/newsfirstlive-kannada/media/post_attachments/wp-content/uploads/2024/07/DARSHAN-2.jpg)
ರೇಣುಕಾಸ್ವಾಮಿ ಕ್ರೂರ ಕೊಲೆ ಕೇಸ್ನಲ್ಲಿ ದರ್ಶನ್ ಸೇರಿ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ನಟ ದರ್ಶನ್ ಜೈಲಿಗೆ ಸೇರುತ್ತಿದ್ದಂತೆ ಸ್ಯಾಂಡಲ್ವುಡ್ ನಟ ನಟಿಯರು, ಕುಟುಂಬಸ್ಥರು, ಆತ್ಮೀಯರು ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಡುತ್ತಿದ್ದಾರೆ. ಈ ಬಗ್ಗೆ ಹಲವಾರು ಮಂದಿ ಭಿನ್ನ, ವಿಭಿನ್ನವಾದ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ವದಂತಿ ಬೆನ್ನಲ್ಲೇ ಪಾಂಡ್ಯ ಹೆಸರಿನ ಜೊತೆ ತಳುಕು ಹಾಕಿಕೊಂಡ ಸುಂದರಿ..!
ನಟ ದರ್ಶನ್ ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿರುವ ವಿಜಯ್ ರಾಘವೇಂದ್ರ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿ ಆಗಿರೋದು ನೋವು ತರಿಸಿದೆ. ದರ್ಶನ್ ನಮ್ಮ ಕುಟುಂಬದವ್ರು. ನಮ್ಮ ಸೀನಿಯರ್. ದಯವಿಟ್ಟು ಈ ವಿಚಾರದಿಂದ ಎಲ್ಲರೂ ಹೊರಗೆ ಬರಬೇಕು. ಇದನ್ನು ನಾನು ಬೆಳವಣಿಗೆ ಅಂತಾ ಕರಿಯೋಕೆ ಇಷ್ಟ ಪಡಲ್ಲ. ಎಲ್ಲಿ ನೋಡಿದ್ರೂ ಬರೀ ರೇಣುಕಾಸ್ವಾಮಿ ಪ್ರಕರಣ ಸುದ್ದಿಯೇ ಓಡಾಡ್ತಿದೆ. ಡೆವಿಲ್ ಸಿನಿಮಾದ ನಿಂತಿರೋದು ಮಿಲನಾ ಪ್ರಕಾಶ್ ಅವರಿಗೂ ನೋವು ತಂದಿದೆ ಎಂದಿದ್ದಾರೆ.
ಏನಿದು ಪ್ರಕರಣ..?
ದರ್ಶನ್ ಆಪ್ತೆ ಪವಿತ್ರಾಗೆ ಇನ್‌ಸ್ಟಾಗ್ರಾಂ ಮೂಲಕ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಪದೇ ಪದೇ ಅಶ್ಲೀಲ ಸಂದೇಶಗಳನ್ನ ಕಳಿಸುತ್ತಾ ಇದ್ದ. ಈ ವಿಚಾರ ನಟ ದರ್ಶನ್ ಅಂಡ್ ಗ್ಯಾಂಗ್ಗೆ ಗೊತ್ತಾಗುತ್ತಿದ್ದಂತೆ ಪ್ಲಾನ್ ಮಾಡಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆ ತಂದು ಆತನನ್ನು ಕ್ರೂರವಾಗಿ ಕೊಲೆ ಮಾಡಿದ್ದರು. ರೇಣುಕಾಸ್ವಾಮಿಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದರು. ಈ ಕೊಲೆ ಹಿಂದೆ ಯಾರೆಲ್ಲಾ ಭಾಗಿಯಾಗಿದ್ದರು ಎಂಬುವುದರ ಬಗ್ಗೆ ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ