newsfirstkannada.com

ಅಬ್ಬಾ.. ದೇವರ ಉತ್ಸವದಲ್ಲಿ 2 ಆನೆಗಳ ಕಾದಾಟ.. ಆಮೇಲೇನಾಯ್ತು? ವಿಡಿಯೋ ನೋಡಿ!

Share :

Published March 23, 2024 at 1:44pm

  ಸುತ್ತಮುತ್ತ ನೂರಾರು ಭಕ್ತರು.. ವಿಜೃಂಭಣೆಯಿಂದ ಸಾಗುತ್ತಿದ್ದ ಮೆರವಣಿಗೆ

  ರಾತ್ರಿ 10.30ರ ಸಮಯದಲ್ಲಿ ಇದ್ದಕ್ಕಿದ್ದಂತೆ ಆನೆ ಮತ್ತೊಂದು ಆನೆಗೆ ದಾಳಿ

  ಒಂದು ಕಿಲೋ ಮೀಟರ್‌ವರೆಗೂ ನಡೆದ ಆನೆಗಳ ಭಯಾನಕ ಕಾದಾಟ

ತಿರುವನಂತಪುರಂ: ಸುತ್ತಮುತ್ತ ನೂರಾರು ಭಕ್ತರು.. ಆನೆಯ ಮೇಲೆ ಮಾವುತ.. ವಿಜೃಂಭಣೆಯಿಂದ ಸಾಗುತ್ತಿದ್ದ ಮೆರವಣಿಗೆ.. ದೇವರ ಉತ್ಸವದಲ್ಲಿ ಇದ್ದಕ್ಕಿದ್ದಂತೆ ಒಂದು ಆನೆ ಮತ್ತೊಂದು ಆನೆ ಮೇಲೆ ದಾಳಿ ಮಾಡಿ ಕಾದಾಟ ನಡೆಸಿರೋ ಘಟನೆ ಕೇರಳದಲ್ಲಿ ನಡೆದಿದೆ.

ಕಳೆದ ಮಾರ್ಚ್‌ 22ರ ರಾತ್ರಿ ಕೇರಳದ ತ್ರಿಶೂರ್‌ನ ಅರಟ್ಟುಪುಳದಲ್ಲಿ ಉಪಚಾರಮ್ ಚೋಲ್ಲಾಲ್ ಎಂಬ ದೇವರ ಉತ್ಸವ ನಡೆಯುತ್ತಿತ್ತು. ರಾತ್ರಿ 10.30ರ ಸಮಯದಲ್ಲಿ ಒಂದು ಆನೆ ಇದ್ದಕ್ಕಿದ್ದಂತೆ ಮತ್ತೊಂದು ಆನೆಗೆ ದಾಳಿ ಕಾದಾಟ ನಡೆಸಿದೆ. ಎರಡು ಆನೆಗಳ ಕಾದಾಟ ರೋಚಕ ಹಂತಕ್ಕೆ ಹೋಗಿದ್ದು, ಆನೆಗಳನ್ನ ನಿಯಂತ್ರಿಸಲು ಸಾಧ್ಯವಾಗಿಲ್ಲ. ಮಾವುತ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದು, ನೆರೆದಿದ್ದವರಲ್ಲೇ ದಿಕ್ಕಾಪಾಲಾಗಿ ಓಡಿದ್ದಾರೆ.

ದೇವರ ಉತ್ಸವದಲ್ಲಿ ಭಾಗಿಯಾದ ಆನೆ ಜನರ ಮಧ್ಯೆ ಗಾಬರಿಗೆ ಒಳಗಾಗಿದ್ದು ಈ ಘಟನೆ ನಡೆದಿದೆ ಎನ್ನಲಾಗಿದೆ. ಸುತ್ತಮುತ್ತ ಸೇರಿದ್ದ ಜನರು ಓಡಿ ಹೋಗುವಾಗ ಹಲವರಿಗೆ ಗಾಯಗಳಾಗಿದೆ. ಆನೆಯ ಭಯಾನಕ ದಾಳಿ ಹಾಗೂ ಕಾದಾಟದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಉತ್ಸವ ಕಣ್ತುಂಬಿಕೊಳ್ಳಲು ನೆರೆದಿದ್ದ ಜನರೆಲ್ಲ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಸಫಾರಿಗೆ ಹೊರಟವರ ಪಿಕ್ಚರ್ ಬಿಡಿಸಿದ ಆನೆ.. ಪಾರಾಗಿದ್ದೇ ದೊಡ್ಡದು -ವಿಡಿಯೋ

ಘಟನಾ ಸ್ಥಳದಿಂದ ಸುಮಾರು ಒಂದು ಕಿಲೋ ಮೀಟರ್‌ವರೆಗೂ ಹೀಗೆ ಆನೆಗಳ ಕಾದಾಟ ನಡೆದಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ. ಬಹಳ ಕಷ್ಟಪಟ್ಟು ಆನೆಯನ್ನ ನಿಯಂತ್ರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ದೇವರ ಉತ್ಸವದಲ್ಲಿ 2 ಆನೆಗಳ ಕಾದಾಟ.. ಆಮೇಲೇನಾಯ್ತು? ವಿಡಿಯೋ ನೋಡಿ!

https://newsfirstlive.com/wp-content/uploads/2024/03/Kerala-Elephant-Attack-1.jpg

Load More