newsfirstkannada.com

ಟೀಮ್​ ಇಂಡಿಯಾದ ಯುವ ಬ್ಯಾಟರ್​​ಗೆ ಸುವರ್ಣಾವಕಾಶ! ಸ್ಟಾರ್​ ಆಟಗಾರನಿಗೆ ಕೊಕ್​​

Share :

Published August 22, 2024 at 2:04pm

    ಟೀಮ್ ಇಂಡಿಯಾದ ಯುವ ಸ್ಪೋಟಕ ಬ್ಯಾಟರ್​ಗೆ ಸುವರ್ಣಾವಕಾಶ!

    2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಸಿಗಲಿದೆ ಚಾನ್ಸ್​​

    ಭವಿಷ್ಯ ನುಡಿದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​ ದಿನೇಶ್​ ಕಾರ್ತಿಕ್​​​

ಟೀಮ್ ಇಂಡಿಯಾದ ಯುವ ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್. ಇವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಆರಂಭ ಮಾಡಿದ್ದಾರೆ. ಟಿ20 ಮತ್ತು ಟೆಸ್ಟ್ ಮಾದರಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಂದು ವೇಳೆ ಹೀಗೆ ಗಿಲ್​ ಕಳಪೆ ಫಾರ್ಮ್​ ಮುಂದುವರಿದರೆ, ಜೈಸ್ವಾಲ್​ ಅವರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಅವಕಾಶ ಸಿಗಬಹುದು ಎಂದು ಟೀಮ್​ ಇಂಡಿಯಾದ ಮಾಜಿ ವಿಕೆಟ್​ ಕೀಪರ್​ ಬ್ಯಾಟರ್​ ದಿನೇಶ್​ ಕಾರ್ತಿಕ್​ ಹೇಳಿದ್ದಾರೆ.

ಬರೋಬ್ಬರಿ 7 ವರ್ಷಗಳ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆ ಮಾಡುತ್ತಿದೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯಲಿರೋ ಈ ಟೂರ್ನಿಗೆ ಕೇವಲ 6 ತಿಂಗಳು ಮಾತ್ರ ಬಾಕಿ ಇದೆ. ಐಸಿಸಿ ಮೆಗಾ ಟೂರ್ನಿಗೆ ಈಗಿನಿಂದಲೇ ಟೀಮ್​ ಇಂಡಿಯಾ ಭಾರೀ ತಯಾರಿ ನಡೆಸಿಕೊಂಡಿದೆ. ಇದರ ಬಗ್ಗೆ ಭಾರತದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮಾತಾಡಿದ್ದಾರೆ.

ಜೈಸ್ವಾಲ್​ಗೆ ಅವಕಾಶ ಸಿಗಲಿದೆ ಎಂದ ಡಿಕೆ

ಈ ಸಂಬಂಧ ಮಾತಾಡಿದ ದಿನೇಶ್​ ಕಾರ್ತಿಕ್​​​, ರೋಹಿತ್ ಜೊತೆಯಲ್ಲಿ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಬಹುದು. ಜೈಸ್ವಾಲ್‌ಗೆ ಬ್ಯಾಕಪ್ ಓಪನರ್ ಆಗಲು ಉತ್ತಮ ಅವಕಾಶವಿದೆ. ಒಂದು ವೇಳೆ ಶುಭ್ಮನ್​​ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡದಿದ್ರೆ ಜೈಸ್ವಾಲ್​ಗೆ ಅವಕಾಶ ನೀಡಲಾಗುವುದು ಎಂದರು.

ಗಿಲ್ ಕಳಪೆ ಪ್ರದರ್ಶನ

ಕಳೆದ ವರ್ಷದ ಆರಂಭದಿಂದ ಸುಮಾರು 47 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಜತೆ ಶುಭ್ಮನ್​ ಗಿಲ್​ ಓಪನಿಂಗ್​ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಗಿಲ್​​ ಫಾರ್ಮ್​ ಕಳೆದುಕೊಂಡಿದ್ದಾರೆ. ಅತ್ತ ಟೆಸ್ಟ್ ಮತ್ತು ಟಿ20 ಕ್ರಿಕೆಟ್​ನಲ್ಲೂ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇತ್ತ ಫಾರ್ಮ್‌ ಕಂಡು ಕೊಳ್ಳಲು ಗಿಲ್​ ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಟೀಮ್​​ ಇಂಡಿಯಾ ವೈಸ್​ ಕ್ಯಾಪ್ಟನ್ ಶುಭ್ಮನ್​​​​​​ ​ಗಿಲ್​ಗೆ ಮಾಸ್ಟರ್​ ಸ್ಟ್ರೋಕ್; ಸ್ಟಾರ್​ ಆಟಗಾರನಿಗೆ ಮಣೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾದ ಯುವ ಬ್ಯಾಟರ್​​ಗೆ ಸುವರ್ಣಾವಕಾಶ! ಸ್ಟಾರ್​ ಆಟಗಾರನಿಗೆ ಕೊಕ್​​

https://newsfirstlive.com/wp-content/uploads/2024/05/Team-India_m.jpg

Load More