newsfirstkannada.com

25 ನಿಮಿಷ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತಾಡಿದ ದರ್ಶನ್; ಧೈರ್ಯ ಕಳೆದುಕೊಂಡ ದಾಸನಿಗೆ ಹೇಳಿದ್ದೇನು?

Share :

Published September 5, 2024 at 6:23pm

    ದರ್ಶನ್ ಬ್ಯಾಗ್​​ಗಳಲ್ಲಿ ಏನೇನು ತೆಗೆದುಕೊಂಡು ಹೋದರು?

    ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ ದರ್ಶನ್ ಸಹೋದರ ದಿನಕರ್

    ಚಾರ್ಜ್​​ಶೀಟ್ ಸಲ್ಲಿಕೆ ಬಳಿಕ ದರ್ಶನ್​ಗಾಗಿ ಬಂದ ಪತ್ನಿ ವಿಜಯಲಕ್ಷ್ಮಿ

ಬಳ್ಳಾರಿ: ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ ಹಾಗೂ ಇನ್ನೊಬ್ಬ ಸಂಬಂಧಿ ಸೇರಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಭೇಟಿಯಾಗಿದ್ದಾರೆ. 25 ನಿಮಿಷ ದರ್ಶನ್ ಜೊತೆ ಪತ್ನಿ ಹಾಗೂ ಸಹೋದರ ಮಾತನಾಡಿದ್ದು ಈ ವೇಳೆ ಜಾಮೀನು ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರತೀಕಾರ ತೀರಿಸಿಕೊಳ್ಳಲು ರೀತಿ ನೀತಿ ಬೇರೆ ಇವೆ.. ದರ್ಶನ್​ ಬಗ್ಗೆ ಉಮಾಪತಿಗೌಡ ಖಡಕ್ ಮಾತು; ಏನಂದ್ರು?

ಬಳ್ಳಾರಿ ಜೈಲಿನಲ್ಲಿರುವ ದರ್ಶನ್​ ಅವರನ್ನ ಸಂಜೆ 4:30ಕ್ಕೆ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ ಹಾಗೂ ಸಂಬಂಧಿ ಭೇಟಿ ಮಾಡಿದರು. ಜೈಲಿನ ಒಳಗಿದ್ದ ದರ್ಶನ್ ಟೆನ್ಷನ್​​ನಲ್ಲಿಯೇ ತನ್ನವರನ್ನ ಭೇಟಿಯಾಗಲು ಬಂದರು. ಸಂಜೆ 4.30 ರಿಂದ 5.30 ವರೆಗೆ ದರ್ಶನ್ ಭೇಟಿಗೆ ಅಧಿಕಾರಿಗಳು ಅವಕಾಶ ನೀಡಿದ್ದರು. ಹೀಗಾಗಿ ಸರಿಯಾಗಿ 4:30ಕ್ಕೆ ಜೈಲಿಗೆ ಪತ್ನಿ, ಸಹೋದರ ಕಾರಿನಲ್ಲಿ ಆಗಮಿಸಿದ್ದರು.

ಇದನ್ನೂ ಓದಿ: ದರ್ಶನ್​​ ಭೇಟಿ ಮಾಡಲು ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ.. ಕೈಯಲ್ಲಿ ಇದ್ದಿದ್ದು ಏನು?

ಸಂದರ್ಶಕರ ಕೊಠಡಿಯಲ್ಲಿ 25 ನಿಮಿಷ ದರ್ಶನ್ ಜೊತೆ ಮಾತನಾಡಿರುವ ಕುಟುಂಬಸ್ಥರು ಜಾರ್ಜ್‌ಶೀಟ್‌ಗೆ ಮಾಹಿತಿ ನೀಡಿದ್ದಾರೆ. ವಿಜಯಲಕ್ಷ್ಮಿ & ದಿನಕರ್ ತೂಗುದೀಪ ಅವರು 3991 ಪ್ರಕರಣದಲ್ಲಿ ಪುಟಗಳ ಜಾರ್ಜ್‌ಶೀಟ್ ಸಲ್ಲಿಕೆ ಆಗಿದೆ. 231 ಸಾಕ್ಷಿಗಳನ್ನ ಕಲೆ ಹಾಕಿದ್ದಾರೆ. ಎಲ್ಲಾ ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಿದ್ದಾರೆ. ರಾಜ್ಯದಲ್ಲಿ ಇದೇ ಪ್ರಕರಣದ ಬಗ್ಗೆ ಚರ್ಚೆ ಇದೆ ಅನ್ನೋ ಮಾಹಿತಿ ನೀಡಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣನೆ ಮಾಡಲಾಗಿದೆ. ಇಷ್ಟರ ಮಧ್ಯೆಯೂ ಜಾಮೀನಿಗಾಗಿ ಹೊಡೆದಾಡಬೇಕು. ನಮ್ಮ ಲಾಯರ್ ಸ್ಟ್ರಾಂಗ್ ಆಗಿ ವಕಾಲತ್ತು ವಹಿಸಲಿದ್ದಾರೆ‌. ನಿಮಗೆ ಜಾಮೀನು ಸಿಗುವ ಭರವಸೆ ಇದೆ ಎಂದು ದರ್ಶನ್‌ಗೆ ವಿಜಯಲಕ್ಷ್ಮಿ & ದಿನಕರ್ ಧೈರ್ಯ ತುಂಬಿದ್ದಾರೆ.

ದರ್ಶನ್​ರನ್ನ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ ಒಟ್ಟು 20 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಈ ವೇಳೆ ಜಾಮೀನು ಅರ್ಜಿಗೆ ದರ್ಶನ್ ಕಡೆಯಿಂದ ಸಹಿ‌ ಹಾಕಿಸಿಕೊಂಡಿದ್ದಾರೆ. ಮಾತುಕತೆ ಮುಗಿದ ಬಳಿಕ ಸಹೋದರ ತಂದಿದ್ದ ಬಟ್ಟೆಗಳ ಬ್ಯಾಗ್ ಜೊತೆ ಬೇಕರಿ ಫುಡ್ ಬೆಡ್, ಬಿಸ್ಕತ್ ಇರುವ ಇನ್ನೊಂದು ಬ್ಯಾಗ್ ಅನ್ನು ದರ್ಶನ್ ಅವರು ತೆಗೆದುಕೊಂಡು ಜೈಲಿನ ಒಳಗೆ ಹೋಗಿದ್ದಾರೆ. ಇನ್ನು ದರ್ಶನ್ ಅವರು ಬರುವಾಗ ಹಾಗೂ ಹೋಗುವಾಗ ಜೈಲಾಧಿಕಾರಿಗಳು ಭದ್ರತೆಯನ್ನು ಒದಗಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

25 ನಿಮಿಷ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತಾಡಿದ ದರ್ಶನ್; ಧೈರ್ಯ ಕಳೆದುಕೊಂಡ ದಾಸನಿಗೆ ಹೇಳಿದ್ದೇನು?

https://newsfirstlive.com/wp-content/uploads/2024/09/DARSHAN_BROTHER.jpg

Load More