ತಂದೂರಿ ರೋಟಿ ಮೇಲೆ ಉಗಿದುಗಿದು ಬೇಯಿಸಿದ ಬಾಣಸಿಗ
ಯುಪಿಯಲ್ಲಿ ನಡೆದ ಘಟನೆ ವಿರುದ್ಧ ಆಕ್ರೋಶ ವ್ಯಕ್ತಿಪಡಿಸಿದ ಜನ
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್,ವ್ಯಕ್ತಿ ಅರೆಸ್ಟ್
ಸೋಷಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಈ ಫಾಸ್ಟ್ಫುಡ್ ಅಂಗಡಿಗಳುಹೋಟೆಲ್, ತಳ್ಳೊಗಾಡಿಯಲ್ಲಿ ಸಿದ್ಧಗೊಳ್ಳುವ ಆಹಾರದ ಯಡವಟ್ಟುಗಳು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಜಾಗವನ್ನು ಪಡೆದುಕೊಳ್ಳುತ್ತವೆ. ಅದರಲ್ಲೂ ಆಹಾರ ಸಿದ್ಧಗೊಳಿಸುವ ವೇಳೆ ಅವುಗಳ ಮೇಲೆ ಉಗಿಯುವ ವಿಡಿಯೋಗಳು ಬೇರೆಯದ್ದೇ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತವೆ. ಈಗ ಉತ್ತರಪ್ರದೇಶದಲ್ಲಿ ನಡೆದ ಇಂತಹುದೇ ಒಂದು ವಿಡಿಯೋ ಈಗ ವೈರಲ್ ಆಗಿದ್ದು. ಬಾಣಸಿಗನ ಮೇಲೆ ನೆಟ್ಟಿಗರು ಕೆಂಡ ಕಾರಿದ್ದಾರೆ.
ಇದನ್ನೂ ಓದಿ: BREAKING: ಬೆಂಗಳೂರಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ; ಐದು ಬಾಂಬ್ ಇಟ್ಟಿದ್ದ ಪ್ರಳಯಾಂತಕ
नरेश चिकन कार्नर में थूक का रोटी बनाई जा रही है। मामला बागपत के अग्रवाल मार्किट का बताया जा रहा है pic.twitter.com/uwvLSUaCOX
— Gagandeep Singh (@GagandeepNews) September 26, 2024
ಉತ್ತಪ್ರದೇಶದ ಭಗ್ಪತ್ ಜಿಲ್ಲೆಯಲ್ಲಿ ನರೇಶ್ ಚಿಕನ್ ಕಾರ್ನರ್ ಎನ್ನುವ ಹೋಟೆಲ್ನ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಜಿಲ್ಲೆಯ ಮುಖ್ಯರಸ್ತೆಯಲ್ಲಿಯೇ ಇರುವ ಈ ನರೇಶ್ ಚಿಕನ್ ಕಾರ್ನರ್ನಲ್ಲಿ ರೊಟ್ಟಿಗಳು ಸಿದ್ಧಗೊಳ್ಳುತ್ತವೆ. ಅಂಗಡಿಯ ಹೊರಗಡೆ ಜನರಿಗೆ ಕಾಣುವ ರೀತಿಯಲ್ಲಿಯೇ ಇಲ್ಲಿ ರೊಟ್ಟಿಗಳು ರೆಡಿಯಾಗಿ ಗ್ರಾಹಕರಿಗೆ ನೀಡಲಾಗುತ್ತದೆ. ಆದ್ರೆ ರೊಟ್ಟಿ ಮಾಡುವ ಶಹ್ಜಾದ್ ಎಂಬ ವ್ಯಕ್ತಿ , ರೊಟ್ಟಿ ತಯಾರಿಸುವ ವೇಳೆ ಅದನ್ನು ತವಾಗೆ ಹಾಕುವ ಮೊದಲು ರೊಟ್ಟಿ ಮೇಲೆ ಉಗಿದು ಬೇಯಿಸಲು ಹಾಕುತ್ತಿದ್ದ ವಿಡಿಯೋವೊಂದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಲಿಪ್ಸ್ಟಿಕ್ ಹಚ್ಚಿದ್ದಕ್ಕೆ ಮಹಿಳಾ ದಫೇದಾರ್ ವರ್ಗಾವಣೆ!
ವಿಡಿಯೋದಲ್ಲಿ ಆ ವ್ಯಕ್ತಿ ರೊಟ್ಟಿ ಮಾಡುತ್ತಿರುವ ವಿಡಿಯೋದಲ್ಲಿ ಉಗಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕಾರ್ನಲ್ಲಿ ಕುಳಿತ ಒಬ್ಬ ವ್ಯಕ್ತಿ ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದು ಈಗ ವೈರಲ್ ಆಗಿದ್ದು ಶೆಹ್ಜಾದ್ ಮೇಲೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಪೊಲೀಸ್ ಠಾಣೆಯ ಮೆಟ್ಟಿಲನ್ನು ಕೂಡ ಏರಿದ್ದು. ಪೊಲೀಸರು ಶಹ್ಜಾದ್ನನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ