/newsfirstlive-kannada/media/post_attachments/wp-content/uploads/2024/08/Vikas_Wikkipedia.jpg)
ಸದ್ಯ ಇಡೀ ದೇಶಾದ್ಯಂತ ಕೋಲ್ಕತ್ತಾ ವೈದ್ಯೆ ಸಾವಿನ ಕೇಸ್ನದ್ದೇ ಸದ್ದು. ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದವರಿಗೆ ಕೂಡಲೇ ಶಿಕ್ಷೆ ಆಗಬೇಕು ಎಂದು ದೇಶದ ವಿವಿಧ ಮೂಲೆಗಳಲ್ಲಿ ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇದರ ಮಧ್ಯೆ 'ನಾನು ನಂದಿನಿ' ಖ್ಯಾತಿಯ ವಿಕಾಸ್ ವಿಕ್ಕಿಪೀಡಿಯ ಅವರ ಹೊಸ ರೀಲ್ಸ್ ಒಂದು ವೈರಲ್ ಆಗಿದೆ.
ಮಹಿಳಾ ವಿರೋಧಿಗಳಿಗೆ ಬುದ್ಧಿ ಹೇಳಿದ ವಿಕಾಸ್..!
ಗಂಡು ಮಕ್ಕಳು ಅತ್ಯಾಚಾರ ಎಸಗಲು ಹೆಣ್ಣುಮಕ್ಕಳು ಹಾಕೋ ಬಟ್ಟೆಯೇ ಕಾರಣ. ಹೆಣ್ಣುಮಕ್ಕಳು ಯಾಕೆ 6 ಗಂಟೆ ಒಳಗೆ ಮನೆ ಸೇರಲ್ಲ. 6 ಗಂಟೆ ಮೇಲೆ ಹೆಣ್ಣುಮಕ್ಕಳು ಮನೆ ಸೇರಿದ್ರೆ ಈ ರೀತಿಯ ಘಟನೆಗಳು ನಡೆಯಲ್ಲ ಎಂದು ಎಷ್ಟೋ ಮಂದಿ ಗಂಡಸರು ಮಾತಾಡುತ್ತಾರೆ. ಇಂಥಾ ಗಂಡು ಮಕ್ಕಳಿಗೆ ವಿಕಾಸ್ ತನ್ನ ರೀಲ್ಸ್ ಮೂಲಕ ಬುದ್ಧಿ ಹೇಳಿದ್ದಾರೆ.
ವಿಕಾಸ್ ಹೊಸ ರೀಲ್ಸ್ನಲ್ಲೇನಿದೆ?
ಮಗ ಹೆಣ್ಣುಮಕ್ಕಳು 6 ಗಂಟೆ ಒಳಗೆ ಮನೆ ಸೇರಬೇಕು. ಇಲ್ಲದೆ ಹೋದರೆ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಲೈವ್ ಟಿವಿಗೆ ಬೈಟ್ ನೀಡಿರುತ್ತಾನೆ. ಇದಕ್ಕೆ ತಾಯಿ ತನ್ನ ಗಂಡನಿಗೆ ಕೂಡಲೇ ಮಗನನ್ನು 6 ಗಂಟೆ ಒಳಗೆ ಮನೆಗೆ ಬರುವಂತೆ ಒತ್ತಾಯ ಮಾಡುತ್ತಾಳೆ. ತಂದೆ ಕೂಡಲೇ ಫೋನ್ ಮನೆಗೆ ಬೇಗ ಬಾ ಎಂದು ಕರೆಯುತ್ತಾನೆ. ಮಗ ತಂದೆ ಫೋನ್ ಮಾಡಿದ ಕೂಡಲೇ ಮನೆಗೆ ಬರುತ್ತಾನೆ. ಯಾಕೆ ನನ್ನನ್ನು 6 ಗಂಟೆ ಒಳಗೆ ಮನೆಗೆ ಕರೆಸಿದ್ರಿ ಅನ್ನೋ ಪ್ರಶ್ನೆ ಕೂಡ ಕೇಳುತ್ತಾನೆ. ಇದಕ್ಕೆ ನೀನು 6 ಗಂಟೆ ಒಳಗೆ ಮನೆಗೆ ಬಂದ್ರೆ ಹೆಣ್ಣುಮಕ್ಕಳು ಸೇಫಾಗಿ ಹೊರಗೆ ಓಡಾಡಬಹುದು ಅಲ್ಲಪ್ಪ? ಎಂದು ತಾಯಿ ಬೈಟ್ ನೀಡಿದ ಮಗನಿಗೆ ಹೇಳುತ್ತಾರೆ. ಈ ವಿಡಿಯೋ ಹೆಣ್ಣುಮಕ್ಕಳ ಬಗ್ಗೆ ಮಾತಾಡೋ ಗಂಡಸರಿಗೆ ಬುದ್ಧಿ ಹೇಳುವಂತಿದ್ದು, ಭಾರೀ ವೈರಲ್ ಆಗಿದೆ. ಎಲ್ಲರೂ 'ನಾನು ನಂದಿನಿ' ಖ್ಯಾತಿಯ ವಿಕಾಸ್ ವಿಕ್ಕಿಪೀಡಿಯ ಅವರ ಹೊಸ ರೀಲ್ಸ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Henmakl safe aagi irbekandre onde solution :) pic.twitter.com/geU7kNOemJ
— Vicky Pedia (@Vickypedia_007)
Henmakl safe aagi irbekandre onde solution :) pic.twitter.com/geU7kNOemJ
— Vicky Pedia (@Vickypedia_007) August 22, 2024
">August 22, 2024
ಈ ಹಿಂದೆಯೇ 'ನಾನು ನಂದಿನಿ ಬೆಂಗಳೂರಿಗ್ ಬಂದೀನಿ' ಎಂಬ ರೀಲ್ಸ್ ಸಖತ್ ಸೌಂಡ್ ಮಾಡಿತ್ತು. 'ನಾನು ನಂದಿನಿ ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ ಐಟಿ ಕೆಲಸ ಮಾಡ್ತೀನಿ. ಊಟ ಸರಿ ಇಲ್ಲ ಅಂದ್ರೂನೂ ತಿಂತೀನಿ. ಬಂದಿದ್ ದುಡ್ ಎಲ್ಲಾ ಮನೇಗ್ ಕಳಸ್ತೀನಿ. ಬಾರೇ ನಂದಿನಿ ಗೋಬಿ ತಿನ್ನಸ್ತೀನಿ. ಬಾರೇ ನಂದಿನಿ ಬೆಂಗಳೂರ್ ತೋರಸ್ತೀನಿ. ಬಾರೆ ನಂದಿನಿ ಪೇಢಾ ತಿನ್ನಸ್ತೀನಿ. ಬಾರೇ ನಂದಿನಿ ಪಿಚ್ಚರ್ ತೋರಸ್ತೀನಿ ಎನ್ನುವ ವಿಕಿ ಪೀಡಿಯಾ ವಿಕಾಸ್ ಅವರ ರೀಲ್ಸ್ ಗೆ ಜನಾ ಫಿದಾ ಆಗಿದ್ದರು.
ಇದನ್ನೂ ಓದಿ:ಟೀಮ್ ಇಂಡಿಯಾದ ಯುವ ಬ್ಯಾಟರ್ಗೆ ಸುವರ್ಣಾವಕಾಶ! ಸ್ಟಾರ್ ಆಟಗಾರನಿಗೆ ಕೊಕ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ