Advertisment

ಭೀಕರ ಚಂಡ ಮಾರುತ; ಹಠಾತ್ ಪ್ರವಾಹದಿಂದ 226 ಜನ ಸಾವು.. 134ಕ್ಕೂ ಹೆಚ್ಚು ಮಂದಿ ಕಣ್ಮರೆ

author-image
Bheemappa
Updated On
ಭೀಕರ ಚಂಡ ಮಾರುತ; ಹಠಾತ್ ಪ್ರವಾಹದಿಂದ 226 ಜನ ಸಾವು.. 134ಕ್ಕೂ ಹೆಚ್ಚು ಮಂದಿ ಕಣ್ಮರೆ
Advertisment
  • ಮಳೆ, ಗಾಳಿಯಿಂದ 1,40,000ಕ್ಕೂ ಹೆಚ್ಚು ಮನೆಗಳು ನಾಶ
  • ಅತ್ಯಂತ ಶಕ್ತಿಶಾಲಿ ಚಂಡಮಾರುತಕ್ಕೆ ನಲುಗಿದ ಇಡೀ ದೇಶ
  • ಭೂಕುಸಿತದಿಂದ 13 ಜನರು ಸಾವು, ಹಲವು ಮಂದಿ ನಾಪತ್ತೆ

ಮನುಷ್ಯ ಹೋಗಿ ಪ್ರಕೃತಿ ಮೇಲೆ ಬಿದ್ರೂ, ಪ್ರಕೃತಿ ಬಂದು ಮನುಷ್ಯನ ಮೇಲೆ ಬಿದ್ರೂ ಎಫೆಕ್ಟ್​ ಏನಿದ್ರು ಮನು ಕುಲಕ್ಕೆ. ಶಾಂತ ಗಾಳಿಯನ್ನ ಸೇವಿಸಿ ಬದುಕ್ತಿರುವ ವಿಯೇಟ್ನಾಂನಲ್ಲಿ ಚಂಡಮಾರುತ ಚಂಡಿ ಅವತಾರ ತಾಳಿದೆ. ಮಳೆ, ಗಾಳಿ ಅಬ್ಬರಕ್ಕೆ ಮರಣ ಶಾಸನಗಳ ಪುಟವೇ ಬರೆದಿದೆ.

Advertisment

ಇದನ್ನೂ ಓದಿ: ವಿನೇಶ್ ಫೋಗಟ್​ಗೆ ಗೋಲ್ಡ್​ ಮೆಡಲ್​.. ಸಾವಿರ ಪದಕಗಳಿಗೆ ಇದೊಂದೇ ಸಮವೆಂದ ಕುಸ್ತಿಪಟು, ಭಾವುಕ

publive-image

ಗಂಟೆಗೆ 149 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು 1,40,000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಚಂಡಮಾರುತ ಉತ್ತರ ವಿಯೆಟ್ನಾಂವನ್ನ ಇನ್ನಿಲ್ಲದಂತೆ ಕಾಡುತ್ತಿದೆ. ಇದು ಇಡೀ ವಿಯೆಟ್ನಾಂನ್ನೇ ನುಂಗಿ ನೀರು ಕುಡಿಸ್ತಿರೋ ಈ ವರ್ಷ ಏಷ್ಯಾದ ಅತ್ಯಂತ ಶಕ್ತಿಶಾಲಿ ಚಂಡಮಾರುತ ಎಂದು ಹೇಳಲಾಗುತ್ತಿದೆ. ಉತ್ತರ ವಿಯೆಟ್ನಾಂ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸುತ್ತಿದೆ. 226 ಜನರ ಪ್ರಾಣಪಕ್ಷಿಯೇ ಹಾರಿ ಹೋಗಿದೆ. 134ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ.

ಇದ್ದಕ್ಕಿದ್ದಂತೆ ಕುಸಿದ ಭೂಮಿ.. 

ಇದ್ದಕ್ಕಿಂತ ನಿಂತ ನೆಲವೇ ಕುಸಿದು ಹೋಗಿದೆ. ಭೂಕುಸಿತದ ಬಳಿಕ ಸೇನಾ ಸಿಬ್ಬಂದಿ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದು ರಕ್ಷಣೆಗೆ ಹರಸಾಹಸ ಪಡುತ್ತಿದೆ. ವಿಯೇಟ್ನಾಂ ರಾಜಧಾನಿ ಹನೋಯಿ ನಗರದಲ್ಲಿ ಎಲ್ಲಿ ನೋಡಿದರು ಮಳೆ ನೀರು. ಅಬ್ಬರಿಸಿದ ಮಳೆಯಿಂದಾಗಿ ಅಕ್ಷರಶಃ ನರಕ ಸದೃಶ್ಯವೇ ಸೃಷ್ಟಿಸ್ತಿದೆ. ಬೀದಿಗಳು ನದಿಗಳಾಗಿ ರೂಪಾಂತರಗೊಂಡಿವೆ. ಅದೇ ರಸ್ತೆ ಮೇಲೆ ದೋಣಿಗಳ ಮೂಲಕ ಸಂಚರಿಸುವ ಸ್ಥಿತಿ ನಿರ್ಮಾಣ ಆಗಿದೆ.

Advertisment

ತಾಯಿ ಶ್ವಾನದ ಜೊತೆ ಮರಿಗಳ ರಕ್ಷಣೆ 

ಈ ದೃಶ್ಯ ಎಂಥವರನ್ನ ಮೂಕ ವಿಸ್ಮಿತಗೊಳಿಸುತ್ತೆ. ಪ್ರವಾಹದ ನೀರಲ್ಲಿ ಸಿಲುಕಿದ್ದ ತಾಯಿ ಶ್ವಾನದ ಜೊತೆ ಮರಿಗಳು ಒದ್ದಾಡುತ್ತಿದ್ದವು. ಈ ವೇಳೆ ಜನ ಟಬ್​ ಒಂದರಲ್ಲಿ ಅವುಗಳನ್ನು ಹಾಕಿ ರಕ್ಷಣೆ ಮಾಡಿದ್ದಾರೆ. ಹನೋಯಿ ಪಟ್ಟಣ ತಲ್ಲಣಿಸಿದೆ. ಪಟ್ಟಣದ ಮಗ್ಗಲಲ್ಲಿ ಶಾಂತವಾಗಿ ಹರಿಯುತ್ತಿದ್ದ ರೆಡ್​ ರಿವರ್​, 20 ವರ್ಷಗಳಲ್ಲಿ ಹೆಚ್ಚಿಸ ನೀರಿನ ಮಟ್ಟ ಆಹುತಿಗೆ ನಿಲ್ಲಿಸಿದೆ. ಸಾವಿರಾರು ಜನರನ್ನ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಗಣಪತಿಗೆ 20 ಕೆ.ಜಿ ಬಂಗಾರದ ಕಿರೀಟ ದಾನ.. ಅನಂತ್ ಅಂಬಾನಿ ಖರ್ಚು ಮಾಡಿದ್ದು ಎಷ್ಟು ಕೋಟಿ ರೂಪಾಯಿ? 

publive-image

ಭೂಕುಸಿತದಲ್ಲಿ 13 ಜನರ ದುರ್ಮರಣ

ಲಾವೊ ಕೈಯಲ್ಲಿ ಭೂಕುಸಿತಕ್ಕೆ ತುತ್ತಾಗಿ 13 ಜನರು ಸಾವನ್ನಪ್ಪಿದ್ದಾರೆ. ಭೂಕುಸಿತದ ಮಣ್ಣಲ್ಲಿ ಕೊಚ್ಚಿ ಹೋಗ್ತಿದ್ದ ಓರ್ವ ವ್ಯಕ್ತಿಯನ್ನ ರಕ್ಷಿಸಲಾಗಿದೆ. ಆಕಾಶದತ್ತ ನೋಡಿ ಕರುಣೆ ತೋರು ಅಂತ ವಿಯೆಟ್ನಾಂನ ಜನ ದೇವರಿಗೆ ಮೊರೆ ಇಡ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment