕಾಲ್ ಮಾಡಿರೋದು ಅಚ್ಚರಿಗೆ ಕಾರಣವಾಗಿದೆ.

Advertisment

ದರ್ಶನ್ ಅವರು ಜೈಲಿನಲ್ಲಿರುವಾಗಲೇ ಸಿಗರೇಟ್ ಸೇದುತ್ತಾ ಟೀ ಕಪ್ ಹಿಡಿದ ಫೋಟೋ ಜೈಲಿನ ವ್ಯವಸ್ಥೆಯ ಬಗ್ಗೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ದರ್ಶನ್ ಅವರು ವಿಡಿಯೋ ಕಾಲ್ ಪ್ರತ್ಯಕ್ಷವಾಗಿರೋದು ಆ ಅನುಮಾನಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment